ಹರಿಹರ (Davanagere) : ಸ್ಥಳೀಯ ಹಮಾಲಿ ಕಾರ್ಮಿಕರಿಗೆ ಕೆಲಸ ಕೊಡಲು ಆಗ್ರಹಿಸಿ ಕಳೆದ ಮೂರು ದಿನಗಳಿಂದ ಹರಿಹರದ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ ದಾಸ್ತಾನು ಮಳಿಗೆ ಎದುರು ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಮಧ್ಯ ದಾಸ್ತಾನು ಮಳಿಗೆ ಎದುರು ನಡೆಸುತ್ತಿದ್ದ ಧರಣಿಯನ್ನು ಹಮಾಲಿ ಕೆಲಸಗಾರರು ನಡೆಸುತ್ತಿದ್ದ ವಾಪಾಸ್ಸು ಪಡೆದಿದ್ದಾರೆ.
ಶುಕ್ರವಾರ ಸ್ಥಳಕ್ಕಾಗಮಿಸಿದ ಗುತ್ತೂರು ಠಾಣೆಯ ಪಿ.ಎಸ್.ಐ ಮಂಜುನಾಥ ಕುಪ್ಪೆಲೂರು, ಅಬಕಾರಿ ಪಿ.ಎಸ್.ಐ ಶೀಲಾ ಜೆ.ಕೆ ದಾಸ್ತಾನು ಮಳಿಗೆಯ ವ್ಯವಸ್ಥಾಪಕ ಗುಡದಯ್ಯ ಎಸ್ ಬಡ್ನಿ ಪ್ರತಿಭಟನಾಕಾರರೊಂದಿಗೆ ಚರ್ಚೆಸಿದ ನಂತರ ವಾಪಾಸ್ಸು ಪಡೆದರು.
Read also : Davanagere news | ಹರಿ ಅಲವೇಲು ಜಾದುಗಾರ್ಗೆ “ಕರ್ನಾಟಕ ಮುಕುಟಮಣಿ” ರಾಜ್ಯ ಪ್ರಶಸ್ತಿ
ಪ್ರತಿಭಟನಾಕಾರರ ಮನವಿ ಮೇರೆಗೆ 7 ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಹಳಬರು 36 ಜನ, ಹೊಸದಾಗಿ ೭ ಜನ ಸೇರಿ ಒಟ್ಟು 43 ಜನ ಹಮಾಲಿಗಳು ದಾಸ್ತಾನುಮಳಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಗ್ರಾಮಾಂತರ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಕುಪ್ಪೆಲೂರು ಮಾಹಿತಿ ನೀಡಿದ್ದಾರೆ.
ಜೈ ಕರ್ನಾಟಕ ಸಂಘಟನೆಯ ಅಧ್ಯಕ್ಷ ಗೋವಿಂದ, ಕಾರ್ಯದರ್ಶಿ ಆನಂದ, ಹಮಾಲಿ ಕೆಲಸಗಾರರಾದ ಬಾಬಣ್ಣ, ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.