ದಾವಣಗೆರೆ (Davanagere) : ಆರೋಗ್ಯ ಇಲಾಖೆಯ ಜಿಲ್ಲಾ ಔಷಧಿ ಉಗ್ರಾಣದಲ್ಲಿ ಫಾರ್ಮಸಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶಿವಾನಂದ ದಳವಾಯಿ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು,
ಜಿಲ್ಲೆಯ ಜಿಲ್ಲಾ ಕನಕ ನೌಕರರ ಬಳಗದ ಸರ್ವ ಸದಸ್ಯರ ಸಭೆಯನ್ನು ಡಿ.20 ಶುಕ್ರವಾರ ಸಂಜೆ ಕುರುಬರ ವಿದ್ಯಾವರ್ಧಕ ಸಂಘ (ಕುರುಬರ ಹಾಸ್ಟೆಲ್) ಹದಡಿ ರೋಡ್ ದಾವಣಗೆರೆ ಇಲ್ಲಿ ಕರೆಯಲಾಗಿತ್ತು,
ಗೌರವಾಧ್ಯಕ್ಷರಾಗಿ ಹಾಲೇಶಪ್ಪ , ಕಾರ್ಯಾಧ್ಯಕ್ಷರಾಗಿ ನಾಗೇಶ್ ಗೌಡ್ರು ವಿ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಡಿ ಎನ್, ಖಜಾಂಚಿಯಾಗಿ ಜೆ ಆರ್ ಶಿವಲಿಂಗಪ್ಪ ಶಿಕ್ಷಕರು, ಹಿರಿಯ ಉಪಾಧ್ಯಕ್ಷರಾಗಿ ನಾಗಪ್ಪ ಜಗಳೂರು ಹಾಗೂ ಉಪಾಧ್ಯಕ್ಷರುಗಳಾಗಿ ಪದ್ದಪ್ಪ ಶಿಕ್ಷಕರು ಹರಿಹರ , ಗುರುಮೂರ್ತಿ ಎಸ್ ಹೆಚ್ ಶಿಕ್ಷಕರು ಜಗಳೂರು ಹಾಗೂ ಉಮೇಶ್ ಪಿಡಿಒ, ಸೋಮಣ್ಜ , ಜಂಟಿ ಕಾರ್ಯದರ್ಶಿಯಾಗಿ ಕುಬೇಂದ್ರ ಕುಮಾರ್, ಸಂಘಟನಾ ಕಾರ್ಯದರ್ಶಿ ರಂಗನಾಥ್ ಹಾಗೂ ಮಂಜುನಾಥ್ ಶಿಕ್ಷಕರು ಹರಿಹರ, ಹಾಗೂ ಗೌರವ ಸಲಹೆಗಾರರಾಗಿ ಜಿಲ್ಲಾ ಸರಕಾರಿ ನೌಕರರ ಸಂಘದ ಖಜಾಂಚಿ ಬಿ, ಆರ್ ತಿಪ್ಪೇಸ್ವಾಮಿ ಮತ್ತು ಹರಿಹರ ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್ ಹಾಗೂ ಹೊನ್ನಾಳಿಯ ಶಿವ ಪದ್ಮ ಮತ್ತು, ಹೆಚ್ ಬಸವರಾಜ ಜಿಲ್ಲಾ ಪಂಚಾಯತ್, ಮಾಧ್ಯಮ ಸಲಹೆಗಾರರಾಗಿ ಮಲ್ಲೇಶ್ ಬಿ ಬಿ ಹಾಗೂ ಬಿ. ಚೆನ್ನವೀರಯ್ಯ.
ಪದಾಧಿಕಾರಿಗಳು ಜಿಲ್ಲಾಧ್ಯಕ್ಷರನ್ನು ಸರ್ವಾನು ಮತದಿಂದ ಆಯ್ಕೆ ಮಾಡಿದ ಹಿರಿಯ ನಿವೃತ್ತ ನೌಕರರುಗಳಾದ ಆನಂದಪ್ಪ ಬಾಗುರ , ನೀಲಗಿರಿಯಪ್ಪ ಎಂ. ಡಿ, ದಳವಾಯಿ ಎಂ ಎನ್ ಇಂಜಿನಿಯರ್ ಹಾಗೂ ಜಿ ಸಿ ಬಸವರಾಜಪ್ಪ ಮಾಜಿ ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷರು , ಇವರೆಲ್ಲರ ಉಪಸ್ಥಿತಿಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಿ ಜಿ ಸಿ ಬಸವರಾಜಪ್ಪ ಘೋಷಣೆ ಮಾಡಿದರು.
Read also : ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ : ಸಚಿವ ಸಂಪುಟದಿಂದ ಅಮಿತ್ ಷಾ ವಜಾಗೊಳಿಸಿ