ಹರಿಹರ : ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳು ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಜರುಗಿಸುವಂತೆ ಆಗ್ರಹಿಸಿ ತಾಲೂಕು ಜಯ ಕರ್ನಾಟಕ ಸಂಘಟನೆಯವರು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಎಸ್. ಗೋವಿಂದ್ ಮಾತನಾಡಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಗಳ ಬಳಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಲ್ಲಿ ಔಷಧಿಗಳು ಇದ್ದರೂ ಸಹ ಔಷಧಿಗಳನ್ನು ಪ್ರತ್ಯೇಕ ಔಷಧಿ (ಖಾಸಗಿ) ಅಂಗಡಿಗಳಿಂದ ತರಲು ಚೀಟಿಯನ್ನು ಬರೆದುಕೊಡುತ್ತಿದ್ದಾರೆ. ಇದರಿಂದ ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿಕೊಂಡು ನಂಬಿ ಬರುವ ಬಡ ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ.
ಗ್ರಾಮಾಂತರ ಪ್ರದೇಶದಿಂದ ಬಡವರು ಸರಕಾರಿ ಅಸ್ಪತ್ರೆಗಳಿಗೆ ಬರುತ್ತಾರೆ. ಅದರೆ, ವೈದ್ಯರು ಹೊರಗಡೆ ಔಷಧಿ ಬರೆದುಕೊಡುತ್ತಿರುವುದು ಸರಿಯಲ್ಲಿ . ಈ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಔಷಧಿಗಳ ಲಭ್ಯತೆ ದೊರೆಯುವಂತೆ ಆಗಬೇಕು ಹಾಗೂ ಜನ ಔಷಧಿ ಕೇಂದ್ರದಲ್ಲಿ ವ್ಯವಸ್ಥಿತವಾದ ಔಷಧಿಗಳನ್ನು ದೊರಕುವಂತೆ ಆಗಬೇಕು ಮತ್ತು ಗರ್ಭಿಣಿ ಹೆಣ್ಣು ಮಕ್ಕಳಿಗೆ ಸ್ಕ್ಯಾನಿಂಗ್ ವ್ಯವಸ್ಥೆ ಇರುವುದಿಲ್ಲ ಥೈರಾಯ್ಡ್ ಟೆಸ್ಟಿಂಗ್ ಇಲ್ಲಿ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣವೇ ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಔಷಧಿಗಳನ್ನು ದೊರಕುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಯಾವುದೇ ರೋಗಿಗೆ ಹೊರಗಡೆಯಿಂದ ಔಷಧಿಗಳನ್ನು ತರುವಂತೆ ಚೀಟಿ ಬರೆದುಕೊಟ್ಟಲ್ಲಿ ಔಷಧಿಗಳ ವೆಚ್ಚವನ್ನು ತಮ್ಮ ಇಲಾಖೆ ತುಂಬಿಕೊಡಬೇಕು ಹಾಗೂ ಸ್ಕ್ಯಾನಿಂಗ್ ಮತ್ತು ಥೈರಾಯ್ಡ್ ಬ್ಲಡ್ ಟೆಸ್ಟ್ ಗಳ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಉಪಾಧ್ಯಕ್ಷರಾದ ಎಂ. ಆರ್. ಆನಂದ್ ಪ್ರಧಾನಕಾರ್ಯದರ್ಶಿ ಸುನಿಲ್ ಕುಮಾರ್ ಸಿ.ಎಚ್.ಗ್ರಾಮ ಘಟಕದ ಅಧ್ಯಕ್ಷ ಭರತ್ ಭಾನುವಳ್ಳಿ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ್. ದಾದಾಪೀರ್ .ಯೋಗೇಶ್. ಆದರ್ಶ್ ಸುದೀಪ್. ಮಹಾರುದ್ರ .ರಿಯಾಜ್ ರವಿ. ಪ್ರದೀಪ್ .ಗಿರಿ.ಹನುಮಂತ ಉಪಸ್ಥಿತರಿದ್ದರು.