ದಾವಣಗೆರೆ (Davanagere) : ಮನೆಕಳ್ಳತನ ಪ್ರಕರಣ ದಾಖಲಾಗಿ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆರೋಪಿಯಿಂದ 5.98 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ಇಮ್ದಾದ್ ಬಂಧಿತ ಆರೋಪಿ.
ಜೂನ್ 3 ರಂದು ದೊಡ್ಡ ಬಾತಿಯ ಫಾತಿಮಾ ಎಂಬುವವರು ಮನೆ ಬೀಗ ಹಾಕಿಕೊಂಡು ಶುಂಠಿ ವ್ಯಾಪಾರ ಮಾಡಲು ಹರಿಹರಕ್ಕೆ ಹೋಗಿದ್ದರು. ನಂತರ ರಾತ್ರಿ 8 ಗಂಟೆಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿತರ ಪತ್ತೆಗಾಗಿ ಎಎಸ್ಪಿ ಮಂಜುನಾಥ ಜಿ ಹಾಗೂ ಡಿವೈಎಸ್ಪಿ ಬಸವರಾಜ್ ಬಿ. ಎಸ್ ಮಾರ್ಗದರ್ಶನದಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕಿರಣ್ ಕುಮಾರ್ ರವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಕೆಲವು ದಿನಗಳ ಹಿಂದೆ ಪರಿಚಯವಾಗಿದ್ದ ಆರೋಪಿ ಸೋಡ್ ವ್ಯಾಪಾರಿ ಇಮ್ದಾದ್ (44) ಈತನನ್ನು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
Read also : Davanagere | ವೃದ್ಧ ದಂಪತಿ ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ
ಆರೋಪಿಯಿಂದ 71 ಗ್ರಾಂ ತೂಕದ ಬಂಗಾರದ ಆಭರಣಗಳು ಅಂದಾಜು ಬೆಲೆ 5,30,000- ರೂ ಗಳು ಹಾಗೂ 2) 75 ಗ್ರಾಂ ಬೆಳ್ಳಿ ವಸ್ತುಗಳು ಅಂದಾಜು ಬೆಲೆ 16,000/- ರೂ ಗಳು ಮತ್ತು 3)2090/- ರೂ ನಗದು ಹಣ ಸೇರಿದಂತೆ ಸಂಪೂರ್ಣ ಸ್ವತ್ತನ್ನು ಹಾಗು ಕೃತ್ಯಕ್ಕೆ ಬಳಸಿದ 50,000/- ರೂ ಬೆಲೆ ಸ್ಕೂಟರ್ ನ್ನು ಆರೋಪಿನಿಂದ ವಶಪಡಿಸಿಕೊಂಡಿದ್ದು, ಒಟ್ಟು 5,98,090 ರೂ ಮೌಲ್ಯದ ಸ್ವತ್ತನ್ನು ಜಪ್ಪು ಮಾಡಿದ್ದಾರೆ.
ಪತ್ತೆ ಕಾರ್ಯದಲ್ಲಿ ಭಾಗಿಯಾದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಪಿ.ಐ ಕಿರಣ್ ಕುಮಾರ್ ಇ.ವೈ, ಪಿಎಸ್‍ಐ ಜೋವಿತ್ ರಾಜ್, ಹಾಗೂ ಠಾಣಾ ಸಿಬ್ಬಂದಿ ನಾಗಭೂಷಣ, ವೀರೇಶ್ ಪಿ.ಎಂ. ಹನುಮಂತಪ್ಪ ಸಿ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಕಾಂತ್ ಶ್ಲಾಘಿಸಿದ್ದಾರೆ.