ಹರಿಹರ (Harihara) : ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ(ಜಿಟಿಟಿಸಿ) ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ತಂತ್ರಜ್ಞಾನ ತರಭೇತಿಗಳ ಸಂಸ್ಥೆಗಳಿಗೆ ನೆರವು ಯೋಜನೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ (ಎಸ್‍ಸಿಪಿ, ಟಿಎಸ್‍ಪಿ) ಮೂಲಕ 16 ರಿಂದ 45 ವರ್ಷದೊಳಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಉದ್ಯೋಗಾವಕಾಶ ಕಲ್ಪಿಸಲು ಉಚಿತ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ.
ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮ, ಬಿ.ಇ., ಮತ್ತು ಯಾವುದೇ ಪದವಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಸಿಎನ್‍ಸಿ ಪ್ರೋಗ್ರಾಮರ್, ಕನ್ವೆನ್ಷನಲ್ ಟರ್ನರ್, ಮಿಲ್ಲಿಂಗ್ ಮಷಿನ್, ಕನ್ವೆನ್ಷನಲ್ ಮಿಲ್ಲಿಂಗ್ ಮಷಿನ್ ಅಪರೇಟರ್, ಕನ್ವೆನ್ಷನಲ್ ಸರ್ಫೇಸ್ ಗ್ರೈಂಡರ್ ಅಪರೇಟರ್, ಡಿಸೈನ್ ಮಷಿನ್, ಪ್ರೊಡಕ್ಷನ್ ಇಂಜಿನಿಯರ್ (ಕ್ಯಾಡ್-ಕ್ಯಾಮ್), ಸಿಎನ್‍ಸಿ ಆಪರೇಟರ್ ಟರ್ನರ್, ಟೂಲ್ ರೂಮ್ ಮಷಿನಿಷ್ಟ್ ಕೋರ್ಸ್‍ಗಳಲ್ಲಿ ಅಲ್ಪಾವಧಿ ತರಬೇತಿಗಳನ್ನು ಉಚಿತವಾಗಿ ನೀಡಲಾಗುವುದು.
Read also : Harihara | ಮೊಬೈಲ್‌ಗಳಿಂದ ದೂರವಿರಿ : ಪ್ರೊ. ಸಿ.ಕೆ. ರಮೇಶ್
ತರಭೇತಿಯ ಅವಧಿಯಲ್ಲಿ ಸ್ಟೈಫಂಡ್ (ಶಿಷ್ಯ ವೇತನ) ನೀಡಲಾಗುವುದು. ತರಬೇತಿ ಮುಗಿದ ನಂತರ ಉದ್ಯೋಗವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು. ಅ.30 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಹರ್ಲಾಪುರ ಇಂಡಸ್ಟ್ರಿಯಲ್ ಏರಿಯ, ಕೆಎಸ್‍ಆರ್‍ಟಿಸಿ ಬಸ್ ಡಿಪೋ ಹತ್ತಿರ, ಹರಿಹರ, ಫೋನ್ ನಂ. 9035372971, 9164369670ಗೆ ಸಂಪರ್ಕಿಸಲು ಪ್ರಾಚಾರ್ಯ ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.