ದಾವಣಗೆರೆ (Davangere District) : ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಗ್ಲಾಸ್ ಹೌಸ್‍ನಲ್ಲಿ ಹಮಿಕೊಳ್ಳಲಾಗಿದ್ದು 52 ವಿವಿಧ ಬಗೆಯ ರಂಗೋಲಿ ಚಿತ್ತಾರಗಳನ್ನು ಬಿಡಿಸಲಾಗಿದ್ದು ಇದರಲ್ಲಿ ಅತ್ಯುತ್ತಮವಾಗಿ ಬಿಡಿಸಿದ ರಂಗೋಲಿಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಬಹುಮಾನ ವಿತರಣೆ ಮಾಡಿದರು.
ರಂಗೋಲಿ ಸ್ಪರ್ಧೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸ್ವ ಸಹಾಯ ಸಂಘದ ಮಹಿಳೆಯರು, ಜನಸಾಮಾನ್ಯ ಮಹಿಳೆಯರು ಮತ್ತು ಇಲಾಖೆಯಲ್ಲಿ ಕೆಲಸ ಮಾಡುವಂತಹ ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ರಂಗೋಲಿಯನ್ನು ತ್ರಿವರ್ಣದಲ್ಲಿ ಬಿಡಿಸಲಾಗಿದ್ದು ಒಬ್ಬಬ್ಬರು ಒಂದೊಂದು ದೇಶ ಭಕ್ತಿ ಕಲ್ಪನೆಯೊಂದಿಗೆ ರಂಗೋಲಿ ಬಿಡಿಸಿದ್ದರು.
ಈ ರೀತಿಯ ವಿವಿಧ ದೇಶ ಭಕ್ತಿ ಮೂಡಿಸುವ 52 ಚಿತ್ತಾರಗಳನ್ನು ಬಿಡಿಸಲಾಗಿತ್ತು. ಇದರಲ್ಲಿ ಅತ್ಯುತ್ತಮ ಕಲ್ಪನೆ ಮತ್ತು ಚೆನ್ನಾಗಿ ಬಿಡಿಸಿದ ಹಳೆಚಿಕ್ಕನಹಳ್ಳಿ ನಾಗಮ್ಮ ಇವರ ರಂಗೋಲಿ `ಒಂದೆಡೆ ದೇಶ ಕಾಯುವ ಸೈನಿಕರು, ಮತ್ತೊಂದೆಡೆ ತನ್ನ ಗಂಡನಿಗಾಗಿ ಕಾಯುತ್ತಿರುವ ಗರ್ಭಿಣಿ ಈ ಚಿತ್ರ ದೇಶ ಭಕ್ತಿ ಮತ್ತು ಮನ ಮಿಡಿಯುವಂತಿತ್ತು. ಇದು ಪ್ರಥಮ ಬಹುಮಾನ ಗಳಿಸಿತು.
Read also : Davanagere : ದೇಶಾಭಿಮಾನ ಮೂಡಿಸಲು ಹರ್ –ಘರ್ ತಿರಂಗಾ ಅಭಿಯಾನ
ಎರಡನೇ ಬಹುಮಾನಕ್ಕೆ ಸಂಧ್ಯಾ ಇವರು ಬಿಡಿಸಿದ ಅನೇಕತೆಯಲ್ಲಿ ಏಕತೆಯ ಗೌರವ, ಮೆರಾ ಭಾರತ್ ಮಹಾನ್ ರಂಗೋಲಿ ಮತ್ತು ತೃತೀಯ ಬಹುಮಾನವಾಗಿ ಸೌಭಾಗ್ಯ ಇವರು ಬಿಡಿಸಿದ ನನ್ನ ಧ್ವಜ ಸದಾ ಮೇಲೆ ಮತ್ತು ವನಜಾಕ್ಷಿ, ಮಂಜುಳಾ, ಸುಶೀಲಾ ಇವರು ಬಿಡಿಸಿದ ರಂಗೋಲಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ತೀರ್ಪುಗಾರರಾಗಿ ವಸಂತ ಕೆ.ಆರ್, ಶಾಂತಯ್ಯ ಮಠ್, ರೇಷ್ಮಾ ಫರ್ವೀನ್ ಭಾಗವಹಿಸಿದ್ದರು.