Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಮರ್ಯಾದೆಗೇಡು ಹತ್ಯೆ ಕಾಯ್ದೆ|ಮಾನ್ಯಪಾಟೀಲ್ ಹೆಸರಲ್ಲಿ ಜಾರಿಯಾಗಲಿ: ಬಸವರಾಜ್ ಸೂಳೆಬಾವಿ ಒತ್ತಾಯ
ತಾಜಾ ಸುದ್ದಿ

ಮರ್ಯಾದೆಗೇಡು ಹತ್ಯೆ ಕಾಯ್ದೆ|ಮಾನ್ಯಪಾಟೀಲ್ ಹೆಸರಲ್ಲಿ ಜಾರಿಯಾಗಲಿ: ಬಸವರಾಜ್ ಸೂಳೆಬಾವಿ ಒತ್ತಾಯ

Dinamaana Kannada News
Last updated: January 2, 2026 9:59 am
Dinamaana Kannada News
Share
Honor Killings Act
SHARE

ಗದಗ: ಮರ್ಯಾದೆಗೇಡು ಹತ್ಯೆ ಕಾಯ್ದೆಯನ್ನು ಇನಾಂ ವೀರಾಪುರ ಗ್ರಾಮದಲ್ಲಿ ಮರ್ಯಾದಾಗೇಡು ಹತ್ಯೆಯಾದ ಮಾನ್ಯ ಪಾಟೀಲ್ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಸಾಹಿತಿ ಬಸವರಾಜ್ ಸೂಳೆಬಾವಿ ಒತ್ತಾಯಿಸಿದರು.

ಗದಗ ಘಟಕ ವತಿಯಿಂದ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮಾನ್ಯ ಪಾಟೀಲ್ ಮರ್ಯಾದಾ ಹತ್ಯೆ ವಿರೋಧಿಸಿ, ಹತ್ಯೆಯ ಹೊಣೆಗಾರಿಕೆ ಹೊತ್ತು ” ಪ್ರಾಯಶ್ಚಿತ್ತ ದಿನ”ವನ್ನು ಸತ್ಯಾಗ್ರಹದಲ್ಲಿ ಮಾತನಾಡಿದರು.

seem1 dinamaana ads

ದೇಶದ ಜಾತಿ ವ್ಯವಸ್ಥೆ ಮನುಷ್ಯರನ್ನು ಭಿನ್ನವಾಗಿ ನೋಡುವಂತ ವ್ಯವಸ್ಥೆಯಲ್ಲಿದ್ದೆವೆ. 12ನೇ ಶತಮಾನದಲ್ಲಿ ಬಸವಣ್ಣವರು ಹೇಳಿದಂತೆ ನಡೆದುಕೊಳ್ಳುತ್ತಿಲ್ಲ. ಲಿಂಗಾಯತವನ್ನ ಲಿಂಗಾಯತರು ಜಾತಿಯ ಶ್ರೇಷ್ಠತೆಯ ವ್ಯಸನದಲ್ಲಿ ಮುಳುಗಿಸಿದ್ದೆವೆ. ಜಾಗತಿಕ ಲಿಂಗಾಯತ ಮಹಾಸಭಾ ಈ ಪ್ರಾಯಶ್ಚಿತ್ತವನ್ನು ಆಕ್ರೋಶಿತರಾಗಿ ಪ್ರತಿಭಟಿಸುತ್ತಿಲ್ಲ ಇಲ್ಲಿ ನಮ್ಮನ್ನೇ ನಾವು ಅವಲೋಕಿಸಿಕೊಳ್ಳಲು ಮಾಡುತ್ತಿರುವ ದಿನ ಎಂದರು.

ಗದಗಿನ ಸಿದ್ದರಾಮ ಸ್ವಾಮಿಗಳು ಮಾತನಾಡಿ, “12ನೇ ಶತಮಾನದಲ್ಲಿ ಬಸವಣನವರು ಅನ್ಯಭಿನ್ನ ಸಂಸ್ಕೃತಿಗಳ ವಿರುದ್ಧ ಕ್ರಾಂತಿಯನ್ನೇ ಮಾಡಿದರು. ಆದರೆ, ಇವತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರೆಂದು ಸಾರುವ ಈ ಕಾಲದಲ್ಲಿ ಜಾತಿ ಶ್ರೇಷ್ಠತೆಯ ವ್ಯಸನದಲ್ಲಿ ಮಗಳನ್ನೇ ಮರ್ಯಾದಾ ಹತ್ಯೆ ಮಾಡುವಂತ ರಾಕ್ಷಸ ಮನಸ್ಥಿತಿಯನ್ನು ಕಂಡಾಗ ಬೇಸರವಾಗುತ್ತದೆ ಎಂದರು.

