ಹರಿಹರ (Davangere District): ಇಲ್ಲಿನ ಪವಾಡಗುಟ್ಟು ಬಯಲು ಪ್ರದರ್ಶನ ಖ್ಯಾತಿಯ ಹರಿ ಅಲವೇಲು ಜಾದುಗಾರ್ ಇವರಿಗೆ ದಾವಣಗೆರೆಯ ಕಲಾಕುಂಚ ಸಾಂಸ್ಕøತಿಕ ಸಂಸ್ಥೆಯು 77 ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿ ಘೋಷಿಸಿದೆ.
ಡಿ.1 ರಂದು ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
Read also : Davanagere | ಡಯಾಲಿಸಿಸ್ ರೋಗಿಗಳಿಗೆ ಉಚಿತ ವಾಹನ ಸೇವೆಗೆ ಚಾಲನೆ
ಪರಿಚಯ: ಮೈಸೂರು ಕಿರ್ಲೋಸ್ಕರ್ ನಿವೃತ್ತ ಕಾರ್ಮಿಕರಾದ ಹರಿ ಅಲವೇಲು ಜಾದುಗಾರ್ರವರು ತಮ್ಮ ವೃತ್ತಿಯ ಜೊತೆಗೆ ರಾಜ್ಯ ಹಾಗೂ ರಾಜ್ಯದ ಹೊರಭಾಗದ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೌಢ್ಯತೆ ವಿರುದ್ಧ ವೈಜ್ಞಾನಿಕ ಮನೋಭಾವ ಬೆಳೆಸಲು 3 ಸಾವಿರಕ್ಕೂ ಹೆಚ್ಚು ಪವಾಡಗುಟ್ಟು ಬಯಲು ಪ್ರದರ್ಶನ ಹಾಗೂ ಉಪನ್ಯಾಸಗಳನ್ನು ನಡೆಸಿದ್ದಾರೆ.
ತೆಲಂಗಣದ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ 2022ರಲ್ಲಿ ಪವಾಡಗುಟ್ಟು ಬಯಲು ಹಾಗೂ ಹಿಪ್ನಾಟಿಸಮ್ ಕುರಿತು ತರಬೇತಿ ನೀಡಿದ್ದಾರೆ. ಇವರಿಗೆ ಈವರೆಗೆ ಜಾದೂ ಟೈಗರ್, ಚೂಮಂತರ 1998 ರಾಷ್ಟ್ರ ಪ್ರಶಸ್ತಿ, ಚಿಣ್ಣರ ಚೇತನ 2006, ಶಿಕ್ಷಣ ಸಿರಿ ರಾಜ್ಯ ಪ್ರಶಸ್ತಿ, ಎಚ್.ಎನ್.ರಾಜ್ಯ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡಮಿಯ ರಾಜ್ಯ ಗೌರವ ಪ್ರಶಸ್ತಿ ಹಾಗೂ ಇತರೆ ಪ್ರಶಸ್ತಿಗಳನ್ನು ಪಡೆದಿದ್ದಾರೆ.