ದಾವಣಗೆರೆ : ನಗರದ ಜೈನ್ ವಿದ್ಯಾಲಯದ ಸಿ.ಬಿ.ಎಸ್.ಇ., ವಿಭಾಗ, ರಾಜ್ಯ ಪಠ್ಯಕ್ರಮ ವಿಭಾಗ ಮತ್ತು ಕಾಲೇಜು ವಿಭಾಗಗಳಿಂದ 10ನೇ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಯೋಗದ ಉದ್ದೇಶ ಮತ್ತು ಅದರ ಮಹತ್ವವನ್ನು ಯೋಗ ಗುರುಗಳಾದ ಅ
ಜ್ಜಪ್ಪನವರು ಮಕ್ಕಳಿಗೆ ವಿವರಿಸಿದರು. ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಶಿವರಾಜ್ ಎನ್. ಮಾಳಗಿ ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರುಗಳು, ಪ್ರಾಂಶುಪಾಲರು, ಶಿಕ್ಷಕರು, ಶಾಲಾ ಸಿಬ್ಭಂದಿ ಮತ್ತು ಮಕ್ಕಳು ಭಾಗವಹಿಸಿದ್ದರು.