Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಬೇಕು : ಜಿ.ಎಸ್.ಸುಭಾಷ್ ಚಂದ್ರ ಬೋಸ್
ತಾಜಾ ಸುದ್ದಿ

ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಬೇಕು : ಜಿ.ಎಸ್.ಸುಭಾಷ್ ಚಂದ್ರ ಬೋಸ್

Dinamaana Kannada News
Last updated: May 6, 2024 5:20 pm
Dinamaana Kannada News
Share
Sahitya Parishad
ಕನ್ನಡ ಸಾಹಿತ್ಯ ಪರಿಷತ್ತಿನ 110 ನೇ ಸಂಸ್ಥಾಪನ ದಿನಾಚರಣೆ
SHARE

ದಾವಣಗೆರೆ  :  109 ವರ್ಷಗಳ ಭವ್ಯ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಿ ರೂಪುಗೊಳ್ಳಬೇಕು. ಆಗ ಮಾತ್ರ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಉದ್ದೇಶ ಈಡೇರುತ್ತದೆ ಎಂದು ಸಾಂಸ್ಕೃತಿಕ ಚಿಂತಕ ಹಾಗೂ ವಿಶ್ರಾಂತ ಉಪನ್ಯಾಸಕ ಜಿ.ಎಸ್.ಸುಭಾಷ್ ಚಂದ್ರ ಬೋಸ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 110 ನೇ ಸಂಸ್ಥಾಪನ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಮಾತ್ರವಲ್ಲದೇ ಅನೇಕ ಮಹನೀಯರು, ಸಾಹಿತಿಗಳು ಬೆಳೆಸಿದ್ದಾರೆ. 1970 ರ ಈಚೆಗೆ ಸಾಹಿತ್ಯ ಪರಿಷತ್ತು ಅತ್ಯಂತ ಬೃಹತ್ತಾಗಿ ಬೆಳೆದಿದೆ. ಅನೇಕ ಸಮ್ಮೇಳನಗಳನ್ನು ನಾಡಿನ ವಿವಿಧ ಸ್ಥಳಗಳಲ್ಲಿ ಆಯೋಜಿಸಿ ಜನರಿಗೆ ಹತ್ತಿರವಾಗಲು ಪ್ರಯತ್ನಿಸಿದೆ. ಆದರೆ ಜನ ಸಾಮಾನ್ಯರ ಪರಿಷತ್ತಾಗದೇ ಇರುವುದು ಖೇದಕರ ಎಂದು ಬೇಸರ ವ್ಯಕ್ತಪಡಿಸಿದರು.

ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು ಸಾಗಬೇಕಾದರೆ ಅದರ ನಡೆ ಹಳ್ಳಿಗಳ ಕಡೆಗೆ ಇರಬೇಕಾಗುತ್ತದೆ. ಪ್ರಸ್ತುತ ಸಾಹಿತ್ಯ ಪರಿಷತ್ತು ಕೋಟಿ ಸದಸ್ಯತ್ವದ ಗುರಿಯನ್ನು ಹೊಂದಿದೆ. ಸದಸ್ಯತ್ವವನ್ನು ಪಡೆದರೆ ಸಾಲದು ತಳಮಟ್ಟದ ಹಾಗೂ ಉದಯೋನ್ಮುಖ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವೂ ಆಗಬೇಕು.  ಕನ್ನಡಿಗರು ಭಾರತಾಂಬೆ ಹಾಗೂ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರವನ್ನು ತಮ್ಮ ಮನೆಯಲ್ಲಿಟ್ಟು ಪೂಜೆ ಮಾಡುವ ದಿನಗಳು ಬರುತ್ತದೆಯೋ ಆಗ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರತ್ತ ಸಾಗಿದೆ ಎಂದರ್ಥ. ಆ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ  ಕೆ.ರಾಘವೇಂದ್ರ ನಾಯರಿಯವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಭಿನಂದಿಸಿ ಸನ್ಮಾನ ಪತ್ರ ನೀಡಿ ಹೃದಯಸ್ಪರ್ಶಿ ಸನ್ಮಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿದ ನಾಯರಿ ಮಾತನಾಡಿ, ಸಂಸ್ಥಾಪನಾ ದಿನವನ್ನು ನಾಡಿನೆಲ್ಲೆಡೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಸಾಹಿತ್ಯ ಪರಿಷತ್ತು ಕನ್ನಡ-ಕನ್ನಡಿಗ-ಕರ್ನಾಟಕದೊಂದಿಗೆ ಹೇಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ ಎನ್ನುವುದರ ಬಗ್ಗೆ ಯುವಜನರಿಗೆ ತಿಳಿಹೇಳುವುದರ ಮೂಲಕ ಅವರನ್ನೂ ಸಾಹಿತ್ಯ ಪರಿಷತ್ತಿನೊಂದಿಗೆ ಬೆರೆಸಬೇಕು ಎಂದರು.
ಸನ್ಮಾನಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದ ಸಲ್ಲಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಪರಿಷತ್ತಿನ ಮೂಲ ಆಶಯದಂತೆ ನಮ್ಮ ಜಿಲ್ಲೆಯಲ್ಲಿ ಹಲವಾರು ಬರಹಗಾರರಿಗೆ, ಕವಿಗಳಿಗೆ, ಸಾಹಿತಿಗಳಿಗೆ, ವಾಗ್ಮಿಗಳಿಗೆ, ಕಲಾವಿದರುಗಳಿಗೆ ಅವಕಾಶವನ್ನು ಕಲ್ಪಿಸಿ ಪ್ರೋತ್ಸಾಹಿಸಿದೆ. ತಮ್ಮ ಅಧ್ಯಕ್ಷಾವಧಿಯ ಕಳೆದ 30 ತಿಂಗಳುಗಳಲ್ಲಿ 3 ಜಿಲ್ಲಾ ಸಮ್ಮೇಳನಗಳನ್ನು ಹಾಗೂ 6 ತಾಲೂಕು ಸಮ್ಮೇಳನಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಆಯೋಜಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಹಾಗೆಯೇ ಜನರು ಕೂಡಾ ಸಾಹಿತ್ಯ ಪರಿಷತ್ತಿನ ಮೇಲೆ ಪ್ರೀತಿ, ಕಾಳಜಿ ಹಾಗೂ ಗೌರವವನ್ನು ಬೆಳೆಸಿಕೊಂಡು ಪರಿಷತ್ತು ಆಯೋಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು ಎಂದರು.

ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಮತಿ ಜಯಪ್ಪ, ಸಂಗೀತ ಶಿಕ್ಷಕ ರೇವಣಸಿದ್ದಪ್ಪ ಹಾಗೂ ವಚನಾಮೃತ ಬಳಗದ ಸಂಸ್ಥಾಪಕಿ ಸೌಮ್ಯ ಸತೀಶ್  ಪರಿಷತ್ತಿನ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ   ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ  ಸಂಘಟನಾ ಕಾರ್ಯದರ್ಶಿ ಗಳಾದ   ಸಿ.ಜಿ.ಜಗದೀಶ್ ಕೂಲಂಬಿ,   ಜಿಗಳಿ ಪ್ರಕಾಶ ತಾಲೂಕು ಪರಿಷತ್ತಿನ ಪದಾಧಿಕಾರಿಗಳಾದ  ಕೆ.ಎಸ್.ವೀರೇಶ್ಪ್ರಸಾದ್, ಎನ್.ಎಸ್.ರಾಜು, ಮಲ್ಲಮ್ಮ, ಜ್ಯೋತಿ ಉಪಾಧ್ಯಾಯ, ರುದ್ರಾಕ್ಷಿ ಬಾಯಿ, ಭೈರವೇಶ್ವರ, ನಾಗರಾಜ ಸಿರಿಗೆರೆ, ಪರಮೇಶ್ವರಪ್ಪ ದಾಗಿನಕಟ್ಟೆ, ಬೇತೂರು ಎಂ ಷಡಾಕ್ಷರಪ್ಪ, ಆರ್.ಶಿವಕುಮಾರ್ ಹಾಗೂ ಬ್ಯಾಂಕ್ ನೌಕರರ ಸಂಘದ ವಿಶ್ವನಾಥ್ ಬಿಲ್ಲವ, ಪರಶುರಾಮ, ಹೆಚ್.ಎಸ್.ತಿಪ್ಪೇಸ್ವಾಮಿ, ಜಿ.ರಂಗಸ್ವಾಮಿ, ಅಜಿತ್ ಕುಮಾರ್, ಹೆಚ್.ಸುಗೂರಪ್ಪ, ನಾಗೇಶ್ವರಿ ನಾಯರಿ, ಸಾಕಮ್ಮ, ಶ್ರೀಧರ ಪೆರೂರು, ಜ್ಞಾನೇಶ್ವರ ಮಾಳವಾಡೆ, ಅಣ್ಣಪ್ಪ ನಂದಾ  ಹಾಗೂ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ಎ.ಮಹಾಲಿಂಗಪ್ಪ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಶಿವಶಂಕರ್, ಡಾ.ಎಂ.ಕೆ.ಗೌಡ, ಸಿಂಗಾಪುರ ಪರಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

TAGGED:110th Foundation Day of Kannada Sahitya Parishad.dinamaana.comLatest Kannada Newsಕನ್ನಡ ಸಾಹಿತ್ಯ ಪರಿಷತ್ತಿನ 110 ನೇ ಸಂಸ್ಥಾಪನ ದಿನಾಚರಣೆ.ಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article Sakhi ಕಂಗೊಳಿಸುತ್ತಿವೆ ಸಾಂಪ್ರದಾಯಿಕ, ಸಖಿ, ಯುವ, ವಿಶೇಷಚೇತನರ ಮತಗಟ್ಟೆಗಳು
Next Article sanduru - stories ಸೊಂಡೂರಿನ ಕಗ್ಗತ್ತಲೆಯ ಕಥನಗಳು-16 ಅವನನ್ನು ಹುಚ್ಚನೆಂದು ನಾನಂತೂ ಕರೆಯಲಾರೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

Davanagere : ಟ್ರಾಕ್ಟ್‌ರಗಳಿಗೆ ಕೇಜ್ ವ್ಹೀಲ್ ಹಾಕಿ ರಸ್ತೆಗೆ ಇಳಿದರೆ ಕ್ರಮ : ಜೆ.ಸಂಜೀವ್ ಕುಮಾರ್

ದಾವಣಗೆರೆ  (Davanagere): ಗ್ರಾಮೀಣ ಭಾಗದಲ್ಲಿ ಟ್ರಾಕ್ಟ್‌ರಗಳಿಗೆ  ಕೇಜ್ ವ್ಹೀಲ್ ಹಾಕಿಕೊಂಡು ಸಾರ್ವಜನಿಕ ರಸ್ತೆಗಳನ್ನು ಹಾಳುಮಾಡುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿರುವ…

By Dinamaana Kannada News

ಭಾರತೀಯರ ಖಾತೆಗೆ 15 ಲಕ್ಷ ಇರಲಿ, 15 ಪೈಸೆಯೂ ಹಾಕಲಿಲ್ಲವಲ್ಲ ಏಕೆ ಮೋದಿಯವರೇ ? ಸಿ.ಎಂ. ಪ್ರಶ್ನೆ   

ಮೈಸೂರು ಮಾ 15:   ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಐದು ಕೋಟಿ ಫಲಾನುಭವಿಗಳನ್ನು ಅವಮಾನಿಸಬೇಡಿ. ಗ್ಯಾರಂಟಿಗಳು ಕನ್ನಡ…

By Dinamaana Kannada News

Davanagere | ರೈತನ ಮೇಲೆ ಕರಡಿ ದಾಳಿ: ಗಂಭೀರ ಗಾಯ

ಜಗಳೂರು: ಹೊಲಕ್ಕೆ ಹೋಗಿ ಮೋಟಾರ್ ಆನ್ ಮಾಡಿ ಮನೆಗೆ ವಾಪಾಸ್ಸಾಗುವ ಸಂದರ್ಭದಲ್ಲಿ ಕರಡಿ ದಾಳಿ ನಡೆಸಿ ರೈತನೊಬ್ಬ ಗಂಭೀರವಾಗಿ ಗಾಯಗೊಂಡಿರುವ…

By Dinamaana Kannada News

You Might Also Like

Eyes are waiting PR. Venkatesh
ತಾಜಾ ಸುದ್ದಿ

poem | ಕಣ್ಣುಗಳು ಕಾಯುತ್ತಿವೆ : ಪಿಆರ್. ವೆಂಕಟೇಶ್

By Dinamaana Kannada News
DAVANAGERE
ತಾಜಾ ಸುದ್ದಿ

ಭದ್ರಾ ಜಲಾಶಯದಲ್ಲಿ 176.9 ಅಡಿ ನೀರು : ತುಂಬಲು 9.1 ಅಡಿ ಮಾತ್ರ ಬಾಕಿ

By Dinamaana Kannada News
Davanagere
ತಾಜಾ ಸುದ್ದಿ

ಮಾಜಿ ಸೈನಿಕರ ಮಕ್ಕಳಿಗೆ ವಿವಿಧ ಶಿಷ್ಯವೇತನ ಮತ್ತು ನಗದು ಪ್ರಶಸ್ತಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?