ದಾವಣಗೆರೆ (Davanagere): ಸರ್ವೋಚ್ಛ ನ್ಯಾಯಾಲಯ ಒಳಮೀಸಲಾತಿ ನೀಡುವುದು ರಾಜ್ಯ ಸರ್ಕಾರಕ್ಕೆ ಹಕ್ಕಿದೆ ಎಂದು ಪೀಠವು ತೀರ್ಪು ನೀಡಿರುವ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿ ಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಕರ್ನಾಟಕ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಹಾಗೂ ಮಾದಿಗ ದಂಡೋರ ಸಮಿತಿ, ದಲಿತ ಸಂಘರ್ಷ ಸಮಿತಿಗಳು, ಮೀಸಲಾತಿ ಹೋರಾಟಗಾರರು ಮೂರು ದಶಕಗಳ ಕಾಲ ಒಳ ಮೀಸಲಾತಿಗಾಗಿ ರಾಜ್ಯದಲ್ಲಿ ನಿರಂತರ ಪ್ರತಿಭಟನೆಗಳನ್ನು ಮಾಡುತ್ತಾ ಸರ್ಕಾರಕ್ಕೆ ಹಕ್ಕುಗಳನ್ನು ಸಲ್ಲಿಸುತ್ತಾ ಬಂದಿದ್ದರು ಕೂಡ ವಿವಿಧ ರಾಜಕೀಯ ಪಕ್ಷಗಳ ಸರ್ಕಾರಗಳು ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿರಲಿಲ್ಲ ಎಂದು ಮುಖಂಡರು ಅಸಮಾಧಾನ ಹೊರ ಹಾಕಿದರು.
ಕಳೆದ ಬಾರಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಶೇಕಡ 15%ರಷ್ಟಿದ್ದ ಮೀಸಲಾತಿಯನ್ನು 17%ಕ್ಕೆ ಏರಿಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ತದನಂತರ ಸುಪ್ರೀಂ ಕೋರ್ಟ್ ಪೀಠದ 7 ಜನ ನ್ಯಾಯಾಧೀಶರು ಒಳ ಮೀಸಲಾತಿಯ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಹೆಚ್ಚುವರಿ ಮಾಡಿ ಮೀಸಲಾತಿ ವಂಚಿತರಿಗೆ ಅವಕಾಶ ಮಾಡಿಕೊಡಬೇಕೆಂದು ಸ್ಪಷ್ಟ ನಿರ್ದೇಶನದ ಆದೇಶವಿದ್ದರೂ ಕೂಡ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಇದುವರೆಗೂ ಒಳ ಮೀಸಲಾತಿಯನ್ನು ಜಾರಿ ಮಾಡಿರುವುದಿಲ್ಲ ಹಾಗೂ ಈಗಾಗಲೇ ತರಾತುರಿಯಲ್ಲಿ ರಾಜ್ಯ ಸರ್ಕಾರ ಬ್ಯಾಕ್ಲ್ಯಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದ್ದು ತಕ್ಷಣವೇ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಿ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
Read also : DAVANAGERE NEWS | ವರದಕ್ಷಿಣೆ ಸಾವು ಪ್ರಕರಣ: ಆರೋಪಿಗೆ 07 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟಗಾರರಾದ ನಿವೃತ್ತ ಜಿಲ್ಲಾ ರಕ್ಷಣಾಧಿಕಾರಿ ರವಿ ನಾರಾಯಣ, ಪ್ರೋ. ಮಲ್ಲಿಕಾರ್ಜುನ, ಕುಬೇರಪ್ಪ ಗೌರಿಪುರ, ತಮ್ಮಣ್ಣ ಹೊನ್ನಾಳಿ, ಮಲ್ಲೇಶಪ್ಪ ಹೆಚ್. ಹರಿಹರ, ಮಂಜಪ್ಪ ಎಂ.ಹೆಚ್. ಕೆಂಚಿಕೊಪ್ಪ, ನರಸಿಂಹಪ್ಪ ಎ.ಕೆ. ಗೋವಿನಕೋವಿ, ನಿರಂಜನ್ರವರು ಹಾಗೂ ಕಿರಣ್, ಮಂಜಣ್ಣ ಮಾರಿಕೊಪ್ಪ, ಕುಮಾರ್ ಚೀಲೂರು, ರಾಜು ಎ.ಕೆ. ಗೊಲ್ಲರಳ್ಳಿ, ರಂಗನಾಥ್ ಬೆಳಗುತ್ತಿ ಹನುಮಂತಪ್ಪ ಕಾನನಕಟ್ಟೆ, ದಾವಣಗೆರೆ ಚಂದ್ರಪ್ಪ, ಮಲ್ಲೇಶಪ್ಪ, ಆಂಜನೇಯ, ರಾಜು ಗೋಲ್ಲರಹಳ್ಳಿ ಹಾಗೂ ಇತರರು ಸಮಾಜದ ಬಂಧುಗಳು ಉಪಸ್ಥಿತರಿದ್ದರು