ದಾವಣಗೆರೆ .ಆ 06 (DAVANGERE ) ; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪ್ರಸ್ತಕ ಸಾಲಿಗೆ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣಕ್ರಮಗಳ ಪ್ರವೇಶಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ, ಬಿ.ಸಿ.ಎ, ಬಿ.ಲಿಬ್.ಐ.ಎಸ್ಸಿ, ಬಿ.ಎಸ್.ಡಬ್ಲ್ಯೂ, ಎಂ.ಎ, ಎಂ.ಕಾA, ಎಂ.ಎಸ್ಸಿ, ಎಂ.ಬಿಎ, ಎಂ ಸಿ ಎ ಎಂ.ಎಸ್.ಡಬ್ಲ್ಯೂ. ಎಂ.ಲಿಬ್.ಐ.ಎಸ್ಸಿ., ಪಿಜಿ ಸರ್ಟಿಫಿಕೇಟ್, ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಶಿಕ್ಷಣ ಕ್ರಮಗಳಿಗೆ ವಿಶ್ವವಿದ್ಯಾನಿಲಯದ ಅಂತರ್ಜಾಲ www. ksoumysuru.ac.in ಪೋರ್ಟಲ್ನಲ್ಲಿ ಪ್ರವೇಶಾತಿ ನೀಡಲಾಗುತ್ತಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ, ಡಿಫೆನ್ಸ್, ಮಾಜಿ ಸೈನಿಕರ ಮಕ್ಕಳಿಗೆ, ಆಟೋ, ಕ್ಯಾಬ್ ಡ್ರೈವರ್, ಕೆಎಸ್ಆರ್ಟಿಸಿ ನೌಕರರಿಗೆ ಮತ್ತು ಅವರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ.10 ರಷ್ಟು ವಿಶೇಷ ರಿಯಾಯಿತಿ ಇರುತ್ತದೆ.
DAVANAGERE JOB NEWS : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೋವಿಡ್ನಿಂದಾಗಿ ಮೃತರಾದ ಪೋಷಕರ ಮಕ್ಕಳಿಗೆ, ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಹಾಗೂ ತೃತೀಯ ಲಿಂಗ ವರ್ಗದವರಿಗೆ ಪೂರ್ಣಶುಲ್ಕ ವಿನಾಯಿತಿ ಇದೆ.
ಹೆಚ್ಚಿನ ಮಾಹಿತಿಗಾಗಿ ಶಾಮನೂರು ಹಿಂಭಾಗ ನಾಗನೂರು ರಸ್ತೆ, ಜೆ.ಹೆಚ್.ಪಟೇಲ್ ಬಡವಾಣೆಯಲ್ಲಿನ ಕರಾಮುವಿ ಪ್ರಾದೇಶಿಕ ಕೇಂದ್ರ ಅಥವಾ ಮೊ.8310676181, 9902517906,9916009318,