Read also : ನೂತನ ರಥಕ್ಕೆ ಆವರಗೊಳ್ಳ ಹಿರೇಮಠದ ಶ್ರೀಗಳಿಂದ ಕಳಸಾರೋಹಣ

ಧಾರವಾಡದ ಪ್ರೊ.ಶಶಿಧರ ತೋಟದೆವರು ಮಾತನಾಡಿ, ಮಾನ್ಯ ಪಾಟೀಲ್ ನನ್ನ ವಿದ್ಯಾರ್ಥಿನಿ ನಮ್ಮ ಹಿರಿಯ ಪ್ರೊಫೆಸರ್ ಸದಾನಂದಗೌಡ ಪಾಟೀಲ್ ಅವರ ಮೊಮ್ಮಗಳು. ಮಾನ್ಯ ನಮ್ಮ ಕಣ್ಣೇದುರೆ ಬೆಳೆದಿರುವ ಮಗಳು. ಈ ಘಟನೆ ನಡೆಯುವ ಪೂರ್ವದಲ್ಲಿ ಹಲವು ಬಾರಿ ನಾವು ಮಾನ್ಯಳ ತಂದೆಗೆ ತಿಳಿಸಿ ಹೇಳುವ ಕೆಲಸ ಮಾಡಿದೆವು. ಆ ವ್ಯಕ್ತಿಯಲ್ಲಿ ಇದ್ದಂತ ಜಾತಿ ಹಾಗೂ ಸ್ವಃ ಶ್ರೇಷ್ಠತೆಯ ವ್ಯಸನ ಅಂತ ಕ್ರೌರ್ಯ ಮಾಡಲು ಪ್ರೇರೇಪಿಸಿತು. ಇದು ರಾಕ್ಷಸ ಮನಸ್ಥಿತಿ” ಎಂದು ಮಾನ್ಯಳ ಜೊತೆಗಿನ ಬಾಂಧವ್ಯ ಹಾಗೂ ಘಟನೆಯ ಕುರಿತು ಖೇದ ವ್ಯಕ್ತಪಡಿಸಿದರು.

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತಿಚೆಗೆ ಮಾನ್ಯ ಪಾಟೀಲ್ ಮರ್ಯಾದಗೇಡು ಹತ್ಯ ಖಂಡಿಸಿ ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ, ಬಸವ ಕೇಂದ್ರ ವಿವಿಧ ದಲಿತ-ಪ್ರತಗತಿಪರ ಸಂಘಟನೆಗಳು ಹಾಗೂ ವಿವಿಧ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಎಸ್.ಎಸ್.ಹರ್ಲಾಪುರ, ಶಿವನಗೌಡ ಗೌಡ, ಎಸ್.ಎ ಮುಜಿದ, ಎಚ್.ಡಿ.ಡಬರಿ, ಬಿ.ಆರ್.ದಿವದಾರ, ಎಲ್.ಎಮ್.ಹೊಸಳ್ಳಿ, ಮಹಾಂತೇಶ ಮದ್ನೂರ, ಪಾಂಡಪ್ಪ ಲಮಾಣಿ, ಮಾರುತಿ. ಕೆ.ಅಂಗಡಿ, ಕರಿಯಪ್ಪ ಸಂಶಿ, ಚನ್ನಬಸಪ್ಪ ಅಂಗಡಿ, ಎಮ್.ಬಿ.ಲಿಂಗದಾಳ, ಶರೀಫ್ ಬಿಳೆಯೆಲಿ, ಮುತ್ತು ಬೆಳೆಯೆಲಿ, ಆನಂದ ಸಿಂಗಾಡಿ, ಅನೀಲ್ ಕಾಳೆ ಪರಸುರಾಮ ಕಾಳೆ, ಯಲ್ಲಪ್ಪ ರಾಮಗೇರಿ, ಅಶೋಕ ಬರಗುಂಡಿ, ಶೇಖಣ್ಣ ಕವಳಿಕಾಯಿ, ಶ್ರೀದೇವಿ ಶೆಟ್ಡರ, ಗವರಕ್ಕ ಬಡಿಗಣ್ಣವರ, ಪದ್ಮಾ ಹಂಜಿಗಿ, ಗಿರಿಜಾ ಹಸಬಿ, ಸಹನಾ ಹಾತಲಗಿ, ಸುಜಾತ ವಾರದ, ಅಕ್ಕಮಹಾದೇವಿ ಚೆಟ್ಟಿ, ಶಿವಲೀಲಾ ಅಕ್ಕಿ, ಅನ್ನಪೂರ್ಣ ಬರಗುಂಡಿ, ಸರೋಜಾ ಮುಗುದ ತಡಸದ, ರೇಣುಕಾ ಕರಿಗೌಡರ, ಜಯಶ್ರೀ ಹುಬ್ಬಳ್ಳಿ, ಸುವರ್ಣ ಹೊಸಂಗಡಿ ಹಾಗೂ ಸರೋಜ ಲಿಂಗದಾಳ ಇದ್ದರು.

job news dinamaana ads
TAGGED:Dinamana.comHonor Killings ActKannada Newsಕನ್ನಡ ಸುದ್ದಿಮರ್ಯಾದೆಗೇಡು ಹತ್ಯೆ ಕಾಯ್ದೆ
Share This Article
Twitter Email Copy Link Print
Previous Article Davanagere ನೂತನ ರಥಕ್ಕೆ ಆವರಗೊಳ್ಳ ಹಿರೇಮಠದ ಶ್ರೀಗಳಿಂದ ಕಳಸಾರೋಹಣ
Next Article internal reservation ರಾಜ್ಯ ಸರ್ಕಾರ ಒಳಮೀಸಲಾತಿ ಗೊಂದಲ ಸರಿಪಡಿಸಲು ಒತ್ತಾಯ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಸೈಬರ್ ಅಪರಾಧ ತಡೆಗೆ ತಾಂತ್ರಿಕ ತರಬೇತಿ ಕಡ್ಡಾಯ : ಗೃಹ ಸಚಿವ ಡಾ: ಜಿ.ಪರಮೇಶ್ವರ್

ದಾವಣಗೆರೆ  :  ಮನೆ-ಮನೆಗೆ ಪೊಲೀಸ್ ಪೊಲೀಸ್ ಅತ್ಯಂತ ಸರಳವಾಗಿ ಮನೆಗಳಿಗೆ ತಲುಪಿ ಜನಸ್ನೇಹಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ರೂಪಿಸಿದ ಯೋಜನೆ…

By Dinamaana Kannada News

ದಾವಣಗೆರೆ|ಅನಧಿಕೃತ ಚರ್ಮರೋಗ ಚಿಕಿತ್ಸಾಲಯಗಳಿಗೆ ದಂಡ ಮತ್ತು ಶಾಶ್ವತ ಬಂದ್ : ಡಿಸಿ

ದಾವಣಗೆರೆ,ಸೆ.29 : ಅನಧಿಕೃತ ಚರ್ಮರೋಗ ಚಿಕಿತ್ಸಾ ಕೇಂದ್ರಗಳನ್ನು ತೆರೆದರೆ ಅಂತಹ ಕ್ಲಿನಿಕ್ ಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗುವುದು ಮತ್ತು ನಗರದಲ್ಲಿ…

By Dinamaana Kannada News

ಚಿತ್ರಕಲಾ ಶಿಕ್ಷಕರಿಂದ 50 ಮೀಟರ್ ಬಟ್ಟೆಯಲ್ಲಿ ಮತದಾನ ಜಾಗೃತಿ

ದಾವಣಗೆರೆ.ಏ.26 :  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಏರ್ಪಡಿಸಲಾಗಿದ್ದ 50 ಮೀಟರ್ ಬಟ್ಟೆಯಯಲ್ಲಿ ಮತದಾನ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಯುವಜನರಲ್ಲಿ ಆರೋಗ್ಯ ಅರಿವು, ಸಾಮಾಜಿಕ ಹೊಣೆಗಾರಿಕೆ ಅವಶ್ಯ : ಡಾ.ಬಿ.ಡಿ.ಮುರುಳಿಧರ

By Dinamaana Kannada News
Davanagere
ತಾಜಾ ಸುದ್ದಿ

ಹಜರತ್ ಮೌಲಾನಾ ಸಗೀರ್ ಅಹಮದ್ ಖಾನ್ ರಶಾದಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆೆ ತರಬೇತಿ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಫಾಸ್ಟ್ ಫುಡ್ ತಯಾರಿಕೆ ಉಚಿತ ತರಬೇತಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?