ದಾವಣಗೆರೆ (Davanagere): ನಗರದ ಪ್ರತಿಷ್ಠಿತ ಯೋಗ ಕೇಂದ್ರವಾದ ಎಸ್‍ಎಎಸ್‍ಎಸ್ ಯೋಗ ಫೆಡರೇಷನ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಅಂತಾರಾಷ್ಟ್ರೀಯ ಯೋಗ ಪಟು, ಯೋಗ ಗುರು ಡಾ.ಎನ್.ಪರಶುರಾಮ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ಶಾಂತಿಗೃಹ ಪ್ಯಾಲೇಸ್ ರಸ್ತೆಯಲ್ಲಿರುವ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಆಡಿಟೋರಿಯಂನಲ್ಲಿ ನಡೆದ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ ಹಾಗೂ ಎಂ.ಎಂ.ಭಾರತ್ ಟಿವಿ ಸಂಯುಕ್ತ ಆಶ್ರಯದಲ್ಲಿ ನಡೆದ 79ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯೋಗ ಗುರು ಡಾ.ಎನ್.ಪರಶುರಾಮ್ ಅವರಿಗೆ ಎಂ.ಎಂ.ಭಾರತ್ ಟಿವಿಯ ಸಂಸ್ಥಾಪಕ ಡಾ.ಹುಸೇನ್, ಚಿತ್ರನಟಿ ಪ್ರೇಮ, ಶ್ರೀಗಳು, ಸಂಸ್ಥೆಯ ಗೌರವಾಧ್ಯಕ್ಷ ಅನು ಆರ್. ಅಮ್ಮ, ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಪ್ರಶಸ್ತಿಗೆ ಭಾಜನರಾಗಿರುವ ಯೋಗ ಗುರು ಡಾ.ಎನ್.ಪರಶುರಾಮ್ ಅವರಿಗೆ ಎಸ್‍ಎಎಸ್‍ಎಸ್ ಯೋಗ ಕೇಂದ್ರದ ನಿರ್ದೇಶಕರು, ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಲಯನ್ ವಾಸುದೇವ್ ರಾಯ್ಕರ್, ಪ್ರಧಾನಕಾರ್ಯದರ್ಶಿ ಡಾ.ಯು.ಸಿದ್ದೇಶ್ ಹಾಗೂ ನಗರದ ಸಂಘ-ಸಂಸ್ಥೆಗಳು, ಯೋಗ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
Read also : ಭಕ್ತಿ ಪಥದ ಹೊಸ ಸಮನ್ವಯ ತತ್ವ ಪ್ರತಿಪಾದಿಸಿದ ದಾರ್ಶನಿಕ : ಡಾ.ಎಚ್.ಎಂ. ಚಂದ್ರಶೇಖರಶಾಸ್ತ್ರಿ