Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಆರೋಗ್ಯ > ಸೊಂಟ ನೋವು (ಕಟಿಶೂಲ)ಮತ್ತು ಆಯುರ್ವೇದ ಸೂಕ್ತ ಚಿಕಿತ್ಸೆ: ಡಾ.ಬಿ.ಶಿವಕುಮಾರ್ ಎಂ.ಎಸ್
ಆರೋಗ್ಯ

ಸೊಂಟ ನೋವು (ಕಟಿಶೂಲ)ಮತ್ತು ಆಯುರ್ವೇದ ಸೂಕ್ತ ಚಿಕಿತ್ಸೆ: ಡಾ.ಬಿ.ಶಿವಕುಮಾರ್ ಎಂ.ಎಸ್

Dinamaana Kannada News
Last updated: December 2, 2025 8:49 am
Dinamaana Kannada News
Share
davanagere
SHARE

ಕಟಿಶೂಲ (ಸೊಂಟ ನೋವು) ಆಯುರ್ವೇದದಲ್ಲಿ ‘ಕಟಿಗ್ರಹ’, ‘ಕಟಿಶೂಲ’ ಇತ್ಯಾದಿ ಹೆಸರಿನಿಂದ ಪರಿಗಣಿಸಲಾಗುತ್ತಿದ್ದು, ಈಗ ಕಾರಣಗಳು, ಲಕ್ಷಣಗಳು ಮತ್ತು ಆಯುರ್ವೇದ ಚಿಕಿತ್ಸೆಯನ್ನು ಸ್ಪಷ್ಟವಾಗಿ ತಿಳಿಸುತ್ತೇನೆ.

ಸೊಂಟ ನೋವು (ಕಟಿಶೂಲ) ಈಗಿನ ಕಾಲಕ್ಕೆ ತುಂಬ ಸಾಮಾನ್ಯ, ವಿಶೇಷವಾಗಿ ಹೆಚ್ಚು ಕುಳಿತಿರುವ ಕೆಲಸ, ತಪ್ಪಾದ ಭಂಗಿ, ಮತ್ತು ವಾತದೋಷದ ಹೆಚ್ಚಳದಿಂದ ಬರುತ್ತದೆ. ಆಯುರ್ವೇದದಲ್ಲಿ ಇದನ್ನು ವಾತಜನ್ಯ ವ್ಯಾಧಿ ಎಂದು ಪರಿಗಣಿಸಿದ್ದಾರೆ.

ಇದ್ದಕ್ಕಿದಂತೆ ಕಾಡುವ ಸೊಂಟನೋವು ಒಮ್ಮೊಮ್ಮೆ ದೇಹವನ್ನು ನಡುಗಿಸಿ ಬಿಡುತ್ತದೆ ಆ ಕ್ಷಣಕ್ಕೆ ನೋವಿನಿಂದ ಪಾರಾದರೆ ಸಾಕು ಅಂದುಕೊಂಡೇ ಹಲವಾರು ನೋವು ನಿವಾರಕ ಮಾತ್ರೆಯನ್ನು ಸೇವಿಸುತ್ತಾರೆ ಆದರೆ ಅದು ತಾತ್ಕಾಲಿಕ ಪರಿಹಾರ ಅಷ್ಟೆ ಆಯುರ್ವೇದ ದಲ್ಲಿ ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಗಳಾದ ಒಳ–ಬಾಹ್ಯ ಚಿಕಿತ್ಸೆ, ಪಂಚಕರ್ಮ ಹಾಗೂ ದಿನಚರ್ಯೆಯ ಮೂಲಕ ಪರಿಹಾರ ನೀಡಬಹುದು.

ಸೊಂಟ ನೋವಿಗೆ ಕಾರಣಗಳು :

  1. ಆಹಾರದಲ್ಲಿ ವ್ಯತ್ಯಯ
  2. ರಾತ್ರಿ ನಿದ್ರೆ ತಪ್ಪಿಸಿ ಹಗಲು ಹೊತ್ತು ನಿದ್ರಿಸುವುದು
  3. ಚಿಂತೆ ,ಮಾನಸಿಕ ಒತ್ತಡ
  4. ಭಾರವಾದ ವಸ್ತುಗಳನ್ನುಎತ್ತುವುದು
  5. ದೀರ್ಘ ಕಾಲ ಕುಳಿತಿರುವುದು / ತಪ್ಪಾದ ಭಂಗಿ
  6. ವಾತದೋಷವರ್ಧಕ ಆಹಾರ–ಅಹಾರ ಕ್ರಮ
  7. ತಂಪಿಗೆ ಹೆಚ್ಚು ಒಳಪಡುವುದು
  8. ಬೆನ್ನು/ಸೊಂಟ ಸ್ನಾಯುಗಳಲ್ಲಿ ಬಲಹೀನತೆ
  9. ಸ್ತೂಲ ಕಾಯ
  10. ದ್ವಿಚಕ್ರ ವಾಹನದಲ್ಲಿ ದೂರ ಪ್ರಯಾಣ
  11. ರಸ್ತೆ ಅಪಘಾತ
  12. ವಂಶ ಪಾರಂಪರೆ

ಇದರ ಪರಿಣಾಮವಾಗಿ ಸೊಂಟದ ಮೇಲ್ಭಾಗದಲ್ಲಿ ಸ್ತಬ್ಧತೆ ನೋವನ್ನುಂಟು ಮಾಡಿ ಆನಂತರ ತೊಡೆ ಮಂಡಿ ಪಕ್ಕೆಲಬು ಪಾದಗಳಿಗೆ ನೋವು ಆವರಿಸುತ್ತದೆ.  ಈ ಸಮಸ್ಯೆ ಚಳಿಗಾಲದಲ್ಲಿ ಹೆಚ್ಚು ಸೊಂಟ ಭಾಗದಲ್ಲಿ ಪ್ರತ್ಯೇಕವಾಗಿ ಎಲ್ 4 ಮತ್ತು ಎಲ್ 5 ಬೆನ್ನು ಮೂಳೆಯ ಮದ್ಯೆ ಇರುವ ಸಯಾಟಿಕ ನರದ ಮೇಲೆ ಒತ್ತಡ ಬೀಳುವುದರಿಂದ ಈ ನೋವು ಉಂಟಾಗುತ್ತದೆ.

ಮುಖ್ಯ ಲಕ್ಷಣಗಳು 

  1. ಸೊಂಟ ಭಾಗದಲ್ಲಿ ನೋವು
  2. ಕೆಳದಂಡಕ್ಕೆ ಕಠಿಣತೆ
  3. ಕೆಲವರಿಗೆ ಕಾಲುಗಳಿಗೆ ಕೆಳಗೆ ಕಿರಿಕಿರಿ/ ಮದ್ದುತನ
  4. ಹೆಚ್ಚು ಕುಳಿತು ಏಳುವಾಗ ನೋವು
  5.  ಮಲಗಿದಾಗ ಅಥವಾ ಬೆಳಿಗ್ಗೆ ಏಳುವಾಗ ಹೆಚ್ಚು ನೋವು
  6. ಸೂಜಿಯಿಂದ ಚುಚ್ಚಿ ದಂತಾಗುವುದು
  7. ಕಾಲಿನಲ್ಲಿ ಜೋಮು ಹಿಡಿಯುವುದು
  8. ಸ್ಪರ್ಶಜ್ಞಾನ ಕಡಿಮೆಯಾಗುವುದು
  9. ನೋವು ನಿವಾರಕ ಮಾತ್ರೆಗಳಿಂದ ಇನ್ನಷ್ಟು ಸಮಸ್ಯೆಗಳು ಕಾಣಿಸುತ್ತವೆ ಆದ್ದರಿಂದ ಬೆನ್ನು ಸಂಬಂಧಿತ ಸಮಸ್ಯೆಗೆ ಆರಂಭದಲ್ಲೇ ಚಿಕಿತ್ಸೆ ಪಡೆಯುವುದು ಸೂಕ್ತ.

ಆಯುರ್ವೇದ ಚಿಕಿತ್ಸೆ  :  ಇದರಲ್ಲಿ ಮೂರು ವಿಧವಾದ ಚಿಕಿತ್ಸೆಗಳಿವೆ

  • ನಿಧಾನ ಪರಿವರ್ಜನ
  • ಶಮನ ಚಿಕಿತ್ಸೆ
  • ಶೋಧನ ಚಿಕಿತ್ಸೆ
    ನಿಧಾನ ಪರಿವರ್ಜನ ಅಂದರೆ ವ್ಯಾಧಿಗೆ ಕಾರಣವಾದ ವಿಷಯಗಳನ್ನು ಪರಿಪಾಲಿಸದೆ ಇರುವಂಥದ್ದು. ಉದಾ: ವಿರುದ್ಧ ಆಹಾರ ಸೇವನೆ, ರಾತ್ರಿ ಜಾಗರಣೆ ಮಾಡಿ ಹಗಲು ನಿದ್ರೆ ಮಾಡುವುದು.

ಶಮನ ಚಿಕಿತ್ಸೆ
ವ್ಯಾಧಿ ದೋಷಗಳನ್ನು ಶಮನ ಮಾಡುವುದಕ್ಕೆ ಕೊಳ್ಳುವ ಔಷಧಗಳು.
ಇದರಲ್ಲಿ ರೋಗಿಯ ಬಲದ ಮೇಲೆ ಚೂರ್ಣ, ಗುಳಿಗೆ,ಕಷಾಯ, ಲೇಹ್ಯ,ತೈಲದಂತಹ ಔಷಧಗಳನ್ನು
ರೋಗಿಗೆ ನೀಡಲಾಗುತ್ತದೆ.
ಶೋಧನ ಚಿಕಿತ್ಸೆ
ವ್ಯಾಧಿ ತೀವ್ರತೆಯು ಶಮನ ಚಿಕಿತ್ಸೆಯಿಂದ ನಿಂತು ಹೋಗದಿದ್ದರೆ ಕೆಲವರಿಗೆ ಪಂಚಕರ್ಮ ಅಥವಾ ಶೋಧನಾ ಚಿಕಿತ್ಸೆ ನೀಡಲಾಗುವುದು.

ಆದ್ದರಿಂದ ವಾತ ಪಿತ್ತ ಕಫದಿಂದ ಗುಣಪಡಿಸಲು ಶರೀರ ಶುದ್ಧಿಯಿಂದ ಅಗ್ನಿ ಬಲವನ್ನು ಹೆಚ್ಚು ಮಾಡಲಾಗುತ್ತದೆ. ಈ ಚಿಕಿತ್ಸೆ ವಿಧಾನದಿಂದ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಾಧ್ಯ. ಆಯುರ್ವೇದದಲ್ಲಿ ಸ್ನೇಹಕರ್ಮದಿಂದ ಬೆನ್ನು ಮೂಳೆಗಳ ಮಧ್ಯೆ ಸ್ಥಗ್ಧತೆಯನ್ನು ಹೆಚ್ಚು ಮಾಡಿ ಮೂಳೆಗಳನ್ನು ಚಲಿಸುವುದಕ್ಕೆ ಸುಲಭವಾಗಿ ಅವಕಾಶ ಮಾಡಲಾಗುವುದು.

ಕಟಿ ಬಸ್ತಿ 
ಈ ಚಿಕಿತ್ಸೆಗೆ ಆಯುರ್ವೇದದಲ್ಲಿ ಹೆಚ್ಚು ಪ್ರಾಧಾನ್ಯ ನೀಡಲಾಗಿದೆ. ಸವೆದು ಹೋದಂತಹ ಕಾರ್ಟಿಲೆಜ್ ರಕ್ತ ಪ್ರಸಾರಣೆ ಹೆಚ್ಚಿಸಿ ಸೊಂಟ ನೋವಿನ ತೀವ್ರತೆಯನ್ನು ಕಡಿಮೆ ಮಾಡುವುದರಲ್ಲಿ ಇದು ಉಪಯೋಗಿ.

ಬಸ್ತಿಕರ್ಮ
ಗುದದ್ವಾರದ ಮೂಲಕ ಔಷಧಯುಕ್ತ ತುಪ್ಪ ಎಣ್ಣೆಅಥವಾ ಕಷಾಯವನ್ನು ಹಾಕುವುದು ಈ ಚಿಕಿತ್ಸೆ ಸಣ್ಣ ಹಾಗೂ ದೊಡ್ಡ ಕರುಳುಗಳಲ್ಲಿ ಎಂಟರಿಕ್ ನರ್ವಸ್ ಸಿಸ್ಟಮ್ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ನಾಡಿಕಣದಲ್ಲಿ ಏರ್ಪಡುವ ದೋಷಗಳನ್ನು ಸರಿ ಮಾಡಿ ಶಕ್ತಿ ಯನ್ನು ನೀಡುತ್ತದೆ.

Read also : ಗುದ-ಗತ ಖಾಯಿಲೆಗಳು (ಅನೋರೆಕ್ಟಲ್ ರೋಗಗಳು)ಮತ್ತು ಆಯುರ್ವೇದದಲ್ಲಿ ಅದರ ನಿರ್ವಹಣೆ

ಪ್ರಕೋಪಿಸಿದ ವಾತವನ್ನು ಸಹಜ ಸ್ಥಿತಿಗೆ ತರುತ್ತದೆ. ಆಯುರ್ವೇದ ಚಿಕಿತ್ಸೆ ನಂತರ ಉತ್ತಮ ಆಹಾರ ತೆಗೆದುಕೊಳ್ಳುವುದರ ಜತೆ ಹೆಚ್ಚು ವ್ಯಾಯಾಮ ಮಾಡಿದರೆ ಬೆನ್ನು ನೋವು ಮತ್ತು ಸೊಂಟ ನೋವಿನ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯ.

ಡಾ.ಬಿ . ಶಿವಕುಮಾರ್ ಎಂ .ಎಸ್ (ಶಲ್ಯತಂತ್ರ )
ಆಯುಷ್ ಆರೋಗ್ಯ ಮಂದಿರ 
ನರಗನಹಳ್ಳಿ ದಾವಣಗೆರೆ 
9886624267

TAGGED:Davanagere NewsDinamana.comKannada Newsಕನ್ನಡ ಸುದ್ದಿಡಾ.ಬಿ.ಶಿವಕುಮಾರ್ ಎಂ.ಎಸ್ದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಡಿ.2 ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ:ಕಲುಷಿತ ಜಗತ್ತಿನಲ್ಲಿ ಆರೋಗ್ಯವನ್ನು ರಕ್ಷಿಸುವುದು ಹೇಗೆ?ಲೇಖನ ಡಾ.ಎನ್.ಹೆಚ್.ಕೃಷ್ಣ
Next Article Applications invited ಅಲ್ಪಸಂಖ್ಯಾತರ ಸಮುದಾಯದ ಬಿ.ಎಡ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಇಸ್ರೋ ತರಬೇತಿ ಕಾರ್ಯಕ್ರಮಗಳ ವಿವರ: ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ಸಂಸದೆ ಡಾ.ಪ್ರಭಾ

ನವದೆಹಲಿ/ದಾವಣಗೆರೆ :  ನವದೆಹಲಿಯ ಸಂಸತ್ ಭವನದಲ್ಲಿ ಬುಧವಾರ ನಡೆದ ಪ್ರಶ್ನೋತ್ತರ ಸಮಯದ ಚರ್ಚೆಯ ವೇಳೆ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್…

By Dinamaana Kannada News

Davanagere news | ನರೇಗಾ ಕಾಮಗಾರಿ ಅನುಷ್ಠಾನದಲ್ಲಿ ವ್ಯತ್ಯಾಸ : ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯ

ಹರಿಹರ  (Davanagere ):  “ಮಹಾತ್ಮ ಗಾಂಧಿ ನರೇಗಾ ಯೋಜನೆ” ಯಡಿ ಹರಿಹರ ತಾಲ್ಲೂಕಿನ ಜಿಗಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಾಲುವೆ ಹೂಳು…

By Dinamaana Kannada News

Crime news:ಗಾಂಜಾ ಸೊಪ್ಪು ಸಾಗಾಟ ಇಬ್ಬರ ಬಂಧನ

ದಾವಣಗೆರೆ : ಅಕ್ರಮವಾಗಿ ಗಾಂಜಾ ಸೊಪ್ಪನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಅಖಿಯಾಜ್, ಸೈಯ್ಯದ್ ಶಪೀವುಲ್ಲಾ ಬಂಧಿತರು.…

By Dinamaana Kannada News

You Might Also Like

ಸಚಿವ ಕೃಷ್ಣಬೈರೇಗೌಡ
ತಾಜಾ ಸುದ್ದಿ

ದಶಕಗಳ ಭೂ ವಿವಾದಗಳಿಗೆ ಇತಿಶ್ರೀ : ಕಂದಾಯ ಇಲಾಖೆಯಿಂದ ಕ್ರಾಂತಿಕಾರಿ ‘ನನ್ನ ಭೂಮಿ’ ಅಭಿಯಾನ: ಸಚಿವ ಕೃಷ್ಣಬೈರೇಗೌಡ

By Dinamaana Kannada News
JOGALURE
ತಾಜಾ ಸುದ್ದಿ

ರಿನೀವ್ ವಿಂಡ್ ಫ್ಯಾನ್ ಕಂಪನಿಯ ಮುಖ್ಯಸ್ಥರ ಮೇಲೆ ಪಿಡಿಓಯಿಂದ ಹಲ್ಲೆ ಆರೋಪ : ದೂರು ದಾಖಲು     

By Dinamaana Kannada News
Power outage
ತಾಜಾ ಸುದ್ದಿ

ಫೆ.7ರಂದು ಬೆಳಿಗ್ಗೆ10 ರಿಂದ ಸಂಜೆ 5 ರವರೆಗೆ ಅರ್ಧ ದಾವಣಗೆರೆಯಲ್ಲಿ ಕರೆಂಟ್‌ ಇರಲ್ಲ

By Dinamaana Kannada News
Davanagere
ಅಪರಾಧ ಸುದ್ದಿ

ಹರಿಹರ|ಮನೆ ಕಳ್ಳತನ ಪ್ರಕರಣ:ಆರೋಪಿತರ ಬಂಧನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?