ದಾವಣಗೆರೆ (Davanagere): ವಿವಿಧಡೆ ಬೈಕ್ ಕಳುವು ಮಾಡಿದ್ದ ಇಬ್ಬರು ಕಾನೂನು ಸಂಘರ್ಷಕ್ಕೋಳಗಾದ ಬಾಲಕರನ್ನು ಕೆಟಿಜೆ ನಗರ ಪೊಲೀಸರು ವಶಕ್ಕೆ ಪಡೆದು, 4 ಬೈಕ್ ವಶ ಪಡೆಸಿಕೊಂಡಿದ್ದಾರೆ.
ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿರುವ ಕುರಿತು ಸೆ.7 ರಂದು ಕೆಟಿಜೆ ನಗರದಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಎಎಸ್ಪಿ ವಿಜಯಕುಮಾರ್ ಎಂ.ಸಂತೋಷ್, ಜಿ. ಮಂಜುನಾಥ್ ಹಾಗೂ ನಗರ ಡಿವೈಎಸ್ಪಿ ಮಲ್ಲೆಶ್ ದೊಡ್ಮನಿ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್. ಹೆಚ್.ಎಸ್. ನೇತೃತ್ವದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಸಾಗರ್ ಅತ್ತರವಾಲ ಪ್ರಕರಣದ ಕಾರ್ಯಾಚರಣೆ ನಡೆಸಿ ಭೂಮಿಕಾನಗರ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸಿ ಇಬ್ಬರು ಕಾನೂನು ಸಂಘರ್ಷಕ್ಕೋಳಗಾದ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.
Read also : Davanagere cheating case | ಬಂಗಾರದ ಅಭರಣ ಬಿಡಿಸುವ ನೆಪದಲ್ಲಿ ಮೋಸ : ಆರೋಪಿಗಳ ಬಂಧನ
ಕೆ.ಟಿಜೆ ನಗರ ಪೊಲೀಸ್ ಠಾಣೆಯ 02 ಬೈಕ್, ಭರಮಸಾಗರ ಪೊಲೀಸ್ ಠಾಣೆಯ 01 ಬೈಕ್, ಚಿಕ್ಕಜಾಜೂರು ರೈಲ್ವೆ ಸ್ಟೇಷನ್ ಬಳಿ ಕಳತನ ಮಾಡಿದ 01 ಬೈಕ್
ನಾಲ್ಕು ಪ್ರಕರಣಗಳಲ್ಲಿ ಕಳ್ಳತನ ಒಟ್ಟು 1.50.000/-ರೂ ಬೆಲೆಯ 04 ಬೈಕುಗಳನ್ನು ವಶ ಪಡಿದ್ದಾರೆ.
ಆರೋಪಿತರ ಪತ್ತೆ ಕಾರ್ಯದಲ್ಲಿ ಹಾಗು ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್. ಹೆಚ್.ಎಸ್., ಪಿ.ಎಸ್.ಐ ಸಾಗರ ಅತ್ತರವಾಲ ಹಾಗು ಸಿಬ್ಬಂದಿಗಳಾದ ಸುರೇಶ್ ಬಾಬು, ಪ್ರಕಾಶ ಟಿ, ಮಹಮದ್ ರಫಿ, ಗಿರೀಶ್ ಗೌಡ, ಶಿವರಾಜ್ ಎಮ್ ಎಸ್, ಪುರುಶೋತ್ತಮ, ಸಿದ್ದಪ್ಪ, ಮಂಜಪ್ಪ, ಹನುಮಂತಪ್ಪ.ಎಂ, ಶ್ರೀಮತಿ ಗೀತಾ ರವರುಗಳನ್ನು ಪೊಲೀಸ್ ಅಧೀಕ್ಷಕರಾದ ಉಮಾಪ್ರಶಾಚಿತ್ ಶ್ಲಾಘಿಸಿದ್ದಾರೆ.