ದಾವಣಗೆರೆ (Davanagere): ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯ ಸರ್ಕಾರಿ ಚಿಗಟೇರಿ ಜಿಲ್ಲಾಸ್ಪತ್ರೆಯ ಕಟ್ಟಡ ಬಹುತೇಕ ಬಿರುಕು ಬಿಟ್ಟಿದ್ದು, ಆಸ್ಪತ್ರೆಗಳಿಗೆ ಜೀವ ಭಯ ಉಂಟಾಗಿದೆ.!
ಮಂಗಳವಾರ ಆಸ್ಪತ್ರೆಯ ಹಿಂಭಾಗದ ತುರ್ತು ಚಿಕಿತ್ಸಾ ಘಟಕದ ಮುಂಭಾಗದ ಮುಖ್ಯ ಕಟ್ಟಡದ ಮೇಲ್ಚಾವಣಿಯ ಪದರ ಕುಸಿದು ಬಿದ್ದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಕಾವೇರಿ ((36), ಪ್ರೇಮಕ್ಕ (46) ಹಾಗೂ ಎರಡೂವರೆ ವರ್ಷದ ನೇತ್ರಾ ಎಂಬ ಮಗುವಿಗೆ ಗಾಯವಾಗಿದೆ.
ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಜೀವ ಭಯದಲ್ಲಿ ಕಾಲ ಕಳೆಯುವಂತಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಮೇಲ್ಚಾವಣಿಯ ಪದರು ಕಳಚಿ ಬಿದ್ದ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು. ಈಗ ಮತ್ತೆ ಅದೇ ಘಟನೆ ಪುನಾರವರ್ತನೆಯಾಗಿದೆ. ಇಷ್ಟಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರ ಇತ್ತ ಗಮನ ಹರಿಸದಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮರ‍್ನಾಲ್ಕು ಜಿಲ್ಲೆಗಳ ಕೊಂಡಿಯಾಗಿರುವ ದಾವಣಗೆರೆ ಜಿಲ್ಲಾಸ್ಪತ್ರೆಗೆ ನೂರಾರು ರೋಗಿಗಳು ಹೊರ ಮತ್ತು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿನಿತ್ಯ ಆಸ್ಪತ್ರೆಯ ಒಪಿಡಿಗಳಲ್ಲಿ ಜನಜಂಗುಳಿ ಸೇರಿರುತ್ತಾರೆ. ಅಲ್ಲದೇ, ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಗಾಗ ಆಸ್ಪತ್ರೆಯ ಮೇಲ್ಚಾವಣಿಯ ಪದರುಬಕುಸಿದು ಬೀಳುವುದರಿಂದ ರೋಗಿಗಳ ಗಂಭೀರ ಗಾಯಗೊಂಡು ಹೆಚ್ಚಿನ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳ ಪ್ರಶ್ನೆಯಾಗಿದೆ.
ಆಸ್ಪತ್ರೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ವಾರ್ಡ್ಗಳನ್ನು ಇಣುಕಿ ನೋಡಿದರೆ ಅಲ್ಲಲ್ಲಿ ಕಬ್ಬಿಣದ ಗೋಡೆಗಳಿಗೆ ಹಾಕಿದ್ದ ಸೀಮೆಂಟ್ ಕಳಚಿ ಬಿದ್ದು ಸರಳುಗಳು ಗೋಚರಿಸುತ್ತಿವೆ. ಕಿಟಿಕಿಗಳು ಕಿತ್ತು ಹೋಗಿವೆ. ಆಸ್ಪತ್ರೆಯ ಒಳಗಿನ ಆವರಣದ ಗೋಡೆಗಳನ್ನು ನೋಡಿದರೆ ಅಸ್ಥಿಪಂಜರದಂತೆ ಕಾಣುತ್ತದೆ. ಕೂಡಲೇ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಜೆಟ್ ಹಣ ಮೀಸಲಿಟ್ಟರೆ ಸಾಲದು..
ರಾಜ್ಯದ ಜಿಲ್ಲಾಸ್ಪತ್ರೆಗಳಿಗೆ ಬಜೆಟ್‌ನಲ್ಲಿ ಕೋಟ್ಯಂತರ ಅನುದಾನ ಮೀಸಲಿಡಲಾಗುತ್ತದೆ. ಆದರೆ ಅನುದಾನ ಬಿಡುಗಡೆಯಾದರೆ ಆಸ್ಪತ್ರೆಗಳನ್ನು ಆಧುನೀಕರಣಗೊಳಿಸಬಹುದು. ಅನುದಾನ ಬಿಡುಗಡೆ ಮಾಡದೇ ಕೇವಲ ದಾಖಲೆಗಳಲ್ಲಿ ತೋರಿಸಲಾಗುತ್ತದೆ. ಬಡವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅಸಾಧ್ಯವಾಗಿದೆ.
ಮರ‍್ನಾಲ್ಕು ಜಿಲ್ಲೆಗಳಿಂದ ಬರುವ ರೋಗಗಿಗಳಿಗೆ ದಾವಣಗೆರೆ ಜಿಲ್ಲಾಸ್ಪತ್ರೆ ಸಂಜೀವಿನಿಯಾಗಿದೆ. ಆದರೆ ಶಿಥಿಲಗೊಂಡು ಆಸ್ಪತ್ರೆಯ ಕಟ್ಟಡ ಆಸ್ಥಿಪಂಜರದಂತೆ
ಕಾಣುತ್ತಿದ್ದರೂ ಜನರಿಂದ ಆಯ್ಕೆಯಾಗಿ ಹೋಗುವ ಜನಪ್ರತಿನಿಧಿಗಳು ಹಾಗೂ ಸರ್ಕಾರ ಗಮನ ಹರಿಸುತ್ತಿಲ್ಲ ಹಾವೇರಿ ಜಿಲ್ಲೆಯ ರೋಗಿಯ ಸಂಬಂಧಿ ಬಸವರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.
Read also :Davanagere | 5ನೇ ಅಖಿಲ ಭಾರತ ಜಿಆರ್‌ಪಿ ಮುಖ್ಯಸ್ಥರ ಸಮ್ಮೇಳನ