ದಾವಣಗೆರೆ : ಎನ್ಡಿಆರ್ ಎಫ್ ಮಾನದಂಡ ತಿದ್ದುಪಡಿ ಮಾಡಿ ಬೆಳೆ ನಷ್ಟದ ಸಂಪೂರ್ಣ ಹಣ ನೀಡಬೇಕು ಇಲ್ಲದಿದ್ದರೆ ಬರ. ಅತಿವೃಷ್ಟಿ ಮಳೆ ಹಾನಿ. ಒಳಗಾದ ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವ ನೀತಿ ಜಾರಿಗೆ ತರಬೇಕು ರೈತರ ಎಲ್ಲಾ ಬೆಳೆಗಳಿಗೂ ಅನ್ವಯವಾಗುವಂತ ನೀತಿ ಜಾರಿಗೆ ಬರಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೈನುಗಾರಿಕೆ ಮಾಡುವ ರೈತರಿಗೆ ಹಾಲಿನ ಪ್ರೋತ್ಸಾಹ ಧನ ಲೀಟರಿಗೆ ಐದು ರೂಪಾಯಿ ಎಂಟು ತಿಂಗಳಿಂದಲೂ ಸುಮಾರು 750 ಕೋಟಿ ಹಣ ಬಿಡುಗಡೆಯಾಗಿಲ್ಲ ಕೂಡಲೇ ಬಿಡುಗಡೆ ಮಾಡಿ ಹೈನುಗಾರಿಕೆ ಮಾಡುವ ರೈತರನ್ನು ರಕ್ಷಿಸಬೇಕು. ಪಸುಗಳ ತಿಂಡಿ .ಆಹಾರ.ಬೆಲೆ ದುಬಾರಿಯಾಗಿದೆ ಇದರಿಂದ ರೈತರು ಸಂಕಷ್ಟ ಪಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಶೇಕಡ 30ರಷ್ಟು ಕಬ್ಬು ಬೆಳೆ ಒಣಗಿ ಹೋಗಿದೆ ಉತ್ಪಾದನೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಬರ ಪರಿಹಾರ ನಷ್ಟದಲ್ಲಿ ಕಬ್ಬಿನ ಬೆಳೆಯನ್ನು ಪರಿಗಣಿಸಬೇಕು ಕಬ್ಬು ಬೆಳೆ ನಾಶವಾಗಿರುವ ರೈತರಿಗೂ ಬರ ಪರಿಹಾರ ಸಿಗುವಂತಾಗಬೇಕು. ಬರದಿಂದ ತತ್ತರಿಸಿರುವ ರೈತರಿಗೆ ಕೃಷಿ ಚಟುವಟಿಕೆ ಆರಂಭಿಸಲು ಗುಣಮಟ್ಟದ ರಸಗೊಬ್ಬರ . ಬಿತ್ತನೆ ಬೀಜ. ಸಿಗುವಂತೆ ಆಗಲು ಕೃಷಿ ಇಲಾಖೆ ತಕ್ಷಣವೇ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಭದ್ರಾ ಡ್ಯಾಮಿನ ನೀರು ಬಿಡುತ್ತೇವೆ ಎಂದು ಹೇಳಿ ಹುಷಿಗೂಳಿಸಿದ ಕಾರಣ 5ಸಾವಿರ ಎಕರೆ ಕಬ್ಬುನಾಶವಾಗಿದೆ ಹಾಗೂ ಅಡಿಕೆ ತೋಟದ ಬೆಳೆಗಳಾದ ಮಾವು. ಪಪ್ಪಾಯಿ. ಇತರೆ ಬೆಳೆಗಳು ನಾಶವಾಗಿದೆ ಅಕಾಲಿಕ ಮಳೆಯಿಂದ ಭತ್ತದ ಬೆಳೆಯು ಸಹ ನಾಶವಾಗಿದೆ . ರಾಜ್ಯ ಸರ್ಕಾರ ಮಳೆಯಶ್ರಿತ ಪ್ರದೇಶಗಳಿಗೆ ಮಾತ್ರ ಪರಿಹಾರ ನೀಡಿದೆ ಪಂಪ್ ಸೆಟ್ ಆಧಾರಿತ ಹಾಗೂ ಭದ್ರಕಾಲುವೆ ಆಧಾರಿತ ಬೆಳೆಗಳು ಹೆಚ್ಚುವರಿಯಾಗಿ ಜಿಲ್ಲೆಯಲ್ಲಿ 20ಸಾವಿರ ಹಣಕಾಸಿನ ಹೆಕ್ಟರ್ ಬೆಳೆ ನಾಶವಾಗಿದೆ ಎಲ್ಲಾ ಬೆಳೆಗಳಿಗೂ ಪರಿಹಾರ ಕನಿಷ್ಠ 30 ಸಾವಿರ ರೂಗಳನ್ನು ನೀಡಬೇಕು ಎಂದು ರಾಜ್ಯ ರೈತ ಸಂಘದ ಸಂಚಾಲಕ ಬಲ್ಲೂರ್ ರವಿಕುಮಾರ್ ಆಗ್ರಹಿಸಿದರು.
ಗ್ರಾಮೀಣ ಜನರ ಹೆಸರಿನಲ್ಲಿ ಆರಂಭವಾದ ಗ್ರಾಮೀಣ ಬ್ಯಾಂಕ್ ರೈತರಿಗೆ ಹೆಚ್ಚು ಕಿರುಕುಳ ವಂಚನೆ ನಡೆಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ರೈತರನ್ನ ಬಿಕ್ಷುಕರಂತೆ ಕಾಣುತ್ತಿದೆ ಕೂಡಲೇ ಬ್ಯಾಂಕಿನ ಸಾಲ ನೀತಿ ಬದಲಾಗಬೇಕು. ಕೃಷಿ ಜಮೀನಿನ ಮೌಲ್ಯಕ್ಕೆ ಅನುಗುಣವಾಗಿ ಸಾಲ ನೀಡುವಂತಹ ವ್ಯವಸ್ಥೆ ಜಾರಿಗೆ ಬರಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಮಾಧವ ರೆಡ್ಡಿ ತಿಳಿಸಿದರು.
ರಾಜ್ಯ ರೈತ ಸಂಘದ ಚೂನಪ್ಪ ಪೂಜಾರಿ ಮಾತನಾಡಿ. ರಾಜ್ಯದಲ್ಲಿ 223 ತಾಲೂಕು ಬರಗಾಲ ಎಂದು ಬರಗಾಲ ಘೋಷಣೆ ಮಾಡಿ 70 ಲಕ್ಷ ರೈತರ ಪೈಕಿ 27 ಲಕ್ಷ ರೈತರಿಗೆ ಮಾತ್ರ ಪರಿಹಾರ ನೀಡಿ ಶೇಕಡ 60ರಷ್ಟು ರೈತರನ್ನ ರಾಜ್ಯ ಸರ್ಕಾರ ವಂಚಿಸಿದೆ ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಅರ್ ಜಿ ಬಸವರಾಜ್. ಅಂಜನಪ್ಪ ಪೂಜಾರ. ಅತ್ತಹಳ್ಳಿ ದೇವರಾಜ್ .ಸುರೇಶ್ ಪಾಟೀಲ್ . ಶಿವಕುಮಾರ್ ಇತರರು ಇದ್ದರು.