ಮಲೆಬೆನ್ನೂರು (Davanagere) : ಪುರಸಭೆ ಆವರಣದಲ್ಲಿ ಹರ್ -ಘರ್ ತಿರಂಗಾ-2024 ಅಭಿಯಾನ ಕ್ಕೆ ನೀಡಿ ಪುರಸಭೆಯ ಮುಖ್ಯ ಅಧಿಕಾರಿ ಹನುಮಂತಪ್ಪ ಬಜಕ್ಕನವರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿ ಅವರು, ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ದಾವಣಗೆರೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಪ್ರತಿಯೊಬ್ಬರಲ್ಲೂ ದೇಶಭಕ್ತಿ, ದೇಶಾಭಿಮಾನವನ್ನು ಮೂಡಿಸಲು ಹರ್ -ಘರ್ ತಿರಂಗಾ ಅಭಿಯಾನವನ್ನು ನಡೆಸಲಾಗುತ್ತಿದೆ.ಎಲ್ಲರೂ ಸಮರ್ಥವಾಗಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
Read also : Davangere University : ಸೃಜನಶೀಲ ಸಾಹಿತ್ಯ ಕಲಿಕೆ ನಿರಂತರ: ಸೊರಟೂರ
ಈ ಸಮಯದಲ್ಲಿ ಪುರಸಭೆಯ ಸಿಬ್ಬಂದಿ ವರ್ಗದವರು ಹಾಗೂ ಪುರಸಭೆಯ ಸದಸ್ಯರುಗಳು ಉಪಸ್ಥಿತರಿದ್ದರು .