ದಾವಣಗೆರೆ (Davangere Distric) : ಛತ್ತಿಸಗಡ್ ರಾಜ್ಯದ, ರಾಯ್ ಪುರ್ ನಗರದಲ್ಲಿ ನಡೆದ 46ನೇ ರಾಷ್ಟ್ರೀಯ ಪಂಜ ಕುಸ್ತಿ ಸ್ಪರ್ಧೆಯಲ್ಲಿ ಹರಿಹರ ಬ್ರದರ್ಸ್ ಜಿಮ್‌ನ ಪುರುಷ ಹಾಗು ಮಹಿಳಾ ಕ್ರೀಡಾಪಟುಗಳು ಒಟ್ಟು, 11. ಜನ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ 2ಚಿನ್ನ, 3ಬೆಳ್ಳಿ, 4 ಕಂಚು ಒಟ್ಟು 09 ಪದಕಗಳನ್ನು ಗೆದ್ದು ಎರಡು ಕ್ರೀಡಾಪಟುಗಳು ಅಂತರರಾಷ್ಟ್ರೀಯ ಪಂಜ ಕುಸ್ತಿ ಸ್ಪರ್ಧೆಗಳಿಗೆ ಅಯ್ಕೆಯಾಗಿದ್ದಾರೆ.
ಅಂತರರಾಷ್ಟ್ರೀಯ ಪಂಜ ಕುಸ್ತಿ ಸ್ಪರ್ಧೆಗಳಿಗೆ ಆಯ್ಕೆಯಾಗಿ ಬ್ರದರ್ಸ್ ಜಿಮ್ ಗೆ, ಹರಿಹರ ನಗರಕ್ಕೆ, ದಾವಣಗೆರೆ ಜಿಲ್ಲೆಗೆ, ಕರ್ನಾಟಕ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಕ್ರೀಡಾಪಟುಗಳಿಗೆ ಹರಿಹರ ಬ್ರದರ್ಸ್ ಜಿಮ್ನಾ ಸಂಚಾಲಕರಾದ ಅಂತರರಾಷ್ಟ್ರೀಯ ಬಾಡಿಬಿಲ್ಡರ್ ಅಕ್ರಂ ಬಾಷಾ, ಅಂತರರಾಷ್ಟ್ರೀಯ ಬಾಡಿಬಿಲ್ಡರ್ ಮಹಮ್ಮದ್ ರಫೀಕ್ ಕೋಚ್. ಹಾಗೂ ಜಿಮ್ನಾ ಎಲ್ಲಾ ಕ್ರೀಡಾಪಟುಗಳು, ನಗರದ ಎಲ್ಲಾ ಕ್ರೀಡಾ ಪ್ರೇಮಿಗಳು ಅಭಿನಂದಿಸಿದ್ದಾರೆ.