ದಾವಣಗೆರೆ : ತಾಲೂಕಿನ ಹದಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು 3 ಹಿಟಾಚಿ ಬಳಸಿ ನೂರಾರು ಟ್ರ್ಯಾಕ್ಟರ್‍ಗಳಿಂದ ಸ್ವಯಂ ಪ್ರೇರಿತರಾಗಿ ಹದಡಿ ಕೆರೆಯ ಹೂಳನ್ನು ಎತ್ತುತ್ತಿದ್ದು ನೀರಿನ ಸಂಗ್ರಹ ಸಾಮಾಥ್ರ್ಯವನ್ನು ಹೆಚ್ಚಿಸಲು ಮುಂದಾಗಿದ್ದಾರೆ.
ಕೆರೆಯ ಹೂಳೆತ್ತುವ ಕಾರ್ಯಕ್ಕೆ ರೈತರು ಚಾಲನೆ ನೀಡಿದ್ದು ಹೂಳೆತ್ತಿದ್ದ ಮಣ್ಣನ್ನು ತಮ್ಮ ಹೊಲ ತೋಟಗಳಿಗೆ ಸಾಗಿಸುತ್ತಾ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಜತೆಗೆ ಕೆರೆಯ ನೀರಿನ ಸಂಗ್ರ ಸಾಮಾಥ್ರ್ಯವನ್ನು ಹೆಚ್ಚಿಸಿ ಅಂತರ್ಜಲ ವೃದ್ಧಿಗೆ , ಜನಜಾನುವಾರುಗಳ ನಿತ್ಯ ಬಳಕೆ ಹಾಗೂ ಕೃಷಿ ಚಟುವಟಿಕೆಗೆ ಅನುಕೂಲವಾಗಲೆಂದು ಶ್ರಮಿಸುತ್ತಿದ್ದಾರೆ.
ಭೀಕರ ಬರ , ತೀವ್ರ ಬಿಸಿಲಿನ ತಾಪಮಾನಗಳ ದಿನಗಳನ್ನು ಕಳೆದು ಹೊರ ಬಂದಿರುವ ಜನತೆಗೆ , ಮುಂಗಾರು ಅಬ್ಬರಿಸಿ ಕಣ್ಮರೆಯಾಗುತ್ತಿರುವುದರಿಂದ , ರೈತರ ಸಂತೋಷ ಕೆಲವೇ ದಿನಗಳಿಗೆ ಸೀಮಿತವಾಗಿ ಮುಗಿಲ ಕಡೆ ಮುಖ ಮಾಡಿದ್ದಾನೆ. ಇಗಾಗಲೇ ಮುಂಗಾರು ನಂಬಿ ನೂರಾರು ರೈತರು ನೆಲಕ್ಕೆ ಬೀಜ ಹಾಕಿದ್ದು ಬೆಳೆಗಳು ಬಾಡುತ್ತಿದ್ದು ಮುಗಿಲು ನೊಡುತ್ತಿದ್ದಾರೆ,
ಜಿಲ್ಲೆಯಲ್ಲಿನ ಕೆರೆ ಕಟ್ಟೆಗಳ ಹೂಳು ತೆಗೆಸಿ ನೀರಿನ ಸಂಗ್ರಹ ಸಾಮಥ್ರ್ಯ ಹೆಚ್ಚಿಸಲು , ಸರ್ಕಾರ ಮನೆರೇಗದಡಿ ಜಲ ಸಂರಕ್ಷಣೆ ಯೋಜನೆ ರೂಪಿಸಲು ಇದು ಸಕಾಲವಾಗಿದೆ. ಹವಮಾನ ಇಲಾಖೆಯು ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ಮಳೆ ನೀರು ಕೊಯ್ಲಿಗೆ ಆಧ್ಯತೆ ನೀಡಬೇಕು ಜತೆಗೆ ಸರ್ಕಾರ ವಾಟರ್ ಬಜೆಟ್ ರೂಪಿಸದೆ ಕಣ್ಣುಮುಚ್ಚಿ ಕುಳಿತಿದೆ , ಸ್ವಯಂ ಪ್ರೇರಿತರಾಗಿ ಕೆರೆ ಹೂಳೆತ್ತುವ ಮೂಲಕ ಸರ್ಕಾರದ ಕಣ್ಣು ತೆರಸಬೇಕಿದೆ ಎಂದು ಸಾರ್ವಜನಿಕರು ರೈತರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ವೇಳೆ ರೈತಮುಖಂಡ ಕೊಳೇನಹಳ್ಳಿ ಬಿಎಂ ಸತೀಶ್ ಮಾತನಾಡಿ, ಕೆರೆ ಕಾಯಕಲ್ಪ ನೀರ ನೆಮ್ಮದಿಗೆ ದಾರಿಯಾಗುತ್ತದೆ. ಭೀಕರ ಬರದಿಂದ ರೈತರು ಹೊರ ಬಂದಿದ್ದಾರೆ, ಈಬಾರಿ ಮುಂಗಾರು ಸಮರ್ಪಕವಾಗಿ ಸುರಿಯುತ್ತಿಲ್ಲಾ. ಇಗಾಗಲೇ ರೈತರು ಮುಂಗಾರು ನಂಬಿ ನೆಲಕ್ಕೆ ಬೀಜ ಹಾಕಿ ಮುಗಿಲು ನೊಡುತ್ತಿದ್ದಾರೆ, ಜಿಲ್ಲೆಯಲ್ಲಿನ ಕೆರೆಗಳ ಹೂಳೆತ್ತಿ ನೀರಿನ ಸಂಗ್ರಹ ಸಾಮಾಥ್ರ್ಯವನ್ನು ಹೆಚ್ಚಿಸುವುದು ಸರ್ಕಾರ ಕೆಲಸವಾಗಿದ್ದು ಇದು ಸಕಾಲವಾಗಿದೆ, ಈ ಹಿಂದೆ , ನೀರು ಸಂಗ್ರಹಿಸಲು ಇದು ಸಕಾಲ , ಎಂಬ ಶಿರ್ಷೀಕೆಯಲ್ಲಿ ವಿಜಯ ಕರ್ನಾಟಕ ಪತ್ರಿಕೆ ವರದಿ ಬಿತ್ತರಿಸಿ ಜಿಲ್ಲಾಡಳಿತವನ್ನು ಎಚ್ಚರಿಸಿತ್ತು. ಆದರೇ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವರಿ ಸಚಿವರು ಚುನಾವಣೆ ಗುಂಗಿನಿಂದ ಹೊರಬಂದು ವಾಟರ್ ಬಜೆಟ್ ಬಗ್ಗೆ ಕಾಯಕಲ್ಪ ರೂಪಿಸಲಿಲ್ಲಾ. ಇದನ್ನರಿತ ಹದಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಸ್ವಯಂ ಪ್ರೇರಿತಾಗಿ ಕೆರೆ ಹೂಳುತ್ತಿ , ಮಣ್ಣನ್ನು ತಮ್ಮ ಹೊಲಗಳಿಗೆ ಹಾಕಿಕೊಳ್ಳುತ್ತಾ ಕೆರೆಯ ನೀರಿನ ಸಂಗ್ರಹ ಸಾಮಾಥ್ರ್ಯವನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ ಇದರಿಂದಾಗಿ ಅಂತರ್ಜಲ ವೃದ್ಧಿಯಾಗಿ ಜನ ಜಾನುವಾರುಗಳ ನಿತ್ಯ ಬಳಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಕೋಟ್…
ಜಿಲ್ಲಾ ಉಸ್ತುವರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್‍ರ ಸಲಹೆಯಂತೆ . ಹದಡಿ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಕೆರೆ ಹೂಳನ್ನು ಎತ್ತುತ್ತಾ ಜಮೀನುಗಳಿಗೆ ಸಾಗಿಸುತ್ತಿದ್ದಾರೆ. ಇದರಿಂದ ಎಲ್ಲದಕ್ಕೂ ಲಾಭವಾಗಲಿದೆ. ಈ ಹಿಂದೆ ಕೆರೆ ಹೂಳೆತ್ತಲು ಸರ್ಕಾರ ಮನರೇಗ ಯೋಜನೆಯಲ್ಲಿ 20 ಲಕ್ಷ ಹಣವನ್ನು ಮುಂಜೂರುಮಾಡಿತ್ತು. ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಕೆರೆ ಹೂಳೆತ್ತಲು ಸಾಧ್ಯವಾಗಲಿಲ್ಲಾ ಇನ್ನೂ 10 ಲಕ್ಷ ಹಣ ಬಾಕಿ ಇದೆ ಎಂಬ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ನಿಯೋಗವ ಸಚಿವರ ಬಳಿ ತೆರಳಿ ಚರ್ಚಿಸಲಾಗುವುದು.
ಹಿರಿಯ ಮುಖಂಡ ಹದಡಿ ಹಾಲಪ್ಪ