Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ- ಸಂಸ್ಕೃತಿ ಕೊಟ್ಟರೆ ದೇಶದ ಸತ್ಪಜೆಗಳಾಗುತ್ತಾರೆ: ಸ್ವಾಮೀಜಿ
ತಾಜಾ ಸುದ್ದಿ

ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ- ಸಂಸ್ಕೃತಿ ಕೊಟ್ಟರೆ ದೇಶದ ಸತ್ಪಜೆಗಳಾಗುತ್ತಾರೆ: ಸ್ವಾಮೀಜಿ

Dinamaana Kannada News
Last updated: November 16, 2025 11:50 am
Dinamaana Kannada News
Share
Davanagere
SHARE
ದಾವಣಗೆರೆ: ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕೊಡುವ ಏಕೈಕ ಶಾಲೆ ಈಶ್ವರಮ್ಮ ಶಾಲೆಯಾಗಿದೆ. ಶಾಲೆಯಲ್ಲಿ ನಡೆಸುವ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರು ಸಂಸ್ಕಾರವಂತರಾಗಿರುವುದರಿಂದ ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಲು ಸಾಧ್ಯವಾಗಿದೆ ಎಂದು  ಶ್ರೀ ಜಡೆ ಸಿದ್ದ ಶ್ರೀ ಶಿವಯೋಗೀಶ್ವರ ಮಠದ ಡಾ. ಶ್ರೀ ಶಿವಾನಂದ ಸ್ವಾಮಿಗಳು  ಹೇಳಿದರು.
ನಗರದ ಪಿ.ಜೆ.ಬಡಾವಣೆಯ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಭಾನುವಾರ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮ ಶತಮಾನೋತ್ಸವದ ಅಂಗವಾಗಿ ಶಾಲಾ ಪೋಷಕರಿಂದ ಶ್ರೀ ಸತ್ಯ ಸಾಯಿ ಪಾದುಕಾ ಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಂದಾ ದೀಪ ಬೆಳಗಿಸಿ ಪ್ರತಿನಿತ್ಯ ಪಾದುಕೆ ಪೂಜೆಯನ್ನು ಮಾಡುವುದರಿಂದ ಮಕ್ಕಳು ಪೋಷಕರನ್ನು ನೋಡಿ ಕಲಿಯುತ್ತಾರೆ. ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕೊಟ್ಟರೆ ದೇಶದ ಸತ್ಪಜೆಗಳಾಗುತ್ತಾರೆ. ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಆಧ್ಯಾತ್ಮ ಭಾವವನ್ನು ಬೆಳೆಸಿದವರೇ ಸಿರಿವಂತರು ಎಂದು ತಿಳಿಸಿದರು.
ನಮ್ಮಲ್ಲಿ ಪ್ರೇಮ, ಕರುಣೆ, ದಯೆ, ಆಧ್ಯಾತ್ಮದ ಭಾವವಿದ್ದರೆ ಯಾವ ಭಯವೂ ಇರುವುದಿಲ್ಲ. ಆಧ್ಯಾತ್ಮದ ತವಕ ಭಕ್ತಿಯ ಭಾವವಿದ್ದರೆ ಜೀವನ ಸಾರ್ಥಕವಾಗುವುದು. ಶಿಕ್ಷಕರಿಗೆ ಇರುವಷ್ಟೇ ಹೊಣೆಗಾರಿಕೆ ಪೋಷಕರಲ್ಲಿ ಇರಬೇಕು. ಆಧ್ಯಾತ್ಮ ಮತ್ತು ಸಂಸ್ಕಾರವಿಲ್ಲದ ಶಿಕ್ಷಣ ಪರಿಮಳ ಇಲ್ಲದ ಹೂವಿನಂತಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ವಾಹನಗಳಿಗೆ ಬ್ರೇಕ್ ಇದೆ. ಆದರೆ ನಮ್ಮ ಮನಸ್ಸಿಗೆ ಬ್ರೇಕ್ ಇಲ್ಲದಂತಾಗಿದೆ. ನಮ್ಮ ಮನಸ್ಸಿಗೆ ಬ್ರೇಕ್ ಎಂದರೆ ಅದು ಆಧ್ಯಾತ್ಮದ ಭಾವ ಮತ್ತು ಸಂಸ್ಕಾರವಾಗಿದೆ. ಅಂತಹ ನಮ್ಮ ಭಾರತೀಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಯನ್ನು ಮಕ್ಕಳಲ್ಲಿ ಬೆಳೆಸಬೇಕೆಂದು ಕಿವಿಮಾತು ಹೇಳಿದರು.
ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಆರ್. ಸುಜಾತ ಕೃಷ್ಣ ಮಾತನಾಡಿ, ಶಾಲೆಯಲ್ಲಿ ಒಂದನೇ ತರಗತಿಯಿಂದ 10 ನೇ ತರಗತಿಯವರೆಗೆ ಎಲ್ಲಾ ಶಿಕ್ಷಕರು ಬಾಲವಿಕಾಸ ತರಗತಿಗಳನ್ನು ತೆಗೆದುಕೊಂಡು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿದ್ದಾರೆ. ವಿದ್ಯೆ ಜೀವನಕ್ಕಾಗಿ ಅಲ್ಲ, ಜೀವನದ ಸಾರ್ಥಕತೆಗಾಗಿ ಎಂದು ಸ್ವಾಮಿ ಹೇಳಿರುವಂತೆ ನಮ್ಮ ಬದುಕು ಸಾರ್ಥಕವಾಗಬೇಕು. ಮಕ್ಕಳಲ್ಲಿ ಸೇವೆ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸಿದಾಗ ಅವರು ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
Read also : ದಾವಣಗೆರೆ: ಏಕಲವ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್,  ಶಾಸ್ರೋಕ್ತ ಪೂಜಾ ವಿಧಿ-ವಿಧಾನಗಳೊಂದಿಗೆ ಶ್ರೀ ಸಾಯಿ ಅಷ್ಟೋತ್ತರ ಶತನಾಮಾವಳಿ ಮತ್ತು ಸಾಯಿ ಪಾದುಕಾ ಶತನಾಮಾವಳಿ ಹೇಳುವುದರ ಮೂಲಕ ಶ್ರೀ ಸತ್ಯ ಸಾಯಿ ಪಾದುಕಾ ಪೂಜೆಯನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ವಿ.ಎಸ್.ರೆಡ್ಡಿ , ವನಜಾ ರೆಡ್ಡಿ ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್, ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ, ಶಿಕ್ಷಕಿ ಬಿ.ಶ್ರೀ ದೇವಿ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Applications invited ದಾವಣಗೆರೆ: ಏಕಲವ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
Next Article ಗರ್ಭಕೋಶದಲ್ಲಿದ್ದ ಬೃಹತ್ ಗಾತ್ರದ ಗಡ್ಡೆ: ಯಶಸ್ವಿ ಶಸ್ರ್ತ ಚಿಕಿತ್ಸೆ ನಡೆಸಿದ ವೈದ್ಯರು

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ ಸಿಆರ್‌ಸಿ ಕೇಂದ್ರದಲ್ಲಿ ಮಾ ೭ ರಂದು ವಿಶ್ವ ಸಾಮಾಜಿಕ ನ್ಯಾಯ ದಿನ

  ದಾವಣಗೆರೆ ಸಿಆರ್‌ಸಿ ಕೇಂದ್ರದಲ್ಲಿ ಮಾ ೭ ರಂದು ವಿಶ್ವ ಸಾಮಾಜಿಕ ನ್ಯಾಯ ದಿನ ದಾವಣಗೆರೆ: ನಗರದ ದೇವರಾಜ್ ಅಸರು…

By Dinamaana Kannada News

ಸ್ತ್ರೀಯರ ಸಾಧನೆ : ಎನ್ ಎಫ್ ಕಿತ್ತೂರ್

ಅತಿರಥ ಮಹಾರಥರಿಗೆ ಮಣ್ಣು ತಿನ್ನಿಸಿ. ವಿಶ್ವದ ನಕ್ಷೆಯಲ್ಲಿ ಚಾಪು ಮೂಡಿಸಿ. ಸರಳ ಗುಣದಿಂದಲೇ ಮಹಾನ್ ಎನ್ನಿಸಿ. ಸಾಧಕೀಯರ ಸಾಧನೆಯ ನಾನಿಂದು…

By Dinamaana Kannada News

ಕಲಾವಿದರ ಮಾಸಾಶನ : ಅರ್ಜಿ ಆಹ್ವಾನ

ದಾವಣಗೆರೆ :  ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ಮಾಸಾಶನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ನಾಡು ನುಡಿಯ ಸೇವೆ, ಕಲೆ ಸಂಸ್ಕøತಿ…

By Dinamaana Kannada News

You Might Also Like

Daavanagere
ಅಪರಾಧ ಸುದ್ದಿ

ಮನೆ ಕಳ್ಳತನ ಪ್ರಕರಣ:12 ಗಂಟೆಯಲ್ಲಿ ಆರೋಪಿ ಬಂಧನ

By Dinamaana Kannada News
Daavanagere
ತಾಜಾ ಸುದ್ದಿ

ನಿಮ್ಹಾನ್ಸ್ ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭೇಟಿ:ಸಮಗ್ರ ಪರಿಶೀಲನೆ

By Dinamaana Kannada News
Dr. D. Francis
ಅಭಿಪ್ರಾಯ

poem|ಮನವು ಹೇಳದ ಮಾತು:ಡಾ.ಡಿ. ಫ್ರಾನ್ಸಿಸ್

By Dinamaana Kannada News
B. Srinivas
ಅಭಿಪ್ರಾಯ

poem|ತಾಯಂದಿರು:ಬಿ.ಶ್ರೀನಿವಾಸ

By ಬಿ.ಶ್ರೀನಿವಾಸ
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?