ದಾವಣಗೆರೆ (Davanagere) : ಅಂಗವೈಕಲ್ಯ ಪಾಪವಲ್ಲ, ಬಿಕ್ಕಟ್ಟನ್ನು ಅವಕಾಶಗಳಾಗಿ ಪರಿವರ್ತಿಸುವ ಅವಕಾಶ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣನವರ ಹೇಳಿದರು.
ನಗರದ ಸಿಆರ್‍ಸಿ ಆವರಣದಲ್ಲಿ ಕರ್ನಾಟಕ ರಾಜ್ಯ ಲೋಕಾಯುಕ್ತ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಿಕಂದರಾಬಾದ್‍ನ ಬೌದ್ಧಿಕ ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆಯ ಆಡಳಿತಾತ್ಮಕ ನಿಯಂತ್ರಣದಡಿಯಲ್ಲಿ ಸಂಯೋಜಿತ ಪ್ರಾದೇಶಿಕ ಕೇಂದ್ರ, ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ (ದಿವ್ಯಾಂಗಜನ್), ಸಾಮಾಜಿಕ ನ್ಯಾಯ ಮತ್ತು ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರವು ‘ಅರಿವು ಜಾಗೃತಿ ಸಪ್ತಾಹವನ್ನು ಆಚರಿಸುತ್ತಿದ್ದು, 2024 ರ 28 ಅಕ್ಟೋಬರ್ ರಿಂದ ನವೆಂಬರ್ 3 ರವರೆಗೆ ಭಾರತದ ನಾಗರಿಕರಿಗೆ “ರಾಷ್ಟ್ರದ ಏಳಿಗೆಗಾಗಿ ಸಮಗ್ರತೆಯ ಸಂಸ್ಕøತಿ’ ಎಂಬ ವಿಷಯದೊಂದಿಗೆ ಜಾಗೃತಿ ಸಪ್ತಾಹದ ಅಂಗವಾಗಿ “ ಭ್ರಷ್ಟಚಾರ ಮುಕ್ತ ಭಾರತ” ಎಂಬ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
“ಭ್ರಷ್ಟಚಾರ ಮುಕ್ತ ಭಾರತ” ಆರ್‍ಪಿಡಬ್ಲ್ಯೂಡಿ ಕಾಯ್ದೆ, ಆರ್‍ಟಿಐ ಕಾಯ್ದೆ, ವಿಕಲಚೇತನರ ಹಕ್ಕುಗಳು ಮತ್ತು ಭಾರತ ಸರ್ಕಾರವು ಒದಗಿಸಿರುವ ನಿಬಂಧನೆಗಳು, ಯೋಜನೆಗಳ ಕುರಿತು ಅರಿವು ಮೂಡಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆಗೆ ವಿಕಲಾಂಗ ವ್ಯಕ್ತಿಗಳಿಗೆ ಒದಗಿಸುವ ಸಿಆರ್‍ಸಿ ಸೇವೆಗಳನ್ನು ನೋಡುವ ಮೂಲಕ ನಾನು ತುಂಬಾ ಸಂತೋಷಗೊಂಡಿದ್ದೇನೆ ಎಂದರು.
READ ALSO : Harihara |ಉದ್ಯೋಗ ಆಧಾರಿತ ಕೋರ್ಸ್ಗೆ ಆದ್ಯತೆ ನೀಡಿ : ಮೊಹಮ್ಮದ್ ನಸ್ರುಲ್ಲಾ
ಲೋಕಾಯುಕ್ತ ಪೊಲೀಸ್ ಅಧೀಕ್ಷಕ .ಎಂ.ಎಸ್.ಕೌಲಾಪೂರ ಮಾತನಾಡಿ, ಲಂಚ ನೀಡುವುದು ಮತ್ತು ತೆಗೆದುಕೊಳ್ಳುವುದು ಎರಡೂ ಅಪರಾಧಗಳೆಂದು ಪ್ರತಿಯೊಬ್ಬ ನಾಗರಿಕರು ಅರಿತು ಸೂಕ್ತ ಸರ್ಕಾರಗಳಿಂದ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎಂದರು.
ಸಿಆರ್‍ಸಿ ನಿರ್ದೇಶಕರಾದ ಮೀನಾಕ್ಷಿ ಮಾತನಾಡಿ, ನಮ್ಮ ಜಿಲ್ಲೆಯ ಪ್ರಗತಿಯಲ್ಲಿರುವ ಪ್ರಮುಖ ಅಡೆತಡೆಗಳಲ್ಲಿ ಒಂದು ಭ್ರಷ್ಟಚಾರವಾಗಿದೆ,ಭ್ರಷ್ಟಚಾರ ಮುಕ್ತ ಭಾರತ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಭ್ರಷ್ಟಚಾರ ಮತ್ತು ಸಂವೇದನಾಶೀಲರಾಗಿರಬೇಕು ಎಂದರು.
ಸಹಾಯಕ ಸಸ್ಯ ಆರೈಕೆದಾರರ ವೃತ್ತಿಪರ ತರಬೇತಿ ಕೋರ್ಸ್ ಪೂರ್ಣಗೊಳಿಸಿದ ಸಿಆರ್‍ಸಿ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸಿದ ಪ್ರಮಾಣಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಸಿಆರ್‍ಸಿ ವಿದ್ಯಾರ್ಥಿಗಳು, ವಿಕಲಚೇತನರು, ಸಿಆರ್‍ಸಿಯ 90 ಮಂದಿ ಭಾಗವಹಿಸಿದ್ದರು.