ಹರಿಹರ (Davanagere) : ಮಕ್ಕಳ ಭವಿಷ್ಯಕ್ಕಾಗಿ ತಂಬಾಕು ಉತ್ಪನ್ನ ಸೇವನೆ ತ್ಯಜಿಸಿ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಸಲಹೆ ನೀಡಿದರು..
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ನಗರ ಸಭೆ ಹರಿಹರ ಆಶ್ರಯದಲ್ಲಿ ನಗರಸಭೆ ಸಭಾಂಗಣ ಪೌರ ಕಾರ್ಮಿಕರಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳು, ಬಾಯಿ ಆರೋಗ್ಯ ತಪಾಸಣೆ ಹಾಗೂ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲಸದ ಒತ್ತಡದಲ್ಲಿ ದುಷ್ಚಟಗಳಿಗೆ ಬಲಿಯಾಗುವುದು ಸಾಮಾನ್ಯ. ಬೀಡಿ, ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳನ್ನು ಬಳಕೆಯಿಂದ ಮಾರಕ ಕಾಯಿಲೆಗಳು ಬರುತ್ತೇವೆ. ಅದ್ದರಿಂದ ನಿಮ್ಮ ಕುಟುಂಬದ ಏಳಿಗೆಗಾಗಿ ತಂಬಾಕು ಉತ್ಪನ್ನಗಳಿಂದ ದೂರ ಇರುವಂತೆ ಕಿವಿಮಾತು ಹೇಳಿದರು.
ಆರೋಗ್ಯ ವಿದ್ದರೆ ಜೀವನದಲ್ಲಿ ಸಾಧನೆ ಮಾಡಬಹುದು. ಅದ್ದರಿಂದ ತುಂಬಾಕು ಉತ್ಪನ್ನ ಸೇವೆನೆ ಬಿಟ್ಟು ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ನಗರ ಸಭೆಯ ಉಪಾಧ್ಯಕ್ಷ ಎಂ.ಜಂಬಣ್ಣ ಮಾತನಾಡಿ, ನಗರದ ಸ್ವಚ್ಚತೆಯನ್ನು ಯಾವ ರೀತಿ ಕಾಪಾಡುತ್ತಿರೊ ಅದೇ ರೀತಿ ನಿಮ್ಮ ಆರೋಗ್ಯದ ಸ್ವಚ್ಚತೆಯನ್ನು ಸಹ ಕಾಪಾಡಿಕೊಳ್ಳಬೇಕು. ಪೌರ ಕಾರ್ಮಿಕರಿಂದಲೇ ನಗರದ ಸ್ವಚ್ಚತೆ ಹಾಗೂ ನಾವೇಲ್ಲ ಆರೋಗ್ಯವಾಗಿರುವುದು ನಿಮ್ಮಿಂದಲೇ ಎಂದ ಅವರು, ಆರೋಗ್ಯದ ದೃಷ್ಠಿಯಲ್ಲಿ ಅವಶ್ಯಕವಿರುವ ವೈಯಕ್ತಿಕ ರಕ್ಷಣಾ ಸಾಮಾಗ್ರಿಗಳನ್ನು ಪೂರೈಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
Read also : Davanagere | ಮಕ್ಕಳಿಗೆ ಶಿಕ್ಷಣ ಅತ್ಯಂತ ಅವಶ್ಯಕ : ಜಿಲ್ಲಾ ನಿರ್ದೇಶಕ ಲಕ್ಷ್ಮಣ್
ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್ ಮಾತನಾಡಿ, ವರ್ಷಕ್ಕೆ ವಿಶ್ವದಾದ್ಯಂತ 80 ಲಕ್ಷ ಜನ ತಂಬಾಕು ಸೇವನೆ ಮಾಡಿ ಅದರಿಂದ ಬಂದಿರುವ ಖಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಪ್ರತಿ ನಿತ್ಯ 3000 ಅಸು ನಿಗುತ್ತಿದ್ದಾರೆ. ತಂಬಾಕಿನ ಒಂದು ಪ್ಯಾಕೆಟ್, ಬೀಡಿ, ಸಿಗರೇಟ್ ಮಾನವನ ಜೀವಿತ ಅವಧಿಯಲ್ಲಿ 7 ನಿಮಿಷ ಆಯಸ್ಸನ್ನು ಸುಡುತ್ತಿದೆ. ತಂಬಾಕು ನೀಡುವಂತಹ ಮದ ಕೇವಲ ಕ್ಷಣಿಕ ಮಾತ್ರ.ಅದರೆ, ಅದರಿಂದಾಗುವ ಅನಾಹುತಗಳೇ ಜಾಸ್ತಿ. ಈ ನಿಟ್ಟನಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಪೌರ ಕಾರ್ಮಿಕರು ಸದುಪಯೋಗ ಪಡೆದುಕೊಂಡು ಒಳ್ಳೆಯ ಆರೋಗ್ಯ ಜೀವನ ಶೈಲಿ ಹೊಂದಬೇಕೆಂದು ಕರೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಬ್ದುಲ್ ಖಾದರ್, ದಂತ ಆರೋಗ್ಯ ಅಧಿಕಾರಿ ಡಾ. ಕಿರಣ್ ನಾಡಿಗರ್, ಎನ್.ಸಿ.ಡಿ ಸಂಯೋಜಕ ಡಾ. ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮಣ್ಣ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್, ಆರೋಗ್ಯ ನಿರೀಕ್ಷಕರಾದ ರವಿ ಪ್ರಕಾಶ, ಸಂತೋμï, ನಗರ ಸಭೆಯ ಸದಸ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಇದ್ದರು.