ದಾವಣಗೆರೆ : ಮಹಾನಗರ ಪಾಲಿಕೆ 29 ನೇ ವಾರ್ಡ್‍ನ ಯುವ ಕಾಂಗ್ರೆಸ್ ಮುಖಂಡ ನಿಟುವಳ್ಳಿ ಪ್ರವೀಣ್ ಕುಮಾರ್ ಅವರು ವಾರ್ಡ್‍ನ ಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಉಚಿತ ಔಷಧಿ ವಿತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಪಾಲಿಕೆಯ 29 ನೇ ವಾರ್ಡಿನ ಶ್ರೀರಾಮ್ ಬಡಾವಣೆಯಲ್ಲಿರುವ ಸರಕಾರಿ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದರು. ಈ ವೇಳೆ ತಜ್ಞ ವ್ಯದ್ಯೆ ಡಾ.ಕಾರ್ತಿಕ್ ಸುಮಾರು 200 ಜನಕ್ಕೆ ಅರೋಗ್ಯ ತಪಾಸಣೆ ಮಾಡಿದರು.
ಇದೇ ವೇಳೆ 200 ಜನರಿಗೆ ಉಚಿತವಾಗಿ ಔಷಧಿ ವಿತರಿಸಿದರು.
Read also : ಧರ್ಮ ಸಹಿಷ್ಣುತೆಯ ದಾರ್ಶನಿಕ|ಸ್ವಾಮಿ ವಿವೇಕಾನಂದರು:ಲೇಖನ ಡಾ.ಗಂಗಾಧರಯ್ಯ ಹಿರೇಮಠ
ಪಾಲಿಕೆ ಮಾಜಿ ಸದಸ್ಯೆ ರೇಣುಕಮ್ಮ ಶಾಂತರಾಜ್, 29ನೇ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಆನಗೋಡ ನಾಗರಾಜ್, ಎಂ ಕೆ ಸ್ವಾಮಿ ರವರು, ಆನಗೋಡ ಅರುಣ್, ಪ್ರತಾಪ್ ಎ, ಅರ್ಜುನ್, ರಮೇಶ್, ಹುಸೇನ್ ಸಾಬ್, ಜಯ ಇತರರು ಉಪಸ್ಥಿತರಿದ್ದರು.
