ದಾವಣಗೆರೆ (Davanagere):ಒಂದು ಸಮುದಾಯ ಗುರಿಯಾಗಿಸಿ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ, ಸಿ.ಟಿ.ರವಿ ಮತ್ತು ಭಾಷಣಕಾರ ಸೂಲಿಬೆಲೆ ಚಕ್ರವರ್ತಿ ಅವಮಾನಿಸುವ ಹೇಳಿಕೆ ನೀಡಿದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಪದಾಧಿಕಾರಿಗಳು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಅವರಿಗೆ ದೂರು ನೀಡಿದರು.
ಸಮಾಜದಲ್ಲಿ ಸಾಮರಸ್ಯ ಕದಡುವ ಹೇಳಿಕೆ ನೀಡಿದ್ದರಿಂದ ಸಮಾಜದ ಸಾಮರಸ್ಯ ಹಾಳಾಗುತ್ತಿದ್ದು ಕೂಡಲೇ ಈ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
Read also : Davanagere | ಒಳಮೀಸಲಾತಿ ಜಾರಿಗೆ ಅಡ್ಡಿ ಬೇಡ : ದಲಿತ ಸಂಘಟನೆಗಳ ಒಕ್ಕೂಟ
ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಅಬ್ದುಲ್ ಘನಿ ತಾಹೇರ್, ಇಸ್ಮಾಯಿಲ್ ಖಾನ್, ವಕೀಲರಾದ ಹನೀಫ್, ಖಲೀಲ್, ನಿವೃತ್ತ ಎಎಸ್ಐ ನಬಿ ಖಾನ್, ಕಲಾಂ ಉಪಸ್ಥಿತರಿದ್ದರು.