ಹರಿಹರ (DAVANAGERE ): ತಾಲೂಕು ಬ್ಯಾಲದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಗ್ಗಿ ಪುಸ್ತಕ ಲೇಖನ ಸಾಮಗ್ರಿಗಳನ್ನು ವಿತರಣೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಸುಷ್ಮಾ ದೊಡ್ಮನೆ ಅವರು ಕೊಡುಗೆಗಳನ್ನು ನೀಡುತ್ತಿರುವುದು ಸಂತಸ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್ ಮಾತನಾಡಿ, ಸುಷ್ಮಾ ದಂಪತಿಗಳಿಗೆ ಇಂತಹ ಇನ್ನು ಅನೇಕ ಕಾರ್ಯಕ್ರಮಗಳನ್ನು ಮಾಡಲು ಭಗವಂತ ಶಕ್ತಿಯನ್ನು ನೀಡಲಿ ಇಂತಹ ಅನೇಕ ಸಮಾಜ ಸೇವೆಯನ್ನು ಮಾಡುವಂತಾಗಲಿ ಎಂದು ಅಭಿನಂದಿಸಿದರು.
Read also : DAVANAGERE : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸAಘದ ಕಾರ್ಯದರ್ಶಿ ತಿಪ್ಪೇಶ್ ವಿ.ಬಿ ಮಾತನಾಡಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಬಡ ಮಕ್ಕಳಿಗೆ ಇಂತಹ ಉತ್ತೇಜನಗಳು ಸ್ಪೂರ್ತಿದಾಯಕ ಇಂತಹ ಸೌಲಭ್ಯಗಳನ್ನು ಎಲ್ಲರೂ ಉಪಯೋಗಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.
ಎಲ್‌ಐಸಿ ಸಲಹಗಾರರಾದ ಸುಷ್ಮಾ ದೊಡ್ಡಮನಿ, ಲಕ್ಕ ಶೆಟ್ಟಿ ಹಳ್ಳಿಯ ಸಮಿತಾ ಪ್ರಾವಿಜನ್ ಸ್ಟೋರ್ ಮಾಲೀಕರಾದ ನಿಂಗರಾಜ್ ಮಡಿವಾಳ್ , ಸಿಬ್ಬಂದಿ ವರ್ಗ, ಶಾಲೆಯ ಮಕ್ಕಳು ಇನ್ನು ಮುಂತಾದವರು ಉಪಸ್ಥಿತರಿದ್ದರು.