ದಾವಣಗೆರೆ (Davangere District) : ನಗರದ ಎರಡು ಖಬರಸ್ತಾನ್ ಗಳಿಗೆ ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ಸ್ ಯುವಕರ ತಂಡದ ವಾಟರ್ ಫ್ರೂಫ್ ಟೆಂಟನ್ನು ಉಡುಗೊರೆಯಾಗಿ ನೀಡಿದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಸಿರಾಜ್ ಮಾತನಾಡಿ, ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ಸ್ ಖಬರಸ್ತಾನಕ್ಕೆ ನೀಡಿರುವ ವಾಟರ್ ಪ್ರೂಫ್ ಟೆಂಟ್‌ನಿಂದ ಬಹಳ ಅನುಕೂಲವಾಗುವುದು. ಸಮಾಜ ಮುಖಿ ಕೆಲಸ ಮಾಡಿರುವ ಯುವಕರಿಗೆ ಶುಭವಾಗಲಿ ಎಂದು ಹಾರೈಸಿದರು.
ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮೊಅಜಂ ಪಾಷಾ ಮಾತನಾಡಿ, ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ಸ್ ಯುವಕರು ಎರಡು ಖಬರಸ್ತಾನಕ್ಕೆ ಉಡುಗೊರೆಯಾಗಿ ನೀಡಿರುವ ಟೆಂಟ್ ಬಗ್ಗೆ ಶ್ಲಾಘಿಸಿದರು.
ತಂಜೀಮ್ ಉಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ದಾದು ಸೇಠ್ ಮಾತನಾಡಿ, ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ಸ್ ಯುವಕರ ತಂಡವು ಎರಡು ಖಬರಸ್ತಾನಗಳಿಗೆ ಮಳೆ ಮತ್ತು ಬಿಸಿಲ ಸಮಯದಲ್ಲಿ ದಫನ್ ಮಾಡುವಾಗ ಅನುಕೂಲವಾಗಲೆಂದು ನೀಡಿರುವ ಟೆಂಟ್‌ಗಳಿಂದ ಬಹಳ ಉಪಯೋಗವಾಗಲಿದೆ ಎಂದರು.
ಉಲಮಾ ಅಹಲೇ ಸುನ್ನತ್ ನ ಧರ್ಮಗುರು ಆಲೇರಜಾ ಮಾತನಾಡಿ, ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ಸ್ ಯುವಕರು ನೀಡಿರುವ ವಾಟರ್ ಪ್ರೂಫ್ ಟೆಂಟ್‌ನಿಂದ ಬಹಳ ಅನುಕೂಲವಾಗುವುದು ಎಂದು ಹೇಳಿದರು.
ವಕ್ಫ್ ನಿರೀಕ್ಷಕ ಸೈಯದ್ ಜಾಕೀರ್ ಹುಸೇನ್, ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ ಅಧ್ಯಕ್ಷ ರಹಮತುಲ್ಲಾ, ಕಾರ್ಯದರ್ಶಿ ಅಹಮದ್ ಬಾಷ, ರಾಜಾ ಭಕ್ಷಿ, ರೆಹಮಾನ್ ಭಕ್ಷಿ, ಅಬ್ದುಲ್ ಜಬ್ಬಾರ್, ಇಮ್ರಾನ್ ರಜಾ, ಸಾಬಿರ್ ಅಲಿ ಸೌದಾಗರ್, ಶಂಶುದ್ದೀನ್, ಅಹಮದ್ ಬಾಷಾ, ಖಲೀಲ್ ಹಾಗೂ ಇತರರು ಇದ್ದರು.