ದಾವಣಗೆರೆ (Davanagere) : ದಲಿತ ಸಚಿವರುಗಳೇ ಬಿಜೆಪಿ ಗೆ ಟಾರ್ಗೆಟ್ ಆಗಿದೆ. ಪ್ರಿಯಾಂಕ ಖರ್ಗೆರವರ ನಾಯಕತ್ವ ಬೆಳೆಯುವುದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ ಎಂದು ಕೆಪಿಸಿಸಿ ಎಸ್.ಸಿ, ವಿಭಾಗದ ರಾಜ್ಯ ಸಂಚಾಲಕ, ಮಾಧ್ಯಮ ವಕ್ತಾರ ಶ್ರೀನಿವಾಸ್ (ಪಾಪಣ್ಣ) ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಬಿಜೆಪಿ ನಾಯಕರುಗಳಿಗೆ ಹೇಗೆ ವಿರೋಧ ಪಕ್ಷ ನಾಯಕರಾಗಿ ಹೇಗೆ ಕೆಲಸ ಮಾಡಬೇಕು ಎಂಬ ಜವಾಬ್ದಾರಿ ಇಲ್ಲದಂತಾಗಿದೆ ರಾಜ್ಯದ ಅಭಿವೃದ್ಧಿ ಮಾಡಲು ವಿರೋಧಪಕ್ಷಗಳು ಬಿಡುತ್ತಿಲ್ಲ. ಬಿಜೆಪಿ ಪಕ್ಷದವರಿಗೆ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ ಎಂದು ಹೇಳಿದ್ದಾರೆ.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಿಯಾಂಕ ಖರ್ಗೆ ಕಾರಣ ಎಂದು .ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಾ ಅವರನ್ನು ರಾಜೀನಾಮೆ ಕೇಳುವುದುಎಷ್ಟು ಸರಿ. ಪ್ರಿಯಾಂಕ ಖರ್ಗೆ ರಂತಹ ನಾಯಕರುಗಳ ಮೇಲೆ ಸುಖ ಸುಮ್ಮನೆ ಆರೋಪ ಮಾಡುವುದು ಒಂದು ರೀತಿ ಬಿಜೆಪಿ ನಾಯಕರಿಗೆ ಚಾಳಿಯಾಗಿದೆ. ದಲಿತ ನಾಯಕನನ್ನು ತೇಜೋವದೆ ಮಾಡುವುದೇ ಬಿಜೆಪಿ ಅಜೆಂಡ.ಇಂತಹ ಗೋಡ್ದು ಆರೋಪಗಳಿಗೆ ಮತ್ತು ರಾಜೀನಾಮೆ ಕೇಳಿದರೆ ಕಾಂಗ್ರೆಸ್ ಪಕ್ಷದಲ್ಲಿರುವ ದಲಿತ ನಾಯಕರುಗಳು ಬೆದರುವುದಿಲ್ಲ ಎಂದು ಹೇಳಿದ್ದಾರೆ.
ಇವರ ಬಳಿಯಲ್ಲಿ ಯಾವುದೇ ಸಾಕ್ಷಿಗಳಿಲ್ಲ, ಯಾವುದೇ ಆಧಾರಗಳಿಲ್ಲ, ಬೇಜವಾಬ್ದಾರಿಯಿಂದ ಸುಖ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇವರ ಉದ್ದೇಶ ರಾಜ್ಯದಲ್ಲಿ ದಲಿತ ನಾಯಕರು ಬೆಳೆಯುವುದು, ದಲಿತ ನಾಯಕರ ನಾಯಕತ್ವ ಮುನ್ನೆಲೆ ಬರುವುದು, ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಇದನ್ನು ಸಹಿಸಿಕೊಳ್ಳುಲು ಸಾಧ್ಯವಾಗದಿದ್ದಾಗ ಇವರನ್ನು ತೇಜೋವದೆ ಮಾಡಲು ಈ ರೀತಿಯಾಗಿ ದಲಿತ ನಾಯಕರುಗಳನ್ನು ಮುಗಿಸುವ ಪ್ರಯತ್ನ ಬಿಜೆಪಿ ನಾಯಕರುಗಳು ಪ್ರಯತ್ನ ಮಾಡುವುದೇ ಬಿಜೆಪಿ ಮತ್ತು ಆರ್ ಎಸ್ ಎಸ್ ಅಜೆಂಡವಾಗಿದೆ ಎಂದರು.
Read also : ಜ್ಞಾನ ಮತ್ತು ಭಕ್ತಿಯ ವಿಚಾರಗಳು ಭಾಗವತದಲ್ಲಿ ಸಮರ್ಥವಾಗಿದೆ : ಪೂಜ್ಯ ಶ್ರೀ ವೇ|| ಪಂ|| ಗೋಪಾಲಾಚಾರ್ ಮಣ್ಣೂರ್