ದಾವಣಗೆರೆ ; ಟಿ.ಡಿ.ಪಿ ಮತ್ತು ಜೆ.ಡಿ.ಯು ಪಕ್ಷದ ಅಧ್ಯಕ್ಷರು ಪ್ರಧಾನಿಯಾಗಿ ನರೇಂದ್ರ ಮೋದಿಯವರನ್ನು ನೇಮಕ ಮಾಡಲು ಬೆಂಬಲ ನೀಡಬಾರದು ಎಂದು ಉಮ್ಮತ್ ಚಿಂತಕರ ವೇದಿಕೆ ಅಧ್ಯಕ್ಷ ಅನೀಸ್ ಪಾಷ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿ.ಡಿ.ಪಿ ಮತ್ತು ಜೆ.ಡಿ.ಯು ಪಕ್ಷಗಳು ನಿರಂತರವಾಗಿ ಕೋಮುವಾದವನ್ನು ಧಿಕ್ಕರಿಸಿ ಜಾತ್ಯತೀತ, ಸಾಮಾಜಿಕ ನ್ಯಾಯ, ಭಾರತದ ಏಕತೆ ಮತ್ತು ಅಖಂಡತೆಗಾಗಿ ಅದರಲ್ಲೂ ಪ್ರಮುಖವಾಗಿ ಧ್ವನಿ ಇಲ್ಲದ ದಲಿತ ಮತ್ತು ಅಲ್ಪಸಂಖ್ಯಾತರ ಪರವಾಗಿ ನಿಂತಿರುವ ಪಕ್ಷಗಳಾಗಿವೆ ಎಂದರು.
ಇತಿಹಾಸವನ್ನು ಗಮನಿಸಿದರೆ, ಬಿ.ಜೆ.ಪಿ ಪಕ್ಷವು ಪ್ರತಿ ಹಂತದಲ್ಲೂ ಕೋಮುದೃವೀಕರಣ ಮಾಡುತ್ತಾ ದ್ವೇಷ ಭಾಷಣಗಳಿಂದ ಮುನ್ನೆಲೆಗೆ ಬಂದಿದೆ. ಪ್ರಮುಖವಾಗಿ ರಥಯಾತ್ರೆ, ಗೋದ್ರಾ ಹತ್ಯಾಕಾಂಡ, ಮುಜಾಫರ್ ನಗರ ದೊಂಬಿ, ಭೀಮಕೋರೆಗಾವ್ ಘಟನೆ ಹೀಗೆ ಹಲವು ಘಟನೆಗಳನ್ನು ಗಮನಿಸಿದರೆ, ಮೇಲ್ನೋಟಕ್ಕೆ ವಾಸ್ತವಾಂಶ ಕಂಡು ಬರುತ್ತದೆ ಎಂದರು.
ದೇಶದ ಒಂದು ಭಾಗವಾಗಿರುವ ಮುಸ್ಲಿಂ ಸಮುದಾಯವನ್ನು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ದೇಶಪ್ರೇಮಿಗಳನ್ನು ನುಸುಳು ಕೋರರು ಎಂದು ನೇರವಾಗಿ ತುಚ್ಚ ಮನೋಭಾವದಿಂದ ಅಪವಾದ ಮಾಡಿದ್ದು ತಪ್ಪೆಂದು ಅರಿವಿದ್ದರೂ ಕೂಡ ಮುಸ್ಲಿಂ ಸಮಾಜದ ಕ್ಷಮೆಯನ್ನೂ ಕೇಳದ ಮುಸಲ್ಮಾನರ ವಿರುದ್ಧ ದ್ವೇಷವನ್ನು ಹೊಂದಿದ ವ್ಯಕ್ತಿ ಪ್ರಧಾನಿಯಾದರೆ, ಯಾವ ರೀತಿ ನಡೆಸಿಕೊಳ್ಳಬಹುದು
ಆದ್ದರಿಂದ ಸಮಾಜವಾದಿ ಚಿಂತನೆಯನ್ನು ಹೊಂದಿರುವ, ಎಲ್ಲರನ್ನು ಸಮಾನವಾಗಿ ಕಾಣುವ ಎರಡು ಪಕ್ಷದ ಅಧ್ಯಕ್ಷರಾದ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ರವರು ಯಾವುದೇ ಕಾರಣಕ್ಕೂ ಮಾನ್ಯ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಆರಿಸಲು ಬೆಂಬಲ ನೀಡಬಾರದೆಂದು ಕಳಕಳಿಯ ಮನವಿಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಸೀಮಾ ಬಾನು,ಅಲ್ಲಾಭಕ್ಷ್,ಆದಿಲ್ ಖಾನ್ ಉಪಸ್ಥಿತರಿದ್ದರು.