ದಾವಣಗೆರೆ (Davanagere) : ಟೇಕ್ವಾಂಡೋ ಗರ್ಲ್’ (Taekwondo Girl) ಸಿನಿಮಾವು ಆ.30ರಂದು ತೆರೆ ಬರಲಿದೆ ಎಂದು ಚಿತ್ರದ ನಿರ್ದೇಶಕ ರವೀಂದ್ರ ವೆಂಶಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಅತ್ರೇಯ ಕ್ರಿಯೇಷನ್ಸ್ ಬ್ಯಾನರ್‌ನೆಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ 12 ವರ್ಷದ ಬಾಲ ನಟಿ ಋತು ಸ್ಪರ್ಶ ಟೇಕ್ವಾಂಡೋ (Taekwondo)ಸಮರ ಕಲೆ ಕಲಿತು, ಐದು ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ. ಅಂತಾರಾಷ್ಟ್ರೀಯ ನೃತ್ಯಗಾರ್ತಿಯೂ ಆಗಿರುವ ಅಪ್ಪಟ ದೇಸಿ ಕಲಾ ಪ್ರತಿಭೆಯ ಮೊದಲ ಚಿತ್ರ ಇದಾಗಿದೆ ಎಂದರು.
ಬೆಂಗಳೂರಿನ ರಾಜಾಜಿನಗರ, ಜಾಲಹಳ್ಳಿ, ಸಹಕಾರ ನಗರದಲ್ಲಿ 30 ದಿನಗಳ ಕಾಲ ಚಿತ್ರೀಕಸಿಲಾಗಿದೆ. ಈ ಚಿತ್ರಕ್ಕೆ ಮಾಸ್ಟರ್ ವಿಫ ರವಿ ಸಮರ ಕಲೆ ಹೇಳಿಕೊಟ್ಟಿದ್ದಾರೆ ಎಂದು ವಿವರಿಸಿದರು.
Read also : ವಿಭಿನ್ನ ಕಥಾಹಂದರ ಹೊಂದಿರುವ “ಹಗ್ಗ” ಚಿತ್ರ ಆಗಸ್ಟ್ ನಲ್ಲಿ ತೆರೆಗೆ
ನಿರ್ಮಾಪಕಿ ಡಾ.ಸುಮಿತ ಪ್ರವೀಣ್ ಮಾತನಾಡಿ, ವಿಯಟ್ನಾಂನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಈ ಚಿತ್ರ ಆಯ್ಕೆಯಾಗಿದ್ದು, ಅತ್ಯುತ್ತಮ ಬಾಲ ಕಲಾವಿದೆ ಪ್ರಶಸ್ತಿಗೆ ಋತು ಸ್ಪರ್ಶ ಆಯ್ಕೆಯಾಗಿದ್ದಾರೆ ಎಂದರು.