Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಜಿಜಿಎಂಎಸ್ ಕ್ಲಸ್ಟರ್ ನ ಕಲಿಕಾ ಹಬ್ಬ…
ತಾಜಾ ಸುದ್ದಿ

ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಜಿಜಿಎಂಎಸ್ ಕ್ಲಸ್ಟರ್ ನ ಕಲಿಕಾ ಹಬ್ಬ…

Dinamaana Kannada News
Last updated: January 10, 2026 3:05 pm
Dinamaana Kannada News
Share
Davanagere
SHARE

ದಾವಣಗೆರೆ : ಅಕ್ಷರ ಕಿರೀಟ, ಅಕ್ಷರಮಾಲೆ, ಅಕ್ಷರ ಹೂದಾನಿ, ಅಕ್ಷರ ಗೊಂಬೆಗಳು, ಅಕ್ಷರ ದೀಪ, ಸರ್ವಂ….ಅಕ್ಷರ ಮಯಂ… ಇಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾದದ್ದು  ಜಿ ಜಿ ಎಂ ಎಸ್ ಕ್ಲಸ್ಟರ್ ನ  ಕಲಿಕಾ ಹಬ್ಬದಲ್ಲಿ.

ಶಾಲಾ ಶಿಕ್ಷಣ ಇಲಾಖೆಯ 2025 26 ನೇ ಸಾಲಿನ ಎಫ್ ಎಲ್ ಎನ್ ಕಲಿಕಾ ಹಬ್ಬವು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರದಲ್ಲಿ ಜರುಗಿತು.

seem1 dinamaana ads

ಜಿ ಜಿ ಎಂ ಎಸ್ ಕ್ಲಸ್ಟರ್ ನ ಸರ್ಕಾರಿ ಶಾಲೆಗಳು ಈ  ಹಬ್ಬದಲ್ಲಿ ಪಾಲ್ಗೊಂಡಿದ್ದವು. ಶಾಲೆಯು ಅಕ್ಷರಗಳಿಂದ ಅಲಂಕೃತಗೊಂಡಿದ್ದು ಅಕ್ಷರ ಹಬ್ಬವಾಗಿ ಕಂಗೊಳಿಸುತ್ತಿತ್ತು.

ಅಕ್ಷರ ಛತ್ರಿಯನ್ನು ಹಿಡಿದು, ಅಕ್ಷರ ದೀಪ ಹಚ್ಚುವ ಮೂಲಕ ಕಾರ್ಯಕ್ರಮವನ್ನು ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಆರ್ ವಿಶಾಲಾಕ್ಷಿ ಉದ್ಘಾಟಿಸಿ ಚಿನ್ನಕ್ಕಿಂತ ಅಕ್ಷರ ಲೇಸು ಎಂಬ ಕಿವಿ ಮಾತನ್ನು ಮಕ್ಕಳಿಗೆ ಹೇಳುವ ಮೂಲಕ ಅಕ್ಷರ ಹಾರದ ಮಹತ್ವವನ್ನು ವಿವರಿಸಿದರು.

ಎಫ್ಎಲ್ ಎನ್ ಕಲಿಕಾ ಹಬ್ಬದ ಉದ್ದೇಶವನ್ನು ತಿಳಿಸುವುದರೊಂದಿಗೆ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು.

ದಾವಣಗೆರೆ ಉತ್ತರ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಪಸೀಹ್ ಉದ್ದೀನ್ ಶಾಕೀರ್ ಅವರು ಕಲಿಕಾ ಹಬ್ಬದ ವಿವಿಧ ಆಯಾಮಗಳನ್ನು  ತಿಳಿಸಿಕೊಟ್ಟರು ಚಟುವಟಿಕೆಗಳ ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲಾಖೆಯ ಮೇಲುಸ್ತುವಾರಿ ಅಧಿಕಾರಿಗಳು, ಸ್ಥಳೀಯ ಮುಖಂಡರು, ಪೋಷಕರು ಉಪಸ್ಥಿತರಿದ್ದರು.

ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಲಕ್ಷೀ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸರ್ಕಾರಿ ಶಾಲೆಗಳಲ್ಲಿರುವ ಸಿಗುವ ಸೌಲಭ್ಯಗಳ ಮಾಹಿತಿಯನ್ನು ಪ್ರದರ್ಶನ ಮಾಡಲಾಗಿತ್ತು.

Read also : ವಸತಿ ಶಾಲೆಗಳನ್ನು ತೆರೆದು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿ : ಶಾಸಕ ಕೆ.ಎಸ್.ಬಸವಂತಪ್ಪ ಆಶಯ

ಕಥೆ ಹೇಳುವುದು, ಸಾಲಡ್ ತಯಾರಿಕೆ, ಗಟ್ಟಿ ಓದು, ಜ್ಞಾಪಕ ಪರೀಕ್ಷೆ, ಸುಂದರ ಕೈಬರಹ, ಸಂತೋಷದಾಯಕ ಗಣಿತ, ವಿಶೇಷವಾಗಿ ಪೋಷಕ ಮತ್ತು ಮಕ್ಕಳ ಸಹ ಸಂಬಂಧ ಚಟುವಟಿಕೆ, ಇದರ ಜೊತೆಗೆ ಗರಿಷ್ಠ ಮಗ್ಗಿ ಹೇಳುವ ಚಟುವಟಿಕೆಯನ್ನು ಆಯೋಜಿಸಲಾಗಿತ್ತು, ಪೋಷಕ ಮಕ್ಕಳ ಸಹಕಾರದೊಂದಿಗೆ ಆಡುವ ಆಟ ಅತ್ಯಂತ ಸಂತೋಷದಾಯಕವಾಗಿತ್ತು, ಎಲ್ಲರಿಗೂ ಸಿಹಿ ಅಡುಗೆ ಊಟ ಏರ್ಪಡಿಸಲಾಗಿತ್ತು.

ಮಕ್ಕಳು ಉತ್ತರ ಕರ್ನಾಟಕ ಶೈಲಿಯಲ್ಲಿ ಎಫ್ಎಲ್ಎನ್ ಕಲಿಕಾ ಹಬ್ಬವನ್ನು ಸಂಭಾಷಣೆ ಮೂಲಕ ಪರಿಚಯಿಸಿದರು.  ಸ್ವಾಗತ ನೃತ್ಯ ಮಾಡಿದರು.

ಕಾರ್ಯಕ್ರಮದ ರೂವಾರಿಯಾದ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿಗಳಾದ   ನಾಗರಾಜ ಹೆಚ್, ರವರು ಸರ್ವರನ್ನು ಸ್ವಾಗತಿಸುವುದರೊಂದಿಗೆ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಮುಖ್ಯ ಶಿಕ್ಷಕರಾದ  ವಾಣಿ ರವರು ವಂದಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು  ಶಿಕ್ಷಕಿ ತೇಜಸ್ವಿನಿ  ನಡೆಸಿಕೊಟ್ಟರು.

job news dinamaana ads
TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagwere ವಸತಿ ಶಾಲೆಗಳನ್ನು ತೆರೆದು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿ : ಶಾಸಕ ಕೆ.ಎಸ್.ಬಸವಂತಪ್ಪ ಆಶಯ
Next Article Davanagere ಶಾಲಾ,ಕಾಲೇಜುಗಳ ಬಳಿ ಗುಟ್ಕಾ ಮತ್ತು ತಂಬಾಕು ಮಾರಾಟ :73 ಸಾವಿರ ರೂ ದಂಡ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಚುನಾವಣೆ ಯಶಸ್ವಿಯಾಗಲು ಅಣಕು ಮತದಾನದಲ್ಲಿ ಸಿಆರ್‍ಸಿ ಅತ್ಯವಶ್ಯ

ದಾವಣಗೆರೆ :  ಲೋಕಸಭಾ ಚುನಾವಣೆ ಮತದಾನವು ಮೇ 7 ರಂದು ನಡೆಯಲಿದೆ. ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮಾಡಲಾಗುತ್ತಿದ್ದು ಮತದಾನ…

By Dinamaana Kannada News

UPI ವಹಿವಾಟಿಗೆ GST: ಕರ್ನಾಟಕ ಬಂದ್‌ಗೆ ಸಿದ್ಧತೆ

GST ನೋಟಿಸ್‌ ಜಾರಿ ಖಂಡಿಸಿ ರಾಜ್ಯ ವ್ಯಾಪಾರಿಗಳು ಇದೆ 25 ರಂದು ಕರ್ನಾಟಕ ಬಂದ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ. 2021-22ರ ಆರ್ಥಿಕ…

By Dinamaana Kannada News

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 53 :  ಹಸಿವನ್ನೇಕೆ ಬಂಧಿಸದೆ ಬಿಟ್ಟು ಹೋದರು..?

Kannada News | Sanduru Stories | Dinamaana.com | 13-06-2024 ಜನರೇಟರು ಸದ್ದಿಗೆ ರಾತ್ರಿಯೆಲ್ಲ ನಿದ್ದೆಯಿಲ್ಲ (Sanduru Stories)…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಯುವಜನರಲ್ಲಿ ಆರೋಗ್ಯ ಅರಿವು, ಸಾಮಾಜಿಕ ಹೊಣೆಗಾರಿಕೆ ಅವಶ್ಯ : ಡಾ.ಬಿ.ಡಿ.ಮುರುಳಿಧರ

By Dinamaana Kannada News
Davanagere
ತಾಜಾ ಸುದ್ದಿ

ಹಜರತ್ ಮೌಲಾನಾ ಸಗೀರ್ ಅಹಮದ್ ಖಾನ್ ರಶಾದಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆೆ ತರಬೇತಿ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಫಾಸ್ಟ್ ಫುಡ್ ತಯಾರಿಕೆ ಉಚಿತ ತರಬೇತಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?