ದಾವಣಗೆರೆ (Davanagere): ಪ್ರಕರಣ ದಾಖಲಾಗಿ 48 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿ 5.50 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಚುರ್ಚಗುಂಡಿ ಗ್ರಾಮದ ಪಿ.ಎಸ್.ಶಿವರಾಜ ಆಲಿಯಾಸ್ ಶಿವು (35) ಬಂಧಿತ ಆರೋಪಿ. ಮಾ.17 ರಂದು ಹೊನ್ನಾಳಿ ಪಟ್ಟಣದ ಉಪನ್ಯಾಸಕಿ ಜೆ.ಎಸ್.ಸಾಗರಿಕ ಎಚ್.ಬಿ.ಸಂತೋಷ ಎಂಬುವರ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಬಗ್ಗೆ ದೂರು ದಾಖಲಿಸಿದ್ದರು.
ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ್, ಜಿ.ಮಂಜುನಾಥ್, ಚನ್ನಗಿರಿ ಉಪವಿಭಾಗ ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಹೊನ್ನಾಳಿ ಠಾಣೆ ಪಿಐ ಸುನೀಲ್ ಕುಮಾರ್ ಸಿಬ್ಬಂದಿ ತಂಡ ಆರೋಪಿ ಬಂಧಿಸಿ 5.50 ಲಕ್ಷ ರೂ. ಮೌಲ್ಯದ 109 ಗ್ರಾಂ ಚಿನ್ನಾಭರಣ, ಬೆಳ್ಳಿಯ ಅಭರಣ ವಶಪಡಿಸಿಕೊಂಡಿದ್ದಾರೆ.
48 ಗಂಟೆಯೊಳಗೆ ಪ್ರಕರಣ ಬೇಧಿಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.