ದಾವಣಗೆರೆ ಜು.04 : ದಾವಣಗೆರೆ ತಾಲ್ಲೂಕು ಮಾಯಕೊಂಡ ಹೋಬಳಿಯ ಬಾಡ ವೃತ್ತದ ಗ್ರಾಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಓದಲು ಹಾಗೂ ಬರೆಯಲು ಚೆನ್ನಾಗಿ ಬಲ್ಲವರಾಗಿರಬೇಕು ,ಅರ್ಜಿದಾರರು ಖಾಲಿ ಇರುವ ಗ್ರಾಮಸಹಾಯಕ ಹುದ್ದೆಯ ವೃತ್ತದ ನಿವಾಸಿಯಾಗಿರಬೇಕು ಮತ್ತು ಕೇಂದ್ರ ಸ್ಥಾನದಲ್ಲಿಯೇ ವಾಸವಾಗಿರಬೇಕು.
ಗ್ರಾಮಸಹಾಯಕ ತಳವಾರರು, ತೋಟೆಗಳು, ನೀರುಗಂಟೆಗಳು ವಾಲಿಕರ್ಸ್, ಮಹರಸ್, ಬಾರಿಕರಸ್, ವೀರಾಡಿಗಳು, ಬಲೂತಿದಾರಸ್ ತಳಿಯಾರಿಸ್ ವೆಟಿಸ್, ಕುಲುವಡಿಸ್, ಉರ್‍ಗಾನಿಸ್ ಕುಟುಂಬದವರಿಗೆ ಆದ್ಯತೆ ನೀಡಲಾಗುವುದು, ಅರ್ಜಿದಾರರು 25 ವರ್ಷ ವಯೋಮಾನದವರಾಗಿರಬೇಕು. ಅರ್ಜಿ ಸಲ್ಲಿಸಲು ಜುಲೈ 5 ಕೊನೆಯ ದಿನವಾಗಿರುತ್ತದೆ.
ಅರ್ಜಿಯೊಂದಿಗೆ ಜನ್ಮ ದಿನಾಂಕ (ವರ್ಗಾವಣೆ ಪತ್ರ, ಎಸ್.ಎಸ್.ಎಲ್ ಸಿ ಅಂಕಪಟ್ಟಿ ಲಗತ್ತಿಸುವುದು ), ವಾಸಸ್ಥಳ ದೃಢೀಕರಣ, (ಸಂಬಂಧಿಸಿದ ಉಪತಹಸೀಲ್ದಾರರಿಂದ ) ಪಡೆದ ಪತ್ರ ಲಗತ್ತಿಸುವುದು, ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ, ಪಡಿತರ ಚೀಟಿ, ವ್ಯಾಸಾಂಗ ಪೂರೈಸಿದ ಬಗ್ಗೆ ದಾಖಲೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಚೇರಿ ಸಲ್ಲಿಸಬೇಕೆಂದು ತಹಶೀಲ್ದಾರ್ ಡಾ.ಅಶ್ವಥ್ ತಿಳಿಸಿದ್ದಾರೆ.