ದಾವಣಗೆರೆ (Davanagere) : ಸರಸ್ವತಿ ನಗರ ಎಸ್‍ಎಸ್ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಮಾರ್ಗ ಮಧ್ಯೆದಲ್ಲಿ ಗುಂಡಿ ಬಿದ್ದಿದ್ದರೂ ಮುಚ್ಚದೆ ನಿರ್ಲಕ್ಷ್ಯ ಮಾಡಿರುವುದನ್ನು ಖಂಡಿಸಿ ಸುವರ್ಣ ಕರ್ನಾಟಕ ವೇದಿಕೆ ಪ್ರತಿಭಟನೆ ನಡೆಸಿದರು.
ಕಳೆದ 20 ದಿನಗಳಿಂದ ಈ ಅವ್ಯವಸ್ಥೆ ಕಂಡು ಬಂದರು ಅಲ್ಲಿಯ ಜನ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಈ ಕಡೆ ಗಮನಹರಿಸಿರುವುದಿಲ್ಲ. ದಿನ ನಿತ್ಯ ನೂರಾರು ವಾಹನಗಳು ಸಂಚರಿಸಲು ಮತ್ತು ಶಾಲಾ ಮಕ್ಕಳು ಸಾರ್ವಜನಿಕರು ಓಡಾಡಲು ತೊಂದರೆ ಆಗುತ್ತಿದ್ದು, ಜನಪ್ರತಿನಿಧಿಗಳ ಗಮನಕ್ಕೆ ತಂದರು ನಿರ್ಲಕ್ಷ ವಹಿಸಿರುತ್ತಾರೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತು ಪರಿಶೀಲಿಸಿ ಸುಗಮ ಸಂಚಾರಕ್ಕೆ ಸರಿಪಡಿಸಿಕೊಡಬೇಕೆಂದು ಒತ್ತಾಯಿಸಲಾಯಿತು.
ಸಂಸ್ಥಾಪಕ ರಾಜ್ಯಾಧ್ಯಕ್ಷ ಸಂತೋಷ ಕುಮಾರ್ ಆರ್, ರಾಜ್ಯ ಸಂಚಾಲಕ ಶಾಂತಕುಮಾರ್ ದೊಡ್ಡಮನಿ, ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಸುಂಕಾಪುರ್, ಜಿಲ್ಲಾ ಉಪಾಧ್ಯಕ್ಷ ರವಿಕುಮಾರ್, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Read also : Political Analysis | ಸಂಪುಟ ಸರ್ಜರಿಗೆ ಸಿದ್ದು ರೆಡಿ