kannada short story: ಸಿಂಧು ಪಟಪಟ ಮಾತನಾಡುವ ಚಿನುಕುರಳಿಯಂತೆ ಸದಾ ಲವಲವಿಕೆಯಿಂದ ಇದ್ದ ಹುಡುಗಿ. ಸುಂದರ ರೂಪ ಅತ್ಯಂತ ಬುದ್ಧಿವಂತೆ ಸೂಕ್ಷ್ಮತೆಗಳನ್ನು ಅರಿತ ಒಬ್ಬ ಅದ್ಭುತ ಹುಡುಗಿ ಓದಿನಲ್ಲೂ ಚತುರೆ, ಆದರೆ ಸ್ವಲ್ಪ ಹಠದ ಹುಡುಗಿ ಹಠ ಒಳ್ಳೆಯ ವಿಚಾರಕ್ಕಾದರೆ ನಮ್ಮನ್ನು ಮೇಲಕ್ಕೆ ಏರಿಸುತ್ತದೆ. ಅದೇ ಹಠ ಕೆಲವೊಮ್ಮೆ ನಮ್ಮನ್ನು ಪಾತಾಳಕ್ಕೂ ಇಳಿಸುತ್ತದೆ
ಸಿಂಧುವಿನ ಜೀವನದಲ್ಲೂ ಮುಖ್ಯ ಪಾತ್ರವಹಿಸಿದ್ದು ಇದೇ ಹಠ. ಸಿಂಧು ಎಲ್ಲರಿಗೂ ಬೇಕಾದ ನೆಚ್ಚಿನ ಹುಡುಗಿಯಾಗಿದ್ದಳು ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಲವಲವಿಕೆಯಿಂದ ಮಾಡುತ್ತಿದ್ದಳು. ಯಾರಿಗೂ ಯಾವುದಕ್ಕೂ ಹೆದರದವಳು, ಧೈರ್ಯ ಅವಳ ಬಲ ಅವಳು ಯಾವುದಕ್ಕೂ ಹೆದರುತ್ತಿರಲಿಲ್ಲ ಇಂತಹ ಹುಡುಗಿ ಒಬ್ಬ ಸುಂದರ ಹುಡುಗನಿಗೆ ಮನಸೋತಳು.
ಆದರೆ ಮನೆಯವರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಲು ಆಗದೆ ಬೇರೊಬ್ಬನನ್ನು ಮದುವೆಯಾದರೂ ಆ ವ್ಯಕ್ತಿ ತಾನು ವಿದ್ಯಾವಂತವೆಂದು ಹೇಳಿ ಅವಳಿಗೆ ಮೋಸ ಮಾಡಿದ್ದ. ಇದನ್ನು ತಿಳಿದ ಸಿಂಧು ಆಘಾತಕ್ಕೆ ಒಳಗಾದಳು ಅವನಿಂದ ದೂರವಿರಲು ನಿಶ್ಚಯಿಸಿದಳು. ಸಮಾಜಕ್ಕೆ ಹೆದರದೆ ಧೈರ್ಯವಾಗಿ ವಿಚ್ಛೇದನವನ್ನು ಪಡೆದುಕೊಂಡು ತಾನು ಪ್ರೀತಿಸಿದ್ದ ಹುಡುಗನನ್ನೇ ವಿವಾಹವಾದಳು.
ಅವನ ಪ್ರೀತಿ ಕೂಡ ಅಷ್ಟೇ ನಿಷ್ಟೆಯದ್ದು ಅವಳು ಇನ್ನೊಬ್ಬನನ್ನು ಮದ್ವೆ ಮಾಡಿಕೊಂಡು ಬಿಟ್ಟು ಬಂದರೂ ಅವಳನ್ನೇ ಮೊದಲಿನ ಪ್ರೀತಿಯಷ್ಟೇ ಪ್ರೀತಿಯಿಂದ ಸ್ವೀಕರಿಸಿದನು. ಈಗ ಅವಳ ಬದುಕು ಸುಂದರ ಸುಖಮಯವಾಗಿತ್ತು ಅವರ ಪ್ರೀತಿಯ ಸಂಕೇತವಾಗಿ ಒಂದು ಒಂದು ಹೆಣ್ಣು ಮಗು ಆಯಿತು ಸಮಾಜದಲ್ಲಿ ಒಳ್ಳೆಯ ಸ್ನೇಹಿತರನ್ನು ಗಳಿಸಿದಳು..ಎಲ್ಲರೊಂದಿಗೆ ಅತ್ಯಂತ ಆತ್ಮೀಯತೆ ಇಂದ ಇದ್ದಳು. ಓದಿನಲ್ಲೂ ಪ್ರಶಸ್ತಿಗಳನ್ನು ಹಾಗು ವೃತ್ತಿ ಜೀವನದಲ್ಲೂ ಒಳ್ಳೆಯ ಹೆಸರನ್ನು ಗಳಿಸಿದಳು…
ಹೀಗೆ ಅತ್ಯಂತ ಸುಂದರವಾಗಿ ನಡೆಯುತ್ತಿದ್ದ ಸಿಂಧುವಿನ ಜೀವನದಲ್ಲಿ ಒಂದು ಕೆಟ್ಟ ಗಳಿಗೆ ಆಗಮಿಸಿತು ಮುದ್ದಾದ ಮಗುವಿನೊಂದಿಗೆ ಜೀವನ ಮಾಡುತ್ತಿದ್ದ ಸಿಂಧು ಹಠದಿಂದಲೇ ಎಲ್ಲವನ್ನ ಗಳಿಸಿದ್ದಳು, ಆದರೆ ಅದೇ ಹಠ ಅವಳಿಗೆ ಮುಳ್ಳಾಯಿತು ಒಂದೇ ಒಂದು ಕಾರಣಕ್ಕೆ ಗಂಡನೊಂದಿಗೆ ವಾದಕ್ಕೆ ಇಳಿದ ಸಿಂಧು ನೇಣಿಗೆ ಶರಣಾದಳು, ತನ್ನ ಅಮೂಲ್ಯ ಜೀವನವನ್ನೇ ಹಾಳು ಮಾಡಿಕೊಂಡು ಮಗುವನ್ನು ತಾಯಿ ಇಲ್ಲದ ತಬ್ಬಲಿ ಮಾಡಿದಳು.
ಹಠ ಸಾಧನೆಗೂ ದಾರಿ, ಸಾವಿಗೂ ದಾರಿ ಎಂಬುದನ್ನ ನಾವು ಸಿಂಧುವಿನ ಬದುಕಿನಿಂದ ತಿಳಿಯಬಹುದು
ಸುಚಿತ್ರ (ಸುವಿ)
ದಾವಣಗೆರೆ