ಹರಿಹರ: ನಗರದ ಕೆಎಚ್‍ಬಿ ಕಾಲೊನಿಗೆ ಮೂಲ ಭೂತ ಸೌಕರ್ಯ ಕಲ್ಪಿಸದಿದ್ದರೆ ನಗರಸಭೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಕಾಲೋನಿ ನಿವಾಸಿಗಳು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕಾಲೋನಿ ನಿವಾಸಿ ಸತೀಶ್ ಹುಲಸೋಗಿ ಮಾತನಾಡಿ, 14 ವರ್ಷಗಳಾಗಿರುವ ಈ ಕಾಲೋನಿಯಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. 14 ವರ್ಷಗಳ ಹಿಂದೆ ಕೆಎಚ್‍ಬಿಯಿಂದ ರಚಿಸಿದ ರಸ್ತೆಗಳಿಗೆ ಒಮ್ಮೆಯೂ ನಗರಸಭೆಯಿಂದ ಡಾಂಬರೀಕರಣ ಮಾಡಿಲ್ಲ. ಕಟ್ಟಿಕೊಂಡಿರುವ ಚರಂಡಿಗಳ ಸ್ವಚ್ಚತೆ ಮಾಡಿಲ್ಲ, ಕೆಲ ವರ್ಷಗಳ ಹಿಂದೆ ಮಾಡಿದ ಯುಜಿಡಿ ಅತ್ಯಂತ ಕಳಪೆಯಾಗಿದ್ದು ನಿರುಪಯುಕ್ತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚರಂಡಿಗಳಲ್ಲಿ ಹೂಳು ತುಂಬಿದ್ದು ಮಳೆಗಾಲದಲ್ಲಿ ಬಚ್ಚಲು ಮೂಲಕ ಚರಂಡಿ ನೀರು ಮನೆಗಳಿಗೆ ನುಗ್ಗಿ, ಶೌಚಕ್ಕೆ ಬಯಲಿನ ಕಡೆ ಹೋಗುವ ದುಸ್ಥಿತಿ ಇದೆ. ಸೂಕ್ತ ಬೀದಿ ದೀಪಗಳಿಲ್ಲ, ಹೆಸರಿಗಷ್ಟೆ ಉದ್ಯಾನವಿದ್ದು ಅದರ ಹಸಿರೀಕರಣವಾಗಿಲ್ಲ, ಸ್ವಾಗತ ಕಮಾನಿಲ್ಲ, ಜಾಲಿ ಗಿಡಗಳ ಕಾಡಾಗಿ ಪರಿಣಮಿಸಿದೆ, ಜಲಸಿರಿ ಕಾಮಗಾರಿ ಪೂರ್ಣವಾಗಿದ್ದು ಕುಡಿಯುವ ನೀರಿಗೆ ತಾತ್ವಾರವಿದೆ, ಕಸ ಸಂಗ್ರಹ ನಿಯಮಿತವಾಗಿಲ್ಲ, ವಿಷ ಜಂತುಗಳ ಕಾಟವಿದ್ದು ಸಂಜೆ ನಂತರ ಮನೆಯಿಂದ ಹೊರಬರುವುದು ದುಸ್ತರವಾಗಿದೆ ಎಂದರು.
ಒಮ್ಮೆ ಸಾಧಾರಣ ಮಳೆ ಬಂದರೂ ಒಂದು ವಾರ ಕಾಲ ಕೆಸರು ರಸ್ತೆಗಳಲ್ಲಿ ತುಂಬಿರುತ್ತದೆ, ವಾಹನ ಸಂಚಾರ ದುಸ್ತರವಾಗಿದೆ. ಸರ್ಕಾರದ ಸಂಸ್ಥೆಯಿಂದ ರಚಿಸಿದ ಲೇಔಟ್ ಎಂದು ಇಲ್ಲಿ ಸಾಲ, ಸೂಲ ಮಾಡಿ ಮನೆ ಕಟ್ಟಿಸಿಕೊಂಡವರು ವಾಸವಿರಲು ಸಾಧ್ಯವಾಗದೆ ಬೇರೆಯವರಿಗೆ ಕಡಿಮೆ ಬಾಡಿಗೆಗೆ ನೀಡಿ, ಮನೆ ಮಾಲಿಕರು ಬೇರೆ ಬಡಾವಣೆಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸ ಇರುವಂತಾಗಿದೆ. ಮನೆ ಮತ್ತು ನೀರು ಹಾಗೂ ಇತರೆ ಕಂದಾಯಗಳನ್ನು ನಿಯಮಿತವಾಗಿ ಪಾವತಿಸುವ ಇಲ್ಲಿನ 250 ಮನೆಗಳ ಬದುಕು ನರಕಮಯವಾಗಿದೆ. ಈಗಾಗಲೆ ಈ ಭಾಗದ ನಗರಸಭೆ ಸದಸ್ಯರು, ನಗರಸಭೆ ಪೌರಾಯುಕ್ತರು, ಶಾಸಕರಿಗೆ ಮನವಿ ನೀಡಲಾಗಿದ್ದು ಯಾವುದೆ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ನಮ್ಮ ನೋವನ್ನು ಕೇಳುವವರಿಲ್ಲದಂತಾಗಿದೆ. ಈ ಬಡಾವಣೆಗೆ ಸೂಕ್ತ ಸೌಕರ್ಯಗಳನ್ನು ಒದಗಿಸದಿದ್ದರೆ ಶೀಘ್ರವೇ 2ನೇ ರೈಲ್ವೆ ಗೇಟಿನ ಬಳಿ ಬೀರೂರು-ಸಮ್ಮಸಗಿ ಹೆದ್ದಾರಿ ತಡೆ, ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಕೆಎಚ್‍ಬಿ ಕಾಲೋನಿ ನಿವಾಸಿಗಳಾದ ಎರ್ರಿಸ್ವಾಮಿ, ರೇವಣಸಿದ್ದಪ್ಪ ಅಮರಾವತಿ ರಾಮಮೂರ್ತಿ, ರಾಮಕೃಷ್ಣ ಶರ್ಮ, ಎಚ್.ಎಂ.ವೀರಯ್ಯ, ಸಿದ್ಧಲಿಂಗಸ್ವಾಮಿ, ಪ್ರದೀಪ್ ತೇಲ್ಕರ್, ರಾಜೇಶ್ ಭಟ್, ಪ್ರದೀಪ್ ತೇಲ್ಕರ್, ವಿg