ದಾವಣಗೆರೆ (Davanagere): ತಾನು ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿಯೇ ಬಂಗಾರದ ಆಭರಣಗಳನ್ನು ಕದ್ದು ಬೇರೆ ಬ್ಯಾಂಕ್‍ಗಳಲ್ಲಿ ಅಡವಿಟ್ಟು ಕೋಟ್ಯಾಂತರ ರೂ ಸಾಲ ಪಡೆದಿದ್ದ ಬ್ಯಾಂಕ್ ನೌಕರರನ್ನು ಕೆಟೆಜೆ ನಗರ ಪೊಲೀಸರು ಬಂಧಿಸಿದ್ದಾರೆ.
ಸಂಜಯ್ ಬಂಧಿತ ಆರೋಪಿ. ಬಂಧಿತನಿಂದ 3.5 ಕೆಜಿ ಅಧಿಕ ತೂಕದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೇವರಾಜು ಅರಸು ಬಡಾವಣೆಯಲ್ಲಿನ ಸಿಎಸ್‍ಬಿ ಬ್ಯಾಂಕಿನಲ್ಲಿ ಕಳೆದ ಏಪ್ರಿಲ್‍ನಲ್ಲಿ ವಾರ್ಷಿಕ ಲೆಕ್ಕ ಪತ್ರ ಪರಿಶೀಲನೆ ವೇಳೆ ಬ್ಯಾಂಕಿನ ಸಿಬ್ಬಂದಿಗಳಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಬ್ಯಾಂಕಿನ ಮ್ಯಾನೇಜರ್ ಶಿವಕುಮಾರ್ ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ವೇಳೆ ಬ್ಯಾಂಕಿನ ಗೋಲ್ಡ್ ಲೋನ್ ವಿಭಾಗದ ಸಿಬ್ಬಂದಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಬಿಸಿಎ ಪದವೀಧರನಾದ ಸಂಜಯ್ ಮುತ್ತೂಟ್ ಫೈನಾನ್ಸ್ ಸೇರಿದಂತೆ ಇತರೆ ಖಾಸಗಿ ಫೈನಾನ್ಸ್‍ಗಳಲ್ಲಿ ಕಾರ್ಯನಿರ್ವಸಿದ್ದ. ಆದರೆ ಸಿಎಸ್‍ಬಿ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದ 6 ತಿಂಗಳಲ್ಲಿಯೇ ಅಲ್ಲಿನ ಆಭರಣಗಳನ್ನು ಕದ್ದು, ನಕಲಿ ಆಭರಣಗಳನ್ನು ಇಟ್ಟು ಅದರ ಮೇಲೂ ಲೋನ್ ಪಡೆದಿದ್ದ. ಗೋಲ್ಡ್ ಲೋನ್ ವಿಭಾಗದಲ್ಲಿ ಈತನೇ ಮುಖ್ಯ ಸಿಬ್ಬಂದಿಯಾದ ಕಾರಣದಿಂದ ಬ್ಯಾಂಕಿನ ಆಡಳಿತ ಮಂಡಳಿಗೆ ಆತನ ಕೃತ್ಯದ ಬಗ್ಗೆ ತಿಳಿದಿಲ್ಲ. ಆದರೆ ಆಡಿಟ್ ಮಾಡುವಾಗ ಬಂಗಾರದಲ್ಲಿ ವ್ಯತ್ಯಾಸ ಕಂಡು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕಿನ ಗ್ರಾಹಕರು ಅಡಮಾನ ಮಾಡಿದ ಸಾಲದ ಖಾತೆಗಳಲ್ಲಿನ ಒಟ್ಟು 1 ಕೋಟಿ 86 ಲಕ್ಷದ 22 ಸಾವಿರ ರೂ ಬೆಲೆ ಬಾಳುವ 3157.10 ಗ್ರಾಂ ತೂಕದ ಆಭರಣಗಳನ್ನು ಬ್ಯಾಂಕಿಗೆ ನಂಬಿಕೆ ದ್ರೋಹ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುವುದಲ್ಲದೇ ಬ್ಯಾಂಕಿನ ಗಮನಕ್ಕೆ ಬಾರದ ಹಾಗೇ ತನ್ನ ಸ್ನೇಹಿತರು, ಹಿತೈಷಿಗಳು, ಬಂಧುಗಳ ಹೆಸರಿನಲ್ಲಿ ನಕಲಿ ಬಂಗಾರದ ಆಭರಣಗಳನ್ನು ಅಡಮಾನ ಮಾಡಿ 2 ಕೋಟಿರೂ ಗೂ ಅಧಿಕ ಸಾಲ ಮಂಜೂರು ಮಾಡಿಸಿ ಮೋಸ ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
Read also : Davanagere | ಸ್ವಯಂ ಪ್ರೇರಿತ ರಕ್ತದಾನ ಶಿಬಿರ : ಡಾ. ಬಿ ಆರ್ ರವಿಕಾಂತೇಗೌಡ ಚಾಲನೆ
ಕಳವು ಮಾಡಿದ ಆಭರಣಗಳನ್ನು ನಗರದ ಫೆಡರಲ್ ಬ್ಯಾಂಕ್, ಫೆಡ್ ಬ್ಯಾಂಕ್ ಹಾಗೂ ಪಿ.ಬಿ.ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಲೋನ್ ಫೈನಾನ್ಸ್ ಶಾಖೆಯಲ್ಲಿ ಅಡಮಾನ ಮಾಡಿದ್ದ ಸಾಲ ಪಡೆದಿದ್ದ. ಇಷ್ಟು ಮೊತ್ತದ ಬಂಗಾರದ ಆಭರಣಗಳನ್ನು ಒಬ್ಬನೇ ವ್ಯಕ್ತಿ ಖಾಸಗಿ ಫೈನಾನ್‍ಗಳಲ್ಲಿ ಅಡಮಾನ ಇಡಲು ಅವಕಾಶವಿಲ್ಲ. ಆದರೂ ಈ ಫೈನಾನ್ಸ್ನವರು ನಿಯಮ ಮೀರಿರುವುದು ಕಂಡು ಬಂದಿದ್ದು, ಈ ಪ್ರಕರಣದಲ್ಲಿ ಅವರ ವಿರುದ್ಧ ಕೂಡ ದೂರು ದಾಖಲಿಸಿ ತನಿಖೆ ನಡೆಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಹೆಚ್ಚುವರಿ ಎಸ್ಪಿಗಳಾದ ವಿಜಯ್ ಕುಮಾರ್ ಸಂತೋμï,ಮಂಜುನಾಥ್, ಉಪಾಧೀಕ್ಷಕ ಶರಣ ಬಸವೇಶ್ವರ ಇತರರು ಉಪಸ್ಥಿತರಿದ್ದರು.