ದಾವಣಗೆರೆ ಆ.27 (Davangere District) : ಪ್ರಸಕ್ತ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗುವ ಸಿಇಟಿ, ನೀಟ್ ಮುಖಾಂತರ, ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ಬಿ.ಇ, ಬಿ.ಟೆಕ್, ಮತ್ತು ಬಿ.ಅಯುಷ್ ಇಂತಹ ಕೋರ್ಸ್‍ಗಳಿಗೆ, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃಧ್ಧಿ ನಿಗಮದಿಂದ ಅರಿವು ನವೀಕರಣ ಯೋಜನೆಯಡಿ ವಿಧ್ಯಾಭ್ಯಾಸ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನಿಗಮದ ವೆಬ್-ಸ್ಶೆಟ್ kmdconline.karnataka.gov.in ನಲ್ಲಿ ಆನ್‍ಲೈನ್ ಮುಖಾಂತರ ಅಕ್ಟೋಬರ್ 31 ರೊಳಗಾಗಿ ಅರ್ಜಿ ಸಲ್ಲಿಸಿ, ಪ್ರತಿಗಳನ್ನು ಸಂಬಂಧಪಟ್ಟ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು.
Read also : Davanagere Job Mela | ಆಗಸ್ಟ್ 30 ರಂದು ಉದ್ಯೋಗಮೇಳ
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ಧಿ ನಿಗಮ(ನಿ),ಕುರುಬರ ಹಾಸ್ಟೆಲ್ ಕಟ್ಟಡ, ಹದಡಿ ರಸ್ತೆ, ಜಯದೇವ ಸರ್ಕಲ್ ಹತ್ತಿರ, ದಾವಣಗೆರೆ ಇಲ್ಲಿಗೆ ಅಥವಾ ದೂ.ಸಂ:08192-232349 ಸಂಪರ್ಕಿಸಲು ಮಲ್ಲಿಕಾರ್ಜುನ್ ಮಠದ್ ತಿಳಿಸಿದ್ದಾರೆ.