ಹರಿಹರ: ನಗರದ ಹರ್ಲಾಪುರ ಕೆಎಸ್ಆರ್ಟಿಸಿ ಬಸ್ ಡಿಪೋ ಸಮೀಪದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ದಲ್ಲಿ 18 ರಿಂದ 35 ವರ್ಷದೊಳಗಿನ ಎಲ್ಲಾ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗವಕಾಶ ಕಲ್ಪಿಸಲು ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ.
ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮ, ಬಿ.ಇ. ಮತ್ತು ಯಾವುದೇ ಪದವಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಸಿಎನ್ಸಿ ಆಪರೇಟರ್ ಟರ್ನರ್, ಸಿಎನ್ಸಿ ಪ್ರೋಗ್ರಾಮರ್, ಸಿಎನ್ಸಿ ಮಿಲ್ಲಿಂಗ್ ಮಷಿನ್ ಆಪರೇಟರ್, ಡಿಸೈನರ್-ಮೆಕಾನಿಕಲ್, ಇಂಡಸ್ಟ್ರಿಯಲ್ ಆಟೋಮೇಷನ್ ಸ್ವೆಷಲಿಸ್ಟ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಟೆಕ್ನಿಷಿಯನ್, ಇಂಟರ್ನೆಟ್ ಆಪ್ ಥಿಂಗ್ (ಐಒಟಿ), ಸಿಎನ್ಸಿ ಪ್ರೋಗ್ರಾಮಿಂಗ್, ಕನ್ವೆನ್ಷನಲ್ ಮಿಲ್ಲಿಂಗ್ ಮಷಿನ್, ಪ್ರೊಡಕ್ಷನ್ ಇಂಜಿನಿಯರ್ (ಕ್ಯಾಡ್-ಕ್ಯಾಮ್), ಆಟೋಮೇಷನ್ ಅಂಡ್ ಕಂಟ್ರೋಲ್, ರಿವರ್ಸ್ ಇಂಜಿನಿಯರಿಂಗ್, 3ಡಿ ಪ್ರಿಂಟಿಂಗ್ (ಆರ್ಪಿಟಿ), ಸಿಎನ್ಸಿ ಮ್ಯಾನುಫ್ಯಾಕ್ಚರಿಂಗ್ ಅಂಡ್ ಮಷಿನಿಂಗ್, ವ್ಯಾಲಿಡೇಷನ್ ಲ್ಯಾಬ್, ರಿಯಾಲಿಟಿ ಲ್ಯಾಬ್, ಪ್ರೊಡಕ್ಟ್ ಡಿಸೈನ್ ಅಂಡ್ ಡೆವೆ¯ಪ್ಮೆಂಟ್ ಮತ್ತು ಆಪರೇಷನ್, ಮಿಲ್ಲರ್, ಗ್ರೈಂಡರ್, ಟೂಲ್ ರೂಮ್ ಮಷಿನಿಸ್ಟ್ ಕೋರ್ಸ್ಗಳಲ್ಲಿ ಅಲ್ಪಾವಧಿ ತರಬೇತಿಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು.
ಈ ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು. ತರಬೇತಿಯ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು. ಅರ್ಜಿ ಸಲ್ಲಿಸಲು ಜು.19 ಕೊನೆ ದಿನವಾಗಿದೆ, ಹೆಚ್ಚಿನ ಮಹಿತಿಗೆ ಪೋನ್: 9035372971, 9611025932, 8884488202 ಸಂಪರ್ಕಿಸಬಹುದೆಂದು ಪ್ರಭಾರಿ ಪ್ರಾಚಾರ್ಯ ಶಿವಕುಮಾರ್ ತಿಳಿಸಿದ್ದಾರೆ.
Plzz sar nange job kodi