ದಾವಣಗೆರೆ (Davanagere): ಸುವರ್ಣ ಕರ್ನಾಟಕ ವೇದಿಕೆಯಿಂದ ನಗರದ ನಿಟುವಳ್ಳಿ ರಸ್ತೆಯಲ್ಲಿರುವ ಕಚೇರಿ ಮುಂಭಾಗ 69ನೇಕನ್ನಡ ರಾಜ್ಯೋತ್ಸವವನ್ನು ಧ್ವಜಾರಣ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸಂತೋಷ ಕುಮಾರ್ ಮಾತನಾಡಿ, ರಾಜ್ಯದ ಜನತೆಗೆ 69ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ತಿಳಿಸಿದರು.
ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಲ್ಲಿ ಅಲ್ಲದೇ ವರ್ಷದ 365 ದಿನವೂ ಕನ್ನಡದ ಹಬ್ಬವನ್ನುಆಚರಿಸಬೇಕು ವ್ಯವಹರಿಸುವ ಸ್ಥಳದಲ್ಲಿ ಅನ್ಯ ಭಾಷೆಯ ಬದಲು ಕನ್ನಡ ಭಾಷೆ ಯಲ್ಲಿ ವ್ಯವಹರಿಸಬೇಕು. ಮತ್ತು ಎಲ್ಲರ ಮನೆಯಲ್ಲೂ ಮನದಲ್ಲಿ ಕನ್ನಡದ ಕಂಪು ನೋಡಬೇಕು.ಈಗಿನ ಶಾಲಾ ಮಕ್ಕಳಲ್ಲಿ ಆಂಗ್ಲ ವ್ಯಾಮೋಹ ಬಹಳ ಬೆರೆತಿದ್ದು, ಅದನ್ನುತೊಲಗಿಸಿ ಕನ್ನಡ ಭಾಷೆ ಯನ್ನು ಬೇರೆಯವರಬೇಕು ಅದನ್ನು ಮನೆಯಲ್ಲಿರುವ ಪೋಷಕರು ಮಕ್ಕಳಲ್ಲಿ ಕನ್ನಡದ ಬಗ್ಗೆ ಕನ್ನಡದಲ್ಲಿ ಸಾಧನೆ ಮಾಡಿದ ಕವಿಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು.
ಆಗದಲ್ಲಿ ಮಾತ್ರ ಕನ್ನಡವನ್ನು ಉಳಿಸಲು ಬೆಳೆಸಲು ಸಾಧ್ಯವಾಗುತ್ತದೆ. ಜೊತೆಯಲ್ಲಿ ಸರ್ಕಾರವು ತಮ್ಮ ಎಲ್ಲಾ ಇಲಾಖೆಯ ಕಡತಗಳನ್ನು ಕನ್ನಡದಲ್ಲಿ ವಿವರಿಸುವಂತಹ ಆಗಬೇಕು. ಹಾಗಾದರೆ ಮಾತ್ರ ಕನ್ನಡವನ್ನು ಉಳಿಸಿ, ಬೆಳೆಸಲಿಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
Read also : ಅಟ್ಟದ ಮೇಲೆ ಕೂರುತ್ತಾರಾ ಸಂತೋಷ್?
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ್ ಯುವಘಟಕದ ಪ್ರಧಾನ ಕಾರ್ಯದರ್ಶಿಯಾದ ಕುಮಾರ್ ಭೈರಪ್ಪ, ಜಿಲ್ಲಾ ಉಪಾಧ್ಯಕ್ಷರಾದ ರವಿಕುಮಾರ್ , ಕಲ್ಪತರು ಶಾಲೆಯ ಶಿಕ್ಷಕಿಯರಾದ ಲಕ್ಷ್ಮಿ, ಮಂಜುಳಾ ,ಸುನೀತಾ, ಮಮತಾ, ಸೌಂದರ್ಯ, ಮಾನಸ, ಬಿಂದುಶ್ರೀ, ಲಕ್ಷ್ಮಮ್ಮ, ಯುವಘಟಕದ ಉಪಾಧ್ಯಕ್ಷ ಸಂತೋಷ್ , ಶರರ್ ಹಾಗೂ ಶಾಲೆಯ ಮಕ್ಕಳು ವೇದಿಕೆಯ ಸದಸ್ಯರುಗಳು ಸಾರ್ವಜನಿಕರು ಭಾಗವಹಿಸಿದ್ದರು.