ದಾವಣಗೆರೆ (Davanagere ) : ವರದಕ್ಷಿಣೆಗಾಗಿ ಆಸೆಗಾಗಿ ಗಂಡ ಹೆಂಡತಿಯನ್ನು ಸೀರೆಯಲ್ಲಿ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ ಘಟನೆ ಹರಿಹರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹರಳಹಳ್ಳಿ ಗ್ರಾಮದ ನೇತ್ರಾವತಿ (26) ಗಂಡನಿಂದ ಮೃತಪಟ್ಟವರು.
ಕಳೆದ ಏಳು ವರ್ಷದ ಹಿಂದೆ ಹರಳಹಳ್ಳಿ ಗ್ರಾಮದ ದೇವೇಂದ್ರಪ್ಪ ಎನ್ನುವರ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ10 ತೊಲ ಬಂಗಾರ, 1ಲಕ್ಷ ನಗದು ಹಾಗೂ ಬೈಕ್ ಕೊಡಿಸಲಾಗಿತ್ತು. ಅದರೂ, ದೇವೇಂದ್ರಪ್ಪನ ಮನೆಯವರು ವರದಕ್ಷಿಣೆಗಾಗಿ ನೇತ್ರಾವತಿಗೆ ಹಲವು ಬಾರಿ ಪೀಡಿಸಿ, ಹಲ್ಲೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ವರದಕ್ಷಿಣೆಗಾಗಿ ಹಲವಾರು ಬಾರಿ ಕಿರುಕುಳ ನೀಡಿದ್ದ ಸಂದರ್ಭದಲ್ಲಿ ಹಿರಿಯರು ರಾಜಿ ಸಂಧಾನ ಮಾಡುತ್ತಿದ್ದರು. ಸೋಮವಾರ ರಾತ್ರಿ ವರದಕ್ಷಿಣೆಗಾಗಿಯೇ ನಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ನೇತ್ರಾವತಿ ಕುಟುಂಬದವರು ಆರೋಪಿಸಿದ್ದಾರೆ.
ದೇವೇಂದ್ರಪ್ಪ, ಕುಟುಂಬದವರ ವಿರುದ್ಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.
Read also : ಬಡವರ ಮಕ್ಕಳು ಐಎಎಸ್,ಐಪಿಎಸ್ ಆಗಬೇಕೆಂಬ ಕನಸು ನನಸಾಗಿಸಲು ಶ್ರಮ: ಜಿ. ಬಿ. ವಿನಯ್ ಕುಮಾರ್
ಮೃತ ನೇತ್ರಾವತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ. ನೇತ್ರಾವತಿ ಸಾವಿಗೆ ಕಾರಣವಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಮಕ್ಕಳಿಗೆ ಸೂಕ್ತ ಜೀವನಾಂಶ ನೀಡಬೇಕು ಎಂದು ಒತ್ತಾಯಿಸಿ ಕುಟುಂಬಸ್ಥರು ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಹೋರಾಟ ಸಹ ನಡೆಸಿದರು.