ದಾವಣಗೆರೆ (Davanagere): ಸಾಲಬಾಧೆ ತಾಳಲಾರದೆ ಜೋಳಕ್ಕಿಡುವ ಗುಳಿಗೆ ನುಂಗಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಗುಮ್ಮನೂರು ಗ್ರಾಮದಲ್ಲಿ ಗುರುವಾರ ನಡೆದಿದೆ.
ಹನುಮಂತಪ್ಪ (42) ಆತ್ಮಹತ್ಯೆ ಮಾಡಿಕೊಂಡ ರೈತ. ಚಿತ್ರದುರ್ಗ ತಾಲ್ಲೂಕಿನ ದ್ಯಾಪನಹಳ್ಳಿ ಗ್ರಾಮದ ಜಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಸಾಲಬಾಧೆಯಿಂದ ಮನನೊಂದು ಜೋಳಕ್ಕಿಡುವ ಗುಳಿಗೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೂಡಲೇ ಸಂಬಂಧಿಕರು ಭರಮಸಾಗರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಷಿನ ಚಿಕಿತ್ಸೆಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮೃತ ರೈತನಿಗೆ ಪತ್ನಿ ಮಂಜಮ್ಮ, ತಾಯಿ ಚನ್ನಬಸಮ್ಮ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.
ತಾಲ್ಲೂಕಿನ ಕಂದನಕೋವಿ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ 65 ಸಾವಿರ ರೂ., ಪ್ರಾಥಮಿಕ ಕೃಷಿ ಪತ್ತಿನ ಸಹಕಾತ ಸಂಘದಲ್ಲಿ 70 ಸಾವಿರ ರೂ., ಖಾಸಗಿಯಾಗಿ 2 ಲಕ್ಷ ರೂ. ಸೇರಿದಂತೆ ಒಟ್ಟು 3.35 ಲಕ್ಷ ರೂ. ಸಾಲ ಮಾಡಿದ್ದರು.
ಎರಡು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಬೆಳೆ ಸಮೃದ್ಧಿಯಾಗಿತ್ತು. ಜಮೀನು ತಗ್ಗು ಪ್ರದೇಶದಲ್ಲಿದ್ದ ಜಾರಣ ಅತಿಯಾದ ಮಳೆಯಾಗಿ ಜಮೀನಿನಲ್ಲಿ ನೀರು ನಿಂತು ಮೆಕ್ಕೆಜೋಳ ಕೊಳತೆ ಹೋಗಿತ್ತು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆ ಕುರಿತು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read also : ತಾಲ್ಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಗಂಗಾಧರಯ್ಯ ಹಿರೇಮಠ