ದಾವಣಗೆರೆ, ಜೂ.28 : ಜಿಲ್ಲಾ ವ್ಯಾಪ್ತಿಯಲ್ಲಿ 206 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಪ್ರಸ್ತುತ ಖಾಲಿ ಇರುವ 16 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆ ನೇಮಕ ಮಾಡಿಕೊಳ್ಳಲು ಜೂ.29 ರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಹುದ್ದೆಗಳು;
ರಾಜಗೊಂಡನಹಳ್ಳಿ , ಬೇತೂರು, ಕೊಂಡಜ್ಜಿ, ಹೆಬ್ಬಾಳು , ಕಬ್ಬಳ, ಉಕ್ಕಡಗಾತ್ರಿ, ಹಳೆಬಾತಿ, ಪಾಂಡೋಮಟ್ಟಿ, ಕಂದನಕೋವಿ, ಕಕ್ಕರಗೊಳ್ಳ, ಬನ್ನಿಕೋಡು, ವಡೆಯರಹತ್ತೂರು, ಓಬನ್ನನಹಳ್ಳಿ(ನರಗನಹಳ್ಳಿ) , ದೊಡ್ಡಬ್ಬಿಹೆರೆ , ಅಣಜಿ , ಗುಡಾಳು ಇಲ್ಲಿ ಖಾಲಿ ಇವೆ.
ಆಸಕ್ತ ಆಭ್ಯರ್ಥಿಗಳು ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ವೆಬ್ಸೈಟ್ davanagere.nic.in ಮೂಲಕ ಅರ್ಜಿ ಸಲ್ಲಿಸಿ ನಂತರ ಸ್ವೀಕೃತಿ ಪತ್ರದ ಪ್ರತಿಯೊಂದಿಗೆ ದಾಖಲೆಗಳನ್ನು ಲಗತ್ತಿಸಿ ಜಿಲ್ಲಾ ಪಂಚಾಯತ್ ಕಚೇರಿ ಆಡಳಿತ ವಿಭಾಗದ ಕೊಠಡಿ ಸಂ.25 ಗೆ ಜುಲೈ 20 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಖ್ಯೆ 08192-226655 ಗೆ ಕರೆ ಮಾಡುವುದು ಜಿಲ್ಲಾ ಪಂಚಯಾತ್ ಉಪಕಾರ್ಯದರ್ಶಿ ತಿಳಿಸಿದ್ದಾರೆ.
ahmedraza808832@gmail.com
dd79