ದಾವಣಗೆರೆ.ಆ.25 (Davanagere) : ಹರಿಹರ ತಾಲ್ಲೂಕಿನ ಹನಗವಾಡಿ ಕೈಗಾರಿಕಾ ಪ್ರದೇಶ (Hanagawadi Industrial Area) ದಲ್ಲಿರುವ ಪೈಪ್ಸ್ ಮತ್ತು ಸ್ಪಿಂಕ್ಲರ್ ತಯಾರಿಕಾ ಘಟಕದಲ್ಲಿ ತಾಮ್ರದ ತಂತಿ ಮತ್ತು ಎಲೆಕ್ಟಿಕಲ್ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ಮೂವರನ್ನು ಬಂಧಿಸಿ 12 ಲಕ್ಷ ರೂಗೂ ಅಧಿಕ ಮೌಲ್ಯದ ಮಾಲನ್ನು ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹರಿಹರದ ನಿವಾಸಿಗಳಾದ ಸೈಯದ್ ನೂರುದ್ದೀನ್, ಮೊಹ್ಮದ್ ಆಸೀಫ್ ಮತ್ತು ಇರ್ಷದ್ ಬಂಧಿತ ಆರೋಪಿಗಳು. ಬಂಧಿತರಿಂದ 12 ಲಕ್ಷದ ಮೌಲ್ಯದ ತಾಮ್ರದ ತಂತಿ ಮತ್ತು ಎಲೆಕ್ಟಿಕಲ್ ಸಾಮಗ್ರಿಗಳು ಹಾಗೂ ಕೃತ್ಯಕ್ಕೆ ಬಳಸಿದ ಓಮಿನಿ ಮತ್ತು 02 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹನಗವಾಡಿ ಇಂಡಸ್ಟಿಯಲ್ ಏರಿಯಾದಲ್ಲಿ ಇರುವ ಗ್ರೀನ್ ರಾಯಲ್ ಎಚ್‌ಡಿಪಿಇ ಪೈಪ್ಸ್ ಮತ್ತು ಡ್ರಿಪ್ ಹಾಗು ಸ್ಪಿಂಕ್ಲರ್ ತಯಾರಿಕಾ ಘಟಕದಲ್ಲಿ ಮಿಷನರಿಗೆ ಬಳಸಿದ್ದ ಪವರ್ ಸಪ್ಲೆರ್ ಮತ್ತು ಕಾಪರ್ ಕೇಬಲ್ ಹಾಗೂ ಸಲಕರಣೆಗಳು ಕಳುವಾದ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಹೆಚ್ಚುವರಿ ಎಸ್ಪಿ ವಿಜಯ್ ಕುಮಾರ್ ಸಂತೋಷ ಮತ್ತು ಮಂಜುನಾಥ ಜಿ., ಡಿವೈಎಸ್‌ಪಿ ಬಸವರಾಜ. ಬಿ.ಎಸ್ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಸುರೇಶ ಸಗರಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಎಸ್. ಕುಪ್ಪೇಲೂರು ಸಿಬ್ಬಂದಿಗಳಾದ ಸರಳ ತಿಪ್ಪೇಸ್ವಾಮಿ, ನಾಗರಾಜ. ರಾಮಚಂದ್ರಪ್ಪ, ಕರಿಯಪ್ಪ, ರಮೇಶ, ದಾದಾಪೀರ್, ನೀಲಮೂರ್ತಿ, ಸತೀಶ, ಲಿಂಗರಾಜ, ಅರ್ಜುನ ರಾಯಲ್, ಅನಿಲ್ ಕುಮಾರ್ ನಾಯ್ಕ, ರಿಜ್ವಾನ್ ನಾಸೂರ್, ಗಂಗಾಧರ, ಪ್ರಸನ್ನಕಾಂತ, ಸುರೇಶ, ಅರ್ಜುನ್ ನಂದ್ಯಾಲ, ಋಷಿರಾಜ, ನಾಗರಾಜ, ರಾಮಾಂಜನೇಯ, ಸತೀಶ, ದ್ವಾರಕೇಶ, ಹನುಮಂತ, ಸಿದ್ದಪ್ಪ ಮುರುಳಿ ಇತರ ಸಿಬ್ಬಂದಿಗಳನ್ನು ಒಳಗೊಂಡ ತಂಡ ಪೊಲೀಸ್ ಶ್ವಾನದೊಂದಿಗೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂದಿಸಿದಂತೆ 8 ಲಕ್ಷ ಮೌಲ್ಯದ ತಾಮ್ರದ ತಂತಿ ಮತ್ತು ಎಲೆಕ್ಟಿಕಲ್ ಸಾಮಗ್ರಿಗಳು ಹಾಗು ಕೃತ್ಯಕ್ಕೆ ಬಳಸಿದ ಒಟ್ಟು ಸುಮಾರು 4 ಲಕ್ಷ ರೂ ಮೌಲ್ಯದ ಓಮಿನಿ ಮತ್ತು 02 ಬೈಕುಗಳನ್ನು ವಶಕ್ಕೆ ವಶಪಡಿಸಿಕೊಳ್ಳಲಾಗಿದೆ.
ಆರೋಪಿತರ ಹಿನ್ನೆಲೆ : ಸೈಯದ್ ನೂರುದ್ದೀನ್ ಮೇಲೆ ಹಾಲಿ ಹರಿಹರ ಗ್ರಾಮಾಂತರ ಠಾಣೆ ಸೇರಿದಂತೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ 2016 ರಲ್ಲಿ , ಹರಿಹರ ನಗರ ಠಾಣೆಯಲ್ಲಿ 2010 ರಲ್ಲಿ ದಾಖಲಾಗಿರುವ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಹಾಗೂ ಆರೋಪಿತ ಆಸೀಪ್ ಈತನ ಮೇಲೆ ಹಾಲಿ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಸೇರಿದಂತೆ 2021 ರಲ್ಲಿ ಹರಿಹರ ನಗರ ಠಾಣೆ, 2022 ರಲ್ಲಿ ಬಸವಾ ಪಟ್ಟಣ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಬಾಗಿಯಾಗಿದ್ದಾನೆ
ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.