ದಾವಣಗೆರೆ (Davanagere) : ಮೊಬೈಲ್ ಸುಲಿಗೆ ಮಾಡಿದ್ದ ಯುವಕರನ್ನು ಕೆಟಿಜೆ ನಗರ ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.
ಅರವಿಂದ , ಕಿರಣನಾಯಕ ಬಂಧಿತ ಆರೋಪಿಗಳು.
ಅ.31ರಂದು ದಾವಣಗೆರೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು ಆಟೋದಲ್ಲಿ ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಯಾರೋ ಇಬ್ಬರು ಹುಡುಗರು ಮೊಬೈಲ್ ಅನ್ನು ಸುಲಿಗೆ ಮಾಡಿಕೊಂಡು ಹೋಗಿದ್ದಾರೆ ಎಂದು ಬಾಬು ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಕೆಟೆಜೆ ನಗರ ಪೊಲೀಸ್ ಠಾಣೆಯ ಪಿಐ ಸುನೀಲ್ ಕುಮಾರ್ ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಿ ದೂರಿನಲ್ಲಿ ನೀಡಿದ ಚಹರೆ ಗುರುತಿನ ಮಾಹಿತಿಯಂತೆ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಿ , 9,000/- ರೂ. ಬೆಲೆಯ Infinix HOT 401 ಕಂಪನಿಯ ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ಹೋಂಡಾ ಡಿಯೋ ಬೈಕನ್ನು ವಶ ಪಡಿಸಿಕೊಂಡಿದ್ದಾರೆ.
ಎಎಸ್ಪಿಗಳಾದ ವಿಜಯಕುಮಾರ್ ಎಂ.ಸಂತೋಷ್. ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್. ರವರ ನೇತೃತ್ವದ ತಂಡದ ಪಿ.ಎಸ್.ಐ ಸಾಗರ ಅತ್ತರವಾಲ ಮತ್ತು ಲತಾ.ಆರ್. ಹಾಗೂ ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಪುರುಶೋತ್ತಮ, ಸಿದ್ದಪ್ಪ, ಮಾರುತಿ.ಸಿ.ಜಿ. ಮತ್ತು ಶ್ರೀಮತಿ ಗೀತಾ.ಸಿ.ಕೆ. ರವರಗಳು ಇಬ್ಬರು ಆರೋಪಿತರನ್ನು 24 ಗಂಟೆಗಳ ಒಳಗಾಗಿ ಬಂಧಿಸಿ ಆರೋಪಿತರಿಂದ ಒಟ್ಟು 9,000/-ರೂ ಮೌಲ್ಯದ ಮೊಬೈಲ್ ಫೋನ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.
Read also : Davanagere | ನ.4-6 ಜನಜಾಗೃತಿ ಧರ್ಮ ಸಮ್ಮೇಳನ ಕಾರ್ಯಕ್ರಮ