ಚನ್ನಗಿರಿ : ಚನ್ನಗಿರಿ ಪಟ್ಟಣದ ಪೊಲೀಸ್ ಠಾಣೆಯ ಮೇಲೆ ಕಳೆದ ಶುಕ್ರವಾರ ರಾತ್ರಿ ಕಲ್ಲುತೂರಾಟ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಗುರುವಾರ ಸಂಜೆ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಕ್ಷೇತ್ರದ ಶಾಸಕ ಬಸವರಾಜು ವಿ.ಶಿವಗಂಗಾ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯನ್ನು ನಡೆಸಿದರು.
ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವರು, ನಾನು ಈಗಾಗಲೇ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು ಮಟ್ಕಾ ಆಡಿಸುತ್ತಿದ್ದ ಎಂಬ ವಿಷಯಕ್ಕೆ ಮೃತ ಪಟ್ಟಿರುವ ವ್ಯಕ್ತಿಯನ್ನು ಠಾಣೆಗೆ ಕರೆದು ವಿಚಾರಣೆ ನಡೆಸುವ ಸಂದರ್ಭದಲ್ಲಿ ಆರೋಪಿ ಮೃತ ಪಟ್ಟಿದ್ದು ಮತ್ತು ಪೊಲೀಸ್ ಠಾಣೆಯ ಮೇಲೆ ಕಲ್ಲುತೂರಾಟ ಮಾಡಿದ ಎರಡು ಪ್ರಕರಣಗಳನ್ನು ತನ್ನಿಖೆ ನಡೆಸಲು ಅದೇಶಿಸಿದ್ದು ತನಿಖೆಯ ವರದಿ ಬಂದ ನಂತರ ಸತ್ಯಾಂಶ ಸಿಗಲಿದ್ದು ನಂತರ ಮುಂದಿನ ಕಾನೂನು ಕ್ರಮವನ್ನುಕೈಗೊಳ್ಳಲಾಗುವುದು ಎಂದರು.
ಪೊಲೀಸ್ ಠಾಣೆಯ ಮೇಲೆ ಕಲ್ಲು ತೋರಾಟದ ಪ್ರಕರಣದಲ್ಲಿ ಯಾವುದೇ ತನ್ನಿಖೆಗಳು ನಡೆಯದೆ ಪೊಲೀಸ್ ಅಧಿಕಾರಿಗಳನ್ನು ಏಕೆ ಅಮಾನತ್ತು ಗೊಳಿಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು ಮೇಲ್ನೋಟಕ್ಕೆ ಕಾಣಿಸಿದ ಅಂಶಗಳನ್ನು ಪರಿಗಣಿಸಿ ಡಿ.ವೈ.ಎಸ್.ಪಿ, ಸಿ.ಪಿ.ಐ ಅವರನ್ನು ಅಮಾನತ್ತು ಗೊಳಿಸಿದ್ದು ತನ್ನಿಖೆಯ ವರದಿ ಬಂದ ನಂತರ ಅವರ ತಪ್ಪು ಇಲ್ಲ ಎಂದು ಸಾಬೀತಾದ ಮೇಲೆ ಅವರನ್ನು ಮತ್ತೆ ಸೇವೆಗೆ ತೆಗೆದುಕೊಳ್ಳಲಾಗುವುದು ಎಂದರು.
ಕಲ್ಲು ತೋರಾಟಕ್ಕೆ ಸಂಬಂಧ ಪಟ್ಟಂತೆ ಸಿ.ಸಿ ಟಿ.ವಿ ಕ್ಯಾಮರಾದಲ್ಲಿನ ದೃಶ್ಯಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಪತ್ತೆಹಚ್ಚುತ್ತಿದ್ದು ಈವರೆಗೆ 30ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳುತ್ತಾ ನಲ್ಲೂರು ಗ್ರಾಮದಲ್ಲಿರುವ ಪೊಲೀಸ್ ಠಾಣೆಯನ್ನು ಉನ್ನತ ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇದ್ದು ಅದಷ್ಟು ಶೀಘ್ರದಲ್ಲಿಯೇ ಈ ಠಾಣೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.
ಪೊಲೀಸ್ ಠಾಣೆಯ ಮೇಲೆ ಕಲ್ಲುತೋರಾಟದ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಕೋಗಿದ್ದಾರೆ ಎಂದು ಬಿಜೆಪಿಯವರು ಮೇ.31ರ ಶುಕ್ರವಾರ ಚನ್ನಗಿರಿ ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಪಾಕಿಸ್ತಾನ ಜಿಂದಾಬಾದ್ ಎಂದು ಕೋಗಿದ್ದರ ಬಗ್ಗೆ ಸಾಕ್ಷಿ ನೀಡಲಿ ಅಂತವರ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳಲಿದ್ದು ವಿನಾಕಾರಣ ಆರೋಪ ಮಾಡಿದರೆ ಆರೋಪ ಮಾಡಿದವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.