ದಾವಣಗೆರೆ : ಪಿ.ಜೆ. ಬಡಾವಣೆ ಮತ್ತು ಶಾಮನೂರಿನಲ್ಲಿ ಜೈನ್ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆದಲ್ಲಿ ‘ವಿಶ್ವ ಪರಿಸರ ದಿನಾಚರಣೆ’ ಯ ಪ್ರಯುಕ್ತ ‘ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಕಾರ್ಯದರ್ಶಿ ರಮೇಶಕುಮಾರ್ ಜೆ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುನಿಟಿ ಹೆಲ್ತ್ ಸೆಂಟರ್‍ನ ಡಾ|| ಬಿ.ಎಸ್. ನಾಗಪ್ರಕಾಶ್ ಹಾಗೂ ಪಂಕಜಕುಮಾರ್, ಮ್ಯಾನೇಜರ್, ಇಂಡಿಯನ್ ಬ್ಯಾಂಕ್, ಇವರುಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗೆ ಪರಿಸರದ ರಕ್ಷಣೆಯ ಅರಿವನ್ನು ಕುರಿತು ಉಪನ್ಯಾಸ ನೀಡಲಾಯಿತು. ಉತ್ಸಾಹಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಯಿತು.