ಬೆಂಗಳೂರು : ನಟಿ ಭಾವನಾ ರಾಮಣ್ಣ ಅವರ ಹೂವು ಫೌಂಡೇಶನ್ ಫಾರ್ ಆರ್ಟ್ಸ್ ಸಂಸ್ಥೆ ವತಿಯಿಂದ ಅಗಸ್ಟ್ 7 ಮತ್ತು 8ರಂದು ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ “ವರ್ಣ ಸ್ಪರ್ಧೆ” ಎಂಬ ಶೀರ್ಷಿಕೆ ಅಡಿಯಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಭರತನಾಟ್ಯದ ಪಠ್ಯದಲ್ಲಿರುವಂತಹ ವರ್ಣ ನೃತ್ಯವನ್ನು ಮಾತ್ರ ಈ ಸ್ಪರ್ಧೆಯಲ್ಲಿ ಅಂಗೀಕರಿಸಲಾಗಿದೆ.
ಸಂಸ್ಥೆಯು ಹಲವು ವರ್ಷಗಳಿಂದ ಕಲೆ ಮತ್ತು ಕಲಾವಿದರ ಏಳ್ಗೆಗಾಗಿ ಹತ್ತಾರು ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದೆ. ಅದರಂತೆ ಈ ವರ್ಷವು ಸಹ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸ್ಪರ್ಧೆಯ ವಿಜೇತರಿಗೆ ಮೊದಲ ಬಹುಮಾನ 1ಲಕ್ಷ ರೂಪಾಯಿ ಬಹುಮಾನ, ಎರಡನೇ ಬಹುಮಾನ 50 ಸಾವಿರ ರೂಪಾಯಿ ಮತ್ತು ತೃತೀಯ ಬಹುಮಾನ 30 ಸಾವಿರ ರೂಪಾಯಿ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಇದೇ ತಿಂಗಳು 25 ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಸುವವರು ನೇರವಾಗಿ ನಮ್ಮ ವೆಬ್ಸೈಟ್ hoovufoundation.com ಮೂಲಕ ಅರ್ಜಿ ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಚಾರುಮತಿ 9901305155 ಮತ್ತು ಪ್ರೇಮ್ ಕುಮಾರ್ 7483490143 ಸಂಖ್ಯೆಗೆ ಕರೆ ಮಾಡಬಹುದು