ದಾವಣಗೆರೆ ()Davanagere) : ಮಧ್ಯಮವರ್ಗದವರ ಅನುಕೂಲಕ್ಕಾಗಿ ಬೆಂಗಳೂರಿನ ಬಿಡಿಎ ಮಾದರಿಯಲ್ಲಿ ಗೃಹಗಳ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಸೂಚನೆ ನೀಡಿದರು.
ದಾವಣಗೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಮ್ಮಿಕೊಂಡಿದ್ದ ಸಭೆಯ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ದಾವಣಗೆರೆ ಹರಿಹರ ನಗರದ ಸೇರಿದಂತೆ ಜಿಲ್ಲೆಯ ಎಲ್ಲಾ ಭಾಗಗಳು ಅಭಿವೃದ್ಧಿಯತ್ತ ಸಾಗಬೇಕು. ಈ ನಿಟ್ಟಿನಲ್ಲಿ ಮುಂದಿನ ಪ್ರಕ್ರೀಯೆಗೆ ಸಭೆ ನಡೆಸಲಾಯಿತು ಎಂದು ತಿಳಿಸಿದ ಸಚಿವರು ಏರಿಯಗಳ ಆಧಾರದಲ್ಲಿ ದರ ನಿಗಧಿಪಡಿಸಿ ಡೆವಲಪ್ಮೆಂಟ್ ಅಥಾರ್ಟಿಯವರಿಂದ ಹೊಸ ಲೇಔಟ್, ನಿವೇಶನ ಹಾಗೂ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ದಾವಣಗೆರೆ ದಕ್ಷಿಣ ಹಾಗೂ ಉತ್ತರ ಭಾಗಗಳಲ್ಲಿ ಹೊಸ ಹೊಸ ಲೇಔಟ್ ನಿರ್ಮಾಣವಾಗಿವೆ. ಪಾರದರ್ಶಕವಾಗಿ ಈ ಸ್ವತ್ತು ನೀಡಬೇಕು, ಈ ಸ್ವತ್ತು ಸಹ ಆನ್ಲೈನ್ ಮಾಡಲು ನಿರ್ಧರಿಸಲಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆ ಜಿಲ್ಲೆಯು ಉತ್ತಮವಾಗಿದೆ. 2003-2008 ರ ಅವಧಿಯಲ್ಲಾದ ಕಾಮಗಾರಿಗಳಿಂದ ಇಂದು ದಾವಣಗೆರೆ ಜಿಲ್ಲೆಗೆ ಖ್ಯಾತಿ ಬಂದಿದೆ. ವಿನೋಭನಗರ, ಎಲ್ಲಮ್ಮನಗರ, ಜಾಲಿನಗರ ಸೇರಿದಂತೆ ಹತ್ತಾರು ಬಡಾವಣೆಗಳಿಂದ 40 ಸಾವಿರ ಅರ್ಜಿಗಳನ್ನು ಅಕ್ರಮ ಸಕ್ರಮ ಮಾಡಲಾಗಿದೆ. ಸಾವಿರಾರು ರೂಪಾಯಿ ಇದ್ದ ಭೂಮಿ ಬೆಲೆ ಕೋಟಿಗೆ ತಲುಪಿದೆ. ನಮ್ಮ ಅವಧಿಯಲ್ಲಾದ ಕೆಲಸಗಳನ್ನು ಜನರು ಇಂದಿಗೂ ಸ್ಮರಿಸುತ್ತಿದ್ದಾರೆ. ಬೆಂಗಳೂರಿನ ಬಿಡಿಎ ಮಾದರಿಯಲ್ಲಿ ಜನತೆಗೆ ಅನುಕೂಲವಾಗುವಂತೆ ಗೃಹ ನಿರ್ಮಾಣ ಮಾಡಲಾಗುವುದು ಎಂದರು.
Read also : ರಾಜ್ಯಮಟ್ಟದ ಬಾಡಿ ಬಿಡ್ಡಿಂಗ್ ಸ್ಪರ್ಧೆಯಲ್ಲಿ ಕ್ರೀಡಾಪಟು ಯೂಸುಫ್ ಐ.ಬಿ. ಪ್ರಥಮ : ಸನ್ಮಾನ
ಈ ವೇಳೆ ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ದೂಡ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮೇಯರ್ ಕೆ.ಚಮನ್ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್, ದೂಡ ಆಯುಕ್ತರು ಹಾಗೂ ಸದಸ್ಯರುಗಳು ಇತರರು ಉಪಸ್ಥಿತರಿದ್ದರು.
ಬಾಕ್ಸ್
ಸಿಎಂ ಸಿದ್ದರಾಮಯ್ಯರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದ ಮಾಧ್ಯಮದವರಿಗೆ ಸಚಿವರು ಸಿಎಂ ಸಿದ್ದರಾಮಯ್ಯ ಬದಲಾವಣೆ ಇಲ್ಲ. ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಯಲಿದೆ.
ಯುಬಿಡಿಟಿ ಕಾಲೇಜು ಸೀಟ್ ಹಂಚಿಕೆ ವಿವಾದದಿಂದ ದಾವಣಗೆರೆ ಬಂದ್ ಕರೆ ವಿಚಾರವನ್ನು ಸಹ ಕ್ಯಾಬಿನೆಟ್ ನಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ ಸಚಿವರು.