ಚನ್ನಗಿರಿ (Channagiri): ಹಳೇಯ ದ್ವೇಷದಿಂದಾಗಿ ವ್ಯಕ್ತಿಯೊರ್ವನನ್ನು ಹಾಡು ಹಗಲೇ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿ ಆದೇಶ ಹೊರಡಿಸಿದೆ.
ಚನ್ನಗಿರಿ ಪಟ್ಟಣದ ಮೊಹಮ್ಮದ ಸಲೀಂ ಶಿಕ್ಷೆಗೊಳಗಾದ ಆರೋಪಿ. ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಮಹ್ಮದ್ ಜಾಕೀರ್ ಕೊಲೆಯಾದ ಬಸ್ ಏಜೆಂಟ್.
2022ರ ಜೂನ್ 21ರಂದು ಎಂದಿನಂತೆ ಬೆಳಗ್ಗದೆ 8.30 ಗಂಟೆಗೆ ಮನೆಯಿಂದ ಹೊರಟು ಚನ್ನಗಿರಿಯ ಕೈಮರದ ವೃತ್ತದ ಬಳಿ ಬಸ್ ನಿಂದ ಇಳಿದಾಗ ಮೊಹಮ್ಮದ್ ಸಲೀಂ ಹಳೆಯ ದ್ವೇಷದಿಂದ ಹಲವು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ಈ ಕುರಿತು ಮೃತ ಮಹ್ಮದ್ ಜಾಕೀರ್ ಪತ್ನಿ ರೇಷ್ಮಾಬಾನು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಚನ್ನಗಿರಿ ಪೊಲೀಸ್ ಠಾಣೆಯ ಸಿಪಿಐ ಪಿ.ಬಿ.ಮಧು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಸಂಬಂಧ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಎಚ್ .ಅಣ್ಣಯ್ಯ ಅವರು ಆರೋಪಿ ಮೇಲೆ ಆರೋಪ ಸಾಬೀತಾಗಿದ್ದರಿಂದ ಬುಧವಾರ ಆರೋಪಿ ಮೊಹಮ್ಮದ್ ಸಲೀಂಗೆ ಜೀವಾವಧಿ ಕಾರಾಗೃಹ ಶಿಕ್ಷೆ, 10,000 ದಂಡ ವಿಧಿಸಿದ್ದು, ಸದರಿ ಆರೋಪಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದುದ್ದರಿಂದ ಸದರಿ ಬಂಧನದ ಅವಧಿಯನ್ನು ಪರಿಗಣಿಸಿ ಶಿಕ್ಷಾ ಅವಧಿಯನ್ನು ಸೆಟ್ ಆಫ್ ಮಾಡಿ ಇನ್ನುಳಿದ ಶಿಕ್ಷೆಯನ್ನು ಆರೋಪಿಯು ಅನುಭವಿಸುವಂತೆ ಆದೇಶಿಸಿದ್ದಾರೆ.
Read also : ಕರ್ನಾಟಕದಲ್ಲಿ ಅಡಿಕೆ ಮಂಡಳಿ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ಪರ‍್ಯಾದಿಯವರ ಪರವಾಗಿ ಸರ್ಕಾರಿ ವಕೀಲರಾದ ಎ.ಎಸ್.ಸತೀಶ್ ನ್ಯಾಯ ಮಂಡನೆ ಮಾಡಿದ್ದಾರೆ